Homeಕರ್ನಾಟಕನಂದಿನಿ ಹಾಲಿನ ದರ ಹೆಚ್ಚಿಸಿದ ಕೆಎಂಎಫ್; ಪ್ರತಿ ಲೀಟರ್‌ಗೆ ಎರಡು ರೂಪಾಯಿ ಏರಿಕೆ

ನಂದಿನಿ ಹಾಲಿನ ದರ ಹೆಚ್ಚಿಸಿದ ಕೆಎಂಎಫ್; ಪ್ರತಿ ಲೀಟರ್‌ಗೆ ಎರಡು ರೂಪಾಯಿ ಏರಿಕೆ

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಹಾಲಿನ ದರ ಹೆಚ್ಚಳ ಮಾಡಿದ್ದು, ಪ್ರತಿ ಲೀಟರ್‌ಗೆ ಎರಡು ರೂ. ಏರಿಕೆ ಮಾಡಲಾಗಿದೆ.

ಸತತ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹಾಲಿನಜ ದರ ಏರಿಕೆ ಕೂಡ ಮತ್ತೊಂದು ಆಘಾತವಾಗಿದೆ. ಈ ಪರಿಷ್ಕೃತ ದರವು ಬುಧವಾರದಿಂದಲೇ ಜಾರಿಗೆ ಬರಲಿದೆ. ಮೊಸರು, ಮಜ್ಜಿಗೆ ಸೇರಿದಂತೆ ಇತರೆ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ.

“1,000 ಮಿ.ಲೀ ಹಾಲಿಗೆ 50 ಮಿಲೀ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು ಬುಧವಾರದಿಂದ 46 ರೂ ಆಗಲಿದೆ. ಹಾಗೆಯೇ 22 ರೂ ದರವಿರುವ 550 ಮಿ.ಲೀ ಪ್ಯಾಕೆಟ್ ಹಾಲು, 24 ರೂ.ಗೆ ಮಾರಾಟವಾಗಲಿದೆ” ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್ ಅವರು ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಕರ್ನಾಟಕ ಹಾಲು ಮಂಡಳಿಯು ದೇಶದಲ್ಲಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಪ್ರತಿ ನಿತ್ಯ 98.17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿಯೇ ಇದು 1 ಕೋಟಿ ಲೀಟರ್ ಸಂಗ್ರಹದ ಮೈಲುಗಲ್ಲನ್ನು ತಲುಪಲಿದೆ. ಇದು ಹೊಸ ದಾಖಲೆಯಾಗಲಿದೆ. ಇದಕ್ಕೆ ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಕಾರಣ” ಎಂದು ಹೇಳಿದ್ದಾರೆ.

ಹಾಲಿನ‌ ಹೊಸ ದರ ಹೇಗಿದೆ?

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments