Homeಕರ್ನಾಟಕಮುಸ್ಲಿಂ ಮೀಸಲಾತಿ | ಮೋದಿ ಸುಳ್ಳು ಹೇಳಿ, ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ರವಿವರ್ಮ ಕುಮಾರ್‌

ಮುಸ್ಲಿಂ ಮೀಸಲಾತಿ | ಮೋದಿ ಸುಳ್ಳು ಹೇಳಿ, ತಪ್ಪು ದಾರಿಗೆ ಎಳೆಯುತ್ತಿದ್ದಾರೆ: ರವಿವರ್ಮ ಕುಮಾರ್‌

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ ಕೊಡಲಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿಕೆ ನೀಡಿದ್ದಾರೆ. ಇದು ಮೋದಿಯ ಮಹಾ ಸುಳ್ಳು ಎಂದು ಮಾಜಿ ಅಡ್ವೋಕೆಟ್ ಜನರಲ್ ರವಿವರ್ಮ ಕುಮಾರ್‌ ಹೇಳಿದರು.

ಕರ್ನಾಟಕ ಶೋಷಿತ ಸಮುದಾಯಗಳ ಮಹಾಒಕ್ಕೂಟ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ಮೋದಿಯವರು ತಪ್ಪು ದಾರಿಗೆ ಏಳೆಯುವ ಪ್ರಯತ್ನ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“1874ರಲ್ಲಿ ಮೀಸಲಾತಿ ಬಂತು. 1876ರಲ್ಲಿ ಜಾತಿ ಜನಗಣತಿ ನಡೆಯಿತು. ಅದರ ಆಧಾರದ ಮೇಲೆ ಮೀಸಲಾತಿ ಒಡೆಯರ್ ಮೀಸಲಾತಿ ಕೊಟ್ಟರು. 1874ರಲ್ಲಿ 10 ಹುದ್ದೆಗಳಲ್ಲಿ ಬ್ರಾಹ್ಮಣ ರಿಗೆ 2 ಹುದ್ದೆ/ಉಳಿದ 8 ಹುದ್ದೆ ಮುಸ್ಲಿಂ ಮತ್ತು ಇತರರಿಗೆ ಕೊಡಲಾಯಿತು. 1874ರಿಂದ ಮುಸ್ಲಿಂ ರಿಗೆ ಮೀಸಲಾತಿ ಇದೆ. ಈ ಸತ್ಯವನ್ನು ಮರೆಮಾಚಿ ಸುಳ್ಳು ಹೇಳಲಾಗುತ್ತಿದೆ” ಎಂದರು.

ಮೀಸಲಾತಿ ಬದಲಾವಣೆ ಬಗ್ಗೆ ಈ ಸರ್ಕಾರ ಎನೂ ಮಾಡಿಲ್ಲ

“ದೇವರಾಜ್ ಅರಸು ಸರ್ಕಾರ 1972ರಲ್ಲಿ ಹಾವನೂರು ಆಯೋಗ ಮಾಡಿದೆ. 1975ರಲ್ಲಿ ಆಯೋಗ ವರದಿ ಸಲ್ಲಿಕೆ ಮಾಡಿತು. ವರದಿಗೆ ವಿರೋಧ – ಪರ ಅಭಿಪ್ರಾಯ ಬಂತು. 1977ರಲ್ಲಿ ಹಾವನೂರು ಆಯೋಗದ ವರದಿ ಜಾರಿ ಮಾಡಲಾಯಿತು. ದೇವರಾಜ್ ಅರಸು ಅವರು ವರದಿ ಜಾರಿ ಮಾಡಿ‌ ಹಿಂದುಳಿದವರಿಗೆ ಮೀಸಲಾತಿ ಕೊಟ್ಟರು. ಜೊತೆಗೆ ಮುಸ್ಲಿಂರನ್ನು ಹಿಂದುಳಿದ ಜಾತಿ ಅಂತ ಮೀಸಲಾತಿ ಕೊಡಲಾಯಿತು” ಎಂದು ವಿವರಿಸಿದರು.

ಮುಸ್ಲಿಮರಿಗೆ ಕೊಟ್ಟ ಮೀಸಲಾತಿಗೆ ಸುಮಾರು 150ವರ್ಷ ಇತಿಹಾಸವಿದೆ. ಇದರ ವಿರುದ್ದ ಕೋ ಚನ್ನಬಸಪ್ಪ ಮೊಕದ್ದಮೆ ಹೂಡಿದರು. ಲಿಂಗಾಯತ ಪರ ವಾದ ಮಂಡಿಸಿದರು. ಸೋಮಶೇಖರ್ ಎಂಬುವರು ವಾದಿಯಾಗಿದ್ದರು. ಸೋಮಶೇಖರ್ ಕೇಸ್ ಅಂತ ಕರೆಯಲಾಗ್ತಿದೆ. 1979ರಲ್ಲಿ ಹೈಕೋರ್ಟ್ ಮುಸ್ಲಿಂ ಮೀಸಲಾತಿ ಪರ ತೀರ್ಪು ಕೊಟ್ಟಿತು. ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಸುಪ್ರೀಂ ಕೋರ್ಟ್ ಸಹ ಮುಸ್ಲಿಂ ಮೀಸಲಾತಿ ಎತ್ತಿಹಿಡಿಯಿತು” ಎಂದರು.

“ಮೋದಿಯವರು ಸುಳ್ಳು ಹೇಳುತ್ತಿದ್ದಾರೆ. ಇದು ಈಗಿನ ಮೀಸಲಾತಿ ಅಲ್ಲ. ಇದು 150 ವರ್ಷಗಳಿಂದ ಕೊಡಲಾಗಿದೆ. ಮುಸ್ಲಿಂರಿಗೆ ಶೇ.4ಮೀಸಲಾತಿ ರಾಮಕೃಷ್ಣ ಹೆಗಡೆ ಸರ್ಕಾರ ಮಾಡಿದ್ದು. ಲಿಂಗಾಯತ ರಿಗೆ ಹಿಂದುಳಿದ 3ಬಿ ಅನ್ವಯ ಮೀಸಲಾತಿ ಕೊಡಲಾಯಿತು. 2ಬಿ ಅನ್ವಯ ಮುಸ್ಲಿಂ ರಿಗೆ ಮೀಸಲಾತಿ ನೀಡಲಾಯಿತು. ಇದು ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ” ಎಂದರು.

“ದೇವೆಗೌಡರು ತಮ್ಮ ಸರ್ಕಾರದಲ್ಲಿ ಈ ಆದೇಶ ಮಾಡಿದ್ದು. ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಶೆಟ್ಟರ್ ಸರ್ಕಾರ ಈ ಮೀಸಲಾತಿಯನ್ನು ಮುಂದುವರಿಸಲಾಗಿದೆ. ಧರ್ಮದ ಆಧಾರಿತ ಮುಸ್ಲಿಂ ಮೀಸಲಾತಿ ಕೊಟ್ಟಿಲ್ಲ, ಇದು ಸುಳ್ಳು” ಎಂದರು.

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹಂಸರಾಜ್ ಗಂಗಾರಾಮ್ ಅಹೀರ್ ಬಿಜೆಪಿ ಬಾಲಬುಡುಕ. ಚುನಾವಣೆಯಲ್ಲಿ ಸೋತವನು ಅವನು. ಆತನಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ಈಗ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಆಗಿದ್ದಾರೆ. 1993ರಲ್ಲಿ ಆಯೋಗ ಅಸ್ತಿತ್ವಕ್ಕೆ ಬಂದಿದೆ.
ಯಾವತ್ತೂ ರಾಷ್ಟ್ರೀಯ ಆಯೋಗ ಕರ್ನಾಟಕ ಮೀಸಲಾತಿ ಬಗ್ಗೆ ಚಕಾರ ಎತ್ತಿಲ್ಲ” ಎಂದು ಕಿಡಿಕಾರಿದರು.

“ಮುಸ್ಲಿಂರಿಗೆ ಕೊಟ್ಟ ಮೀಸಲಾತಿ ಯನ್ನು ಬೊಮ್ಮಾಯಿ ಸರ್ಕಾರ ಕಿತ್ತು ಹಾಕಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಯಿತು. ಈ ಪ್ರಕರಣದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರ, ಮೀಸಲಾತಿ ಆದೇಶ ಜಾರಿ ಮಾಡಲ್ಲ ಅಂತ ಹೇಳಿತು. ಅದು ಇನ್ನೂ ಕೋರ್ಟ್ ನಲ್ಲಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments