ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಸಂಗನಕಲ್ಲು,ಸಿರವಾರ, ಚಾಗನೂರು, ಹದ್ದಿನಗುಂಡು, ಟಿ.ಬೂದಿಹಾಳು, ಮತ್ತು ಕಪ್ಪಗಲ್ಲು, ರೈತರ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಎಚ್. ಎಲ್. ಸಿ. ಕಾಲುವೆ ನೀರಿನ ಮೇಲೆ ಅವಲಂಬಿತರಾಗಿದ್ದ ರೈತರಿಗೆ ನೀರಿನ ಅಭಾವ ಉಂಟಾದ ಕಾರಣ ಬಳ್ಳಾರಿ ಗ್ರಾಮಾಂತರ ಶಾಸಕರು ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಅಲ್ಪ ಅವಧಿಗೆ ಕಾಲುವೆಗೆ ನೀರು ಹಾಯಿಸಲು ಮನವಿಗೆ ಸರ್ಕಾರ ಸ್ಪಂದಿಸಿದೆ.
ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಹತ್ತಿರ ಚರ್ಚಿಸಿ ಸಂಭಂದಪಟ್ಟ ಅಧಿಕಾರಿಗಳ ಮೂಲಕ ಮಾತನಾಡಿ ಎಚ್. ಎಲ್. ಸಿ ಕಾಲುವೆಯ 27 ಡಿಸ್ಟಿಬ್ಯೂಟರ್ ಗಳಿಗೆ ಅಲ್ಪ ಅವಧಿಗೆ ನೀರು ಹಾಯಿಸುವ ಮೂಲಕ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ರವರು ರೈತರ ಮತ್ತು ಜಾನುವಾರು ಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದಾರೆ ಎಂದು ರೈತರು ಸಂತೋಷ ವ್ಯಕ್ತಪಡಿಸಿದ್ದಾರೆ.
ರೈತರು ಹೊಲಗಳ ತಮ್ಮ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳು ಕಟಾವು ಅಂತದಲ್ಲಿ ಇದ್ದಾಗ ನೀರಿನ ಅಭಾವ ಕಂಡುಬಂದು ತಾವು ಬೆಳೆದ ಫಸಲು ಕೈತಪ್ಪಿ ಸಾಲದ ಹೊರೆಯಾಗುತ್ತೆ ಎನ್ನುವ ಆತಂಕಕ್ಕೆ ಒಳಗಾಗಿದ್ದರು ಇದನ್ನು ಬಹಳ ಮುಖ್ಯವಾಗಿ ಪರಿಗಣಿಸಿದ ಶಾಸಕ ಬಿ. ನಾಗೇಂದ್ರ ರವರು ಕರ್ನಾಟಕದ ರೈತರ ನೀರಿನ ಪ್ರಮಾಣದ ಕೋಟಾ ಮುಗಿದಿದ್ದರೂ ಸಹ ರಾಜ್ಯ ಸರ್ಕಾರದ ಸಹಾಯ ಪಡೆದು ಆಂಧ್ರ ಪ್ರದೇಶದ ಜಲಸಂಪನ್ಮೂಲ ಸಚಿವರ ಹತ್ತಿರ ಹಾಗೂ ಆಂಧ್ರ ಗಡಿ ಭಾಗದ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಹತ್ತಿರ ಹತ್ತಿರ ನಿರಂತರ ಸಂಪರ್ಕ ಮಾಡಿ ತುಂಗಭದ್ರಾ ಜಲಾಶಯದ ಹಿರಿಯ ಅಧಿಕಾರಿಗೆ ಮಾತನಾಡಿ ಯಾವುದೇ ಕಾರಣಕ್ಕೂ ನಮ್ಮ ಭಾಗದ ರೈತರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದ್ದರು.
ಶಾಸಕ ಬಿ. ನಾಗೇಂದ್ರರವರ ಮನವಿ ಸಲ್ಲಿಸಿದ ತಕ್ಷಣವೇ ತುಂಗಭದ್ರಾ ಜಲಾಶಯದ ಹಿರಿಯ ಅಧಿಕಾರಿಗಳು ಒಟ್ಟು 27 ಡಿಸ್ಟಿಬ್ಯುಟರ್ ಮೂಲಕ 70 ಕೂಸೆಕ್ಸ್ ನೀರನ್ನು ಹಾಯಿಸಲು ತುರ್ತು ಆದೇಶ ಹೊರಡಿಸಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ರೈತರಿಗೆ ಶುಭಸುದ್ದಿ ನೀಡಿದ್ದಾರೆ.
ತಮ್ಮ ಮನವಿಗೆ ಸ್ಪಂದಿಸಿದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮತ್ತು ಆಂಧ್ರಪ್ರದೇಶ ಸರ್ಕಾರದ ಜಲಸಂಪನ್ಮೂಲ ಮಂತ್ರಿಗಳಿಗೆ ಗಡಿ ಶಾಸಕರಿಗೆ ಹಾಗೂ ಆಂಧ್ರ ಮತ್ತು ಕರ್ನಾಟಕದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಶಾಸಕ ಬಿ. ನಾಗೇಂದ್ರ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.