Homeಕರ್ನಾಟಕಮುಡಾ ಅಕ್ರಮ | ಸಿದ್ದರಾಮಯ್ಯ ಅವರನ್ನು ನಾನು ಈಗಲೂ ಭ್ರಷ್ಟ ಅನ್ನಲ್ಲ: ಮಾಜಿ ಸಂಸದ ಪ್ರತಾಪ್‌...

ಮುಡಾ ಅಕ್ರಮ | ಸಿದ್ದರಾಮಯ್ಯ ಅವರನ್ನು ನಾನು ಈಗಲೂ ಭ್ರಷ್ಟ ಅನ್ನಲ್ಲ: ಮಾಜಿ ಸಂಸದ ಪ್ರತಾಪ್‌ ಸಿಂಹ

ಸಿಎಂ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ನಾನು ಈಗಲೂ ಅವರನ್ನು ಭ್ರಷ್ಟ ಅನ್ನಲ್ಲ. ರಾಜ್ಯದಲ್ಲಿ ಸಿಎಂ ಆದವರಿಗೆ ಹೋಲಿಸಿದ್ರೆ ಸಿದ್ದರಾಮಯ್ಯ ಅಷ್ಟೇನೂ ಆಸ್ತಿವಂತರಲ್ಲ. ಯಕಶ್ಚಿತ್ 14 ಸೈಟುಗಳಿಗೆ ತಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳುವುದು ಬೇಡ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಸಲಹೆ ನೀಡಿದ್ದಾರೆ.

ಮೈಸೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಮುಡಾ ಸೈಟ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಸೈಟು ಹಿಂತಿರುಗಿಸಿ, ಒಂದೊಳ್ಳೆ ಮೇಲ್ಪಂಕ್ತಿ ಹಾಕಲಿ. ನೊಣ ತಿಂದು ಜಾತಿ ಕೆಡಿಸಿಕೊಂಡಂತೆ ಸಿದ್ದರಾಮಯ್ಯ ಅವರಿಗೆ ಕಪ್ಪು ಚುಕ್ಕೆ ಬಾರದಿರಲಿ” ಎಂದರು.

“ಕೂಡಲೇ ಮುಡಾಕ್ಕೆ ಸೈಟ್ ಸೆರೆಂಡರ್ ಮಾಡಿ ಘನತೆ ಉಳಿಸಿಕೊಳ್ಳಲಿ. ಸಂತೋಷ್ ಹೆಗ್ಡೆ, ಎನ್.ಕುಮಾರ್ ಅವರಂಥ ದಕ್ಷ ನ್ಯಾಯಮೂರ್ತಿಗಳಿಂದ ಮುಡಾ ಹಗರಣ ತನಿಖೆ ಮಾಡಿಸಲಿ. ಅವರ ಗಮನಕ್ಕೆ ಬಾರದೆ ಅವರ ಬಾಮೈದ ತಪ್ಪು ಮಾಡಿರಬಹುದು. ಅವರು ಸೈಟು ಹಿಂತಿರುಗಿಸಿ, ಒಂದೊಳ್ಳೆ ಮೇಲ್ಪಂಕ್ತಿ ಹಾಕಲಿ. ಸಿದ್ದರಾಮಯ್ಯ ಅವರ ಅತೀರ್ಮಾನದಿಂದ 4 ಸಾವಿರ ಕೋಟಿ ರೂ. ಮುಡಾ ಲಾಭ ಬರುತ್ತದೆ” ಎಂದು ಮನವಿ ಮಾಡಿದರು.

“ಸಿದ್ದರಾಮಯ್ಯ ಅವರಿಗೆ ಕಾಳಜಿ, ಪ್ರೀತಿ, ಗೌರವದಿಂದ ಸಲಹೆ ಕೊಟ್ಟಿದ್ದೆ. ಅದನ್ನೂ ಅರ್ಥ ಮಾಡಿಕೊಳ್ಳದೆ ಮರಿಗೌಡನಂಥ ಬಕ್ರಗಳನ್ನು ಜತೆಗಿಟ್ಟುಕೊಂಡಿದ್ದಾರೆ. ಮೈಸೂರಿನ ಡಿಸಿಯಾಗಿದ್ದ ಶಿಖಾ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಒಂದೂವರೆ ತಿಂಗಳು ತಲೆ ಮರೆಸಿಕೊಂಡಿದ್ದ. ಅಂಥ ವ್ಯಕ್ತಿಯನ್ನು ಮುಡಾ ಅಧ್ಯಕ್ಷನನ್ನಾಗಿ ಮಾಡಿದ್ದಾರೆ” ಎಂದರು.

“ನಾನು ಸಂಸದನಾಗಿದ್ದೆ. ಜಿ ಕೆಟಗರಿ ಸೈಟ್‌ನಲ್ಲಿ ಕಾನೂನಾತ್ಮಕ ಸಿಆರ್‌ ಕೊಡಿ ಅಂತ ಕೇಳಿದ್ದೆ. ಜುಜುಬಿ ಶೇ.25 ರಷ್ಟು ದಂಡ ಉಳಿಸಲು ಹೋಗಿಲ್ಲ. ಕಾನೂನು ರೀತಿ ಇಲ್ಲ ಎಂದು ನಾನೇ ಮುಡಾ ಆಯುಕ್ತರಿಗೆ ಹೇಳಿ ರದ್ದು ಮಾಡಿಸಿದ್ದೆ. ನಾನು ಕಟ್ಟಬೇಕಿರೋದು ಸಾವಿರ, ಒಂದೆರಡು ಲಕ್ಷ ರೂ. ದಂಡ. ಅದಕ್ಕೂ ಕೋಟ್ಯಂತರ ರೂ. ಮುಡಾ 50: 50 ಹಗರಣಕ್ಕೂ ಏನು ಸಂಬಂಧ” ಎಂದು ಪ್ರಶ್ನಿಸಿದರು.

ಪಾಲಿಟಿಕ್ಸ್ ನಲ್ಲಿ ಮುಂದೆ ಏನು ಮಾಡ್ತೀವಿ ಹೇಳ್ಬಾರ್ದು

“ಪಾಲಿಟಿಕ್ಸ್ ನಲ್ಲಿ ಮುಂದೆ ಏನು ಮಾಡ್ತೀವಿ ಎಂಬುದನ್ನು ಹೇಳಬಾರದು. ಹೇಳಿದರೆ ಕೆಲವರು ಅದಕ್ಕೂ ಬೇರೆ ಸ್ಕೀಂ ಹಾಕಿ ಬಿಡುತ್ತಾರೆ. ತಾಯಿ ಚಾಮುಂಡಿಯೇ ನನಗೆ ಮುಂದಿನ ದಾರಿ ತೋರಿಸುತ್ತಾಳೆ. ನಾನು ಜನರಿಂದ ತಿರಸ್ಕೃತನಾದ ವ್ಯಕ್ತಿಯಲ್ಲ‌. ಏನೋ ಕೆಲವರಿಂದ ಟಿಕೆಟ್ ತಪ್ಪಿತು. ಹಾಗಂತ ಇದೇ ಅಂತಿಮವಲ್ಲ” ಎಂದರು.

“ಡಿ ಕೆ ಶಿವಕುಮಾರ್ ಸಿಎಂ ಆದರೂ ಖುಷೀನೆ. ಅವರು ಸಹ ಹಳೇ ಮೈಸೂರು ಭಾಗದವರೆ. ಸಿದ್ದರಾಮಯ್ಯ ಸಹ ಮೈಸೂರಿನವರೆ. ಅವರು ಬೇರೆ ಪಕ್ಷದವರು ಆಗಿರಬಹುದು, ಆದರೆ ಅವರು ಮೈಸೂರಿನವರು ಎಂಬ ಹೆಮ್ಮೆ ಇದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments