Homeಕರ್ನಾಟಕಮುಂಗಾರು ಅಧಿವೇಶನ | ಬಿಜೆಪಿ ಅವಧಿಯ 21 ಹಗರಣ ಸದನದಲ್ಲಿ ಬಯಲು

ಮುಂಗಾರು ಅಧಿವೇಶನ | ಬಿಜೆಪಿ ಅವಧಿಯ 21 ಹಗರಣ ಸದನದಲ್ಲಿ ಬಯಲು

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸಂಖ್ಯಾತ ಹಗರಣಗಳು ನಡೆದಿವೆ. ತಿಂದವರು ತಿಂದುಕೊಂಡು ಹೋಗಲಿ ಎಂದು ಬಿಡುವುದಕ್ಕೆ ನಮ್ಮದು ಯಡಿಯೂರಪ್ಪನವರ ಸರ್ಕಾರವಲ್ಲ, ಬದಲಿಗೆ ಬೊಮ್ಮಾಯಿಯವರ ಸರ್ಕಾರವೂ ಅಲ್ಲ. ಅತ್ತ ಮೋದಿ ಸರ್ಕಾರವೂ ಅಲ್ಲ. ಯಾರೇ ತಪ್ಪೆಸಗಿದ್ದರೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಗುಡುಗಿದರು.

ಶುಕ್ರವಾರದ ಅಧಿವೇಶನದಲ್ಲಿ ‘ಮಹರ್ಷಿ ವಾಲ್ಮೀಕಿ ನಿಗಮದ ಹಣ ದುರುಪಯೋಗದ ಕುರಿತ’ ನಿಯಮ 69ರಡಿ ಚರ್ಚೆಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರವನ್ನು ಸದನದ ಮುಂದೆ ಮಂಡಿಸುತ್ತ ಬಿಜೆಪಿಯ ಹಗರಣಗಳನ್ನು ಒಂದೊಂದಾಗಿ ಬಿಚ್ಚಿಟ್ಟರು.

“ಬಗೆದಷ್ಟೂ ಬಿಜೆಪಿ ಅವಧಿಯ ಲೆಕ್ಕ ಹಾಕಲಾಗದಷ್ಟು ಹಗರಣಗಳು ಬಯಲಾಗುತ್ತಲೇ ಇವೆ. ಈ ಹಗರಣಗಳ ಕುರಿತು ವಿವಿಧ ತನಿಖೆಗಳು ನಡೆಯುತ್ತಿವೆ. ಭ್ರಷ್ಟರು ಹಾಗೂ ದುರುಳರು ಜೈಲಿಗೆ ಹೋಗುವ ದಿನಗಳು ದೂರವಿಲ್ಲ” ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಬಿಜೆಪಿ ಸರ್ಕಾರ ಅವಧಿಯ 21 ಹಗರಣಗಳ ಪಟ್ಟಿಯನ್ನು ಸಿಎಂ ಸಿದ್ದರಾಮಯ್ಯ ಅವರು ಲಿಖಿತ ರೂಪದಲ್ಲಿ ಸದನದಲ್ಲಿ ಮಂಡಿಸಿದರು. ಆ ವಿವರ ಇಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments