ದಿನೇಶ್ ಗುಂಡೂರಾವ್ ಕುಟುಂಬದ ಮೇಲೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಯತ್ನಾಳ್ಗೆ ಹೈಕೋರ್ಟ್ ನಾಗಪ್ರಸನ್ನ ಅವರ ಪೀಠ ತರಾಟೆಗೆ ತೆಗೆದುಕೊಂಡಿದೆ.
ಕುಟುಂಬ ಹಾಗೂ ವಯಕ್ತಿಕ ನಿಂಧನೆ ಹೇಳಿಕೆ ಪ್ರಶ್ನೆಸಿ ಕೋರ್ಟ್ ಮೊರೆ ಹೋಗಿದ್ದ ಸಚಿವ ದಿನೇಶ್ ಗುಂಡೂರಾವ್ ಅವರ ಪತ್ನಿ ಟಬು ರಾವ್ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ತಡೆ ಕೋರಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣವನ್ನು ಆಲೀಸಿದ ಜಸ್ಟಿಸ್ ನಾಗಪ್ರಸನ್ನ ಅವರು ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದರು. ಅಲ್ಲದೇ ಶಾಸಕರ ಕೀಳು ಅಭಿರುಚಿಯ ಹೇಳಿಕೆಯನ್ನ ಪ್ರಶ್ನಿಸಿದರು. ನೀವು ಹೇಳಿಕೆ ನೀಡಿದ್ದು ಹೌದೋ ಅಲ್ಲವೋ ಎಂದು ಪ್ರಶ್ನಿಸಿದರು. ಹೇಳಿಕೆ ನೀಡಿದ್ದನ್ನ ಯತ್ನಾಳ್ ಪರ ವಕೀಲ ಒಪ್ಪಿಕೊಂಡರು.
ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಯವರು, ಈ ರೀತಿಯ ಪದ ಬಳಕೆ ಯಾವ ಅರ್ಥ ನೀಡುತ್ತದೆ. ವಯಕ್ತಿಕ ತ್ಯೇಜೋವಧೆಗೆ ನೀವು ಏಕೆ ಇಳಿದಿರಿ. ಇತ್ತಿಚೆಗೆ ಈ ರೀತಿಯ ಹೇಳಿಕೆಗಳು ಮಾಮೂಲಾಗಿವೆ. ಒಂದು ಸಮುದಾಯದ ವಿರುದ್ಧ ಈ ರೀತಿ ಪದಬಳಕೆ ಸರಿಯಲ್ಲ ಎಂದು ಟೀಕಿಸಿದರು. ಒಬ್ಬರು ಪತ್ನಿ ಮುಸ್ಲಿಂ ಆಗಿದ್ದಾಕ್ಷಣ ಈ ರೀತಿಯ ಹೇಳಿಕೆ ನೀಡುವುದೇ?. ಇದು ಸರಿಯಲ್ಲ ಎಂದು ಚಾಟಿ ಬೀಸಿದರು.
ಸ್ವತಃ ಯತ್ನಾಳ್ ಪರ ವಕೀಲ ಸಿ.ವಿ ನಾಗೇಶ್ ಅವರು ಯತ್ನಾಳ್ ಅವರ ಹೇಳಿಕೆಯನ್ನ ಸಮರ್ಥಿಸಲ್ಲ ಎಂದು ಕೋರ್ಟ್ ಮುಂದೆ ತಪ್ಪು ಒಪ್ಪಿಕೊಂಡರು. ಸಚಿವರ ಹೇಳಿಕೆಗೆ ಪ್ರತಿಯಾಗಿ ಯತ್ನಾಳ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಕುಟುಂಬ ನಿಂಧಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದು ಯತ್ನಾಳ್ ಪರ ವಕೀಲರಿ ನ್ಯಾಯಮೂರ್ತಿ ಅವರಿಗೆ ಸಮಜಾಯಿಶಿ ನೀಡಲು ಪ್ರಯತ್ನಿಸಿದರು. ಆದರೆ ಯತ್ನಾಳ್ ಪರ ವಕೀಲರ ವಾದವನ್ನ ಒಪ್ಪದ ಜಸ್ಟೀಸ್ ನಾಗಪ್ರಸನ್ನ ಅವರು ಪ್ರಕರಣಕ್ಕೆ ತಡೆ ನೀಡಲು ನಿರಾಕರಿಸಿದರು.