Homeಕರ್ನಾಟಕಮಾಜಿ ಸಿಎಂಗೆ ಅವರ ಅಶ್ಲೀಲ ವಿಡಿಯೋ ತೋರಿಸಿ ಮುನಿರತ್ನ ಮಂತ್ರಿಯಾಗಿದ್ದರು: ಸಂತ್ರಸ್ತೆ ಆರೋಪ

ಮಾಜಿ ಸಿಎಂಗೆ ಅವರ ಅಶ್ಲೀಲ ವಿಡಿಯೋ ತೋರಿಸಿ ಮುನಿರತ್ನ ಮಂತ್ರಿಯಾಗಿದ್ದರು: ಸಂತ್ರಸ್ತೆ ಆರೋಪ

ಮಾಜಿ ಮುಖ್ಯಮಂತ್ರಿಯನ್ನು ಬಿಜೆಪಿ ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಆ ವಿಡಿಯೋ ಇಟ್ಟುಕೊಂಡೇ ಮಂತ್ರಿಯಾಗಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನ ರಾಜಭವನ ರಸ್ತೆಯ ಖಾಸಗಿ ಹೋಟೆಲ್​​ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂತ್ರಸ್ತೆ, “ಮಾಜಿ ಮುಖ್ಯಮಂತ್ರಿಗಳ ಹನಿಟ್ರ್ಯಾಪ್ ವಿಡಿಯೋ‌ ಅವರ ಬಳಿಯಿದೆ. ಆ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮೂಲಕ ಮುನಿರತ್ನ ಮಂತ್ರಿಯಾಗಿದ್ದರು” ಎಂದು ದೂರಿದ್ದಾರೆ.

ಈ ಮೂಲಕ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಸ್ಫೋಟಕ ಸಂಗತಿಗಳನ್ನು ಸಂತ್ರಸ್ತೆ ಹೊರ ಹಾಕಿದ್ದಾರೆ.

“2020ರಲ್ಲಿಮಮತಾ, ವೆಂಕಟೇಶ್ ಎಂಬುವರ ಮೂಲಕ ಮುನಿರತ್ನ ಪರಿಚಯವಾಗಿದ್ದಾರೆ. ಒಂದು ದಿನ ನನಗೆ ವಿಡಿಯೋ ಕರೆ ಮಾಡಿದ್ದರು. ನನ್ನ ಕರೆಯಿಸಿಕೊಂಡು ಗೋದಾಮಿನ ಬಳಿ ಕರೆದುಕೊಂಡು ಹೋಗಿ, ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಅವರಿಗೆ ಜಾಮೀನು ಸಿಕ್ಕು ಹೊರ ಬಂದರೆ ಅವರಿಂದ ನನಗೆ ಜೀವ ಭಯ ಇದೆ” ಎಂದು ಆರೋಪಿಸಿದ್ದಾರೆ.

ಈಗಾಗಲೇ ದೂರಿನಲ್ಲಿ ಉಲ್ಲೇಖ

“ಮುನಿರತ್ನ ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ. ಅದನ್ನು ಇಟ್ಟುಕೊಂಡು ಅವರು ರಾಜಕೀಯ ಎದುರಾಳಿಗಳನ್ನು ಹಣಿಯುತ್ತಿದ್ದಾರೆ. ಜತೆಗೆ, ರಾಜಕೀಯ ಎದುರಾಳಿಗಳನ್ನು ಮಣಿಸಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು” ಎಂದು ಸಂತ್ರಸ್ತೆ ಈಗಾಗಲೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments