ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ಗೆ ಇಡಿ ಸಮನ್ಸ್ಗೆ ನೀಡಿದ್ದ ತಡೆಯಾಜ್ಞೆ ವಿಸ್ತರಣೆಯಾಗಿದೆ.
ಇಡಿ ನೀಡಿರುವ ಸಮನ್ಸ್ ರದ್ದುಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಹೀಗಾಗಿ ಫೆ.20ರ ರವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇದರಿಂದ ಸಿಎಂ ಪತ್ನಿ ಹಾಗೂ ಭೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ವಾದ ಮಂಡಿಸಿದ್ದು, ಇಡಿ ಸಮನ್ಸ್ ಜಾರಿಗೊಳಿಸಿದಾಗ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ಈ ಬಗ್ಗೆ ಸುಪ್ರೀಂಕೋರ್ಟ್ ನ ಇತ್ತೀಚಿನ ತೀರ್ಪು ಇದ್ದು, ಆರೋಪಿಗೆ ಸಮನ್ಸ್ ಜಾರಿಗೊಳಿಸಬೇಕೆಂಬ ನಿಯಮವಿಲ್ಲ ಎಂದರು.
ಸಚಿವ ಭೈರತಿ ಸುರೇಶ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಇಡಿ ತನಿಖಾಧಿಕಾರಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳು ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆ.14 ಸೈಟ್ ಹಂಚಿಕೆಗೂ ಭೈರತಿ ಸುರೇಶ್ ಗೂ ಸಂಬಂಧವಿಲ್ಲ. ಮುಡಾದಲ್ಲಿ ಭೈರತಿ ಸುರೇಶ್ ಯಾವುದೇ ಹುದ್ದೆ ವಹಿಸಿಕೊಂಡಿಲ್ಲ. ಹೀಗಾಗಿ ಇಡಿ ಸಮನ್ಸ್ ಕಾನೂನುಬಾಹಿರ” ಎಂದು ಮನವಿ ಮಾಡಿದರು.
ನಗರಾಭಿವೃದ್ಧಿ ಸಚಿವರಾಗಿರುವುದರಿಂದಲೇ ಸಮನ್ಸ್ ನೀಡರಬಹುದಲ್ಲವೇ ಎಂದು ಹೈಕೋರ್ಟ್ ಜಡ್ಜ್ ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ವಕೀಲ ಸಿ.ವಿ.ನಾಗೇಶ್, “ಇಡಿ ಯಾವುದೇ ಕಾರಣ ನೀಡದೇ ಸಮನ್ಸ್ ಜಾರಿಗೊಳಿಸಿದೆ. 14 ಸೈಟ್ ಹಂಚಿಕೆ ವಿಚಾರದಲ್ಲಿ ಭೈರತಿ ಸುರೇಶ್ ಪಾತ್ರವಿಲ್ಲ. ತಂಗಿ, ಮಗಳು, ಅಳಿಯ ಸಂಬಂಧಿಗಳ ಬ್ಯಾಂಕ್ ಅಕೌಂಟ್ ಕೇಳಿದ್ದಾರೆ. ಇನ್ನೂ ಮೊಮ್ಮಕ್ಕಳಲು. ಹೀಗಾಗಿ ಮೊಮ್ಮಕ್ಕಳ ವಿವರ ಕೇಳಿಲ್ಲ. ಐಟಿ ಅಧಿಕಾರಿಗಳು ಕೇಳಿದ್ದರೇ ಹೇಳಬಹುದು, ಇ.ಡಿಗಲ್ಲ” ಎಂದು ಇಡಿಯ ಸಮನ್ಸ್ ನ ನಮೂನೆ ಉಲ್ಲೇಖಿಸಿದರು.
ಸಿಎಂ ಪತ್ನಿ ಪರ ವಕೀಲ ಸಂದೇಶ್ ಚೌಟ ವಾದ
ಇಡಿ ಸರ್ಚ್ ಮತ್ತು ಸೀಜ್ ನಲ್ಲಿ ಯಾವುದೇ ದಾಖಲೆ ಸಿಕ್ಕಿಲ್ಲ. ಏನೂ ಸಿಗದೇ ಇಡಿ ಡಿ.ಬಿ.ನಟೇಶ್ ಮೊಬೈಲ್ ಸೀಜ್ ಮಾಡಿದ್ದರು. ಇಡಿ ಸಮನ್ಸ್ ನೀಡುವ ಮುನ್ನ ಪ್ರಕ್ರಿಯೆ ಪಾಲಿಸಿಲ್ಲ. ಅಕ್ರಮ ಹಣ ವರ್ಗಾವಣೆ ತಡೆಯಲು ಪಿಎಂಎಲ್‌ಎ ಕಾಯ್ದೆ ತರಲಾಗಿದೆ. ಮಾದಕ ದ್ರವ್ಯ ಸಾಗಾಟದಂತಹ ಹಣ ಆರ್ಥಿಕತೆಗೆ ಬರಬಾರದು. ಹೀಗಾಗಿಯೇ ಪಿಎಂಎಲ್‌ಎ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಇಡಿ ಅದನ್ನು ಎಲ್ಲ ಕೇಸ್‌ಗೂ ಅನ್ವಯಿಸುತ್ತಿದೆ ಎಂದು ವಾದ ಮಂಡಿಸಿದರು.
ಹೈಕೋರ್ಟ್ ಜಡ್ಜ್: ಆಕ್ಷೇಪಣೆ ಎಂದು ಸಲ್ಲಿಸುತ್ತೀರೆಂದು ಹೈಕೋರ್ಟ್ ಕೇಳಿದ ಪ್ರಶ್ನಿಗೆ ಇಡಿ ಪರ ಹೆ್ಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಪ್ರತಿಕ್ರಿಯಿಸಿ, ಒಂದೆರಡು ದಿನಗಳಲ್ಲಿ ಆಕ್ಷೇಪಣೆ ಸಲ್ಲಿಸುತ್ತೇವೆ. ಫೆಬ್ರವರಿ 14 ರಂದು ವಾದಮಂಡನೆಗೆ ಸಿದ್ದವೆಂದು ತಿಳಿಸಿದರು.