Homeಕರ್ನಾಟಕಸಭಾಧ್ಯಕ್ಷನಾಗಿ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲ್ಲ: ಯು ಟಿ ಖಾದರ್‌

ಸಭಾಧ್ಯಕ್ಷನಾಗಿ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲ್ಲ: ಯು ಟಿ ಖಾದರ್‌

ಸದನದ ನಿಯಮಾವಳಿ ಪ್ರಕಾರವೇ ಕಲಾಪ ನಡೆಸುತ್ತೇನೆ. ಸ್ಪೀಕರ್ ಆಗಿ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆಯಲ್ಲ. ಆರೋಪ, ಪ್ರತ್ಯಾರೋಪ ಸಹಜ. ಆದರೆ, ಅಜೆಂಡಾ ಪ್ರಕಾರ ಸದನ ನಡೆಯಲಿದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್‌ ಅವರು ಹೇಳಿದರು.

ಮುಡಾ ಹಗರಣ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಕೋರಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ ಬಗ್ಗೆ ಸದನದಲ್ಲಿ ಸಭಾಧ್ಯಕ್ಷರು ಮೌನ ಮುರಿದು ಮಾತನಾಡಿದರು.

“ಆಡಳಿತ ಮತ್ತು ವಿಪಕ್ಷದವರ ಎಲ್ಲ ಚರ್ಚೆಗೆ ಅವಕಾಶ ನೀಡಿದ್ದೇವೆ. ತನಿಖೆ ನಡೆಯುತ್ತಿರುವಾಗಲೇ ವಾಲ್ಮೀಕಿ ನಿಗಮ ಹಗರಣದ ಚರ್ಚೆ ನಡೆದಿದೆ. ಆ ಚರ್ಚೆಯಲ್ಲೇ ಸುಮಾರು ನಾಲ್ಕೈದು ದಿನ ಮುಗಿದು ಹೋಗಿದೆ. ಇನ್ನೂ ಮಸೂದೆಗಳ ಮಂಡನೆ ಬಾಕಿ ಇವೆ. ಹೀಗೆಯೇ ಮುಂದುವರಿದರೆ ಕಷ್ಟವಾಗುತ್ತದೆ” ಎಂದರು.

ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ: ಅಶ್ವತ್ಥನಾರಾಯಣ

“ಮುಡಾ ಹಗರಣ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಸರ್ಕಾರ ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಮುಂದುವರಿಯಲಿದೆ. ಸದನ ಮುಕ್ತಾಯವಾಗುವವರೆಗೂ ಅಹೋರಾತ್ರಿ ಧರಣಿ ಮುಂದುವರಿಯಲಿದೆ” ಎಂದು ಶಾಸಕ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

“ಹಗರಣದ ಬಗ್ಗೆ ಸವಿಸ್ತಾರವಾಗಿ ಜನರಿಗೆ ತಿಳಿಸಬೇಕು. ಹಾಗಾಗಿ ಚರ್ಚೆಗೆ ಅವಕಾಶ ನೀಡಬೇಕು. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments