Homeಕರ್ನಾಟಕಸ್ಟೇಜ್ ಆಧಾರದಲ್ಲಿ ಮೆಟ್ರೋ ದರ ಇಳಿಕೆ: ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರ್‌ ರಾವ್‌

ಸ್ಟೇಜ್ ಆಧಾರದಲ್ಲಿ ಮೆಟ್ರೋ ದರ ಇಳಿಕೆ: ಬಿಎಂಆರ್‌ಸಿಎಲ್‌ ಎಂಡಿ ಮಹೇಶ್ವರ್‌ ರಾವ್‌

‘ನಮ್ಮ ಮೆಟ್ರೋ’ ದರ ಏರಿಕೆ ಕುರಿತು ತೀವ್ರ ಜನಾಕ್ರೋಶ ವ್ಯಕ್ತವಾದ ಬಳಿಕ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ (BMRCL) ಎಚ್ಚೆತ್ತುಕೊಂಡಿದ್ದು, ದರ ದುಪ್ಪಟ್ಟಾದ ಕಡೆಗಳಲ್ಲಿ ಪರಿಷ್ಕರಣೆ ನಡೆಸುವುದಾಗಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ಗುರುವಾರ ದಿಢೀರ್‌ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಪ್ರಯಾಣಿಕರ ಹಿತಕ್ಕಾಗಿ ಮೆಟ್ರೋ ದರ ಇಳಿಕೆ ಮಾಡುತ್ತೇವೆ. ಎಲ್ಲೆಲ್ಲಿ ದರ ಡಬಲ್‌ ಆಗಿದೆ, ಅಲ್ಲಿ ದರ ಇಳಿಕೆ ಮಾಡುತ್ತೇವೆ. ಉಳಿದಂತೆ ಶೇ.47ರಷ್ಟು ದರ ಹೆಚ್ಚಳ ಯತಾತ್ಥಿತಿಯಲ್ಲಿರುತ್ತದೆ. ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುವುದು. ಮೆಟ್ರೋ ದರ ಶೇ. 90 ರಿಂದ ಶೇ 100 ರ ವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುವುದು. ಶೇ 60 ದರ ಹೆಚ್ಚಳವಾಗಿರುವಲ್ಲಿ ಸ್ಲ್ಯಾಬ್ ಮರ್ಜ್ ಮಾಡುತ್ತೇವೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ” ಎಂದು ಹೇಳಿದರು.

“ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಒಂದು ವಿಧಾನ ಇದೆ. ಅದರಂತೆಯೇ ದರ ನಿಗದಿ ಸಮಿತಿ ಅಧ್ಯಯನ ನಡೆಸಿ ಮಾಡಿದ ಶಿಫಾರಸಿನ ಮೇರೆಗೆ ದರ ಹೆಚ್ಚಳ ಮಾಡಲಾಗಿದೆ. ದರ ಏರಿಕೆಗೆ ಪ್ರಯಾಣಿಕರ ವಿರೋಧ ಹಿನ್ನೆಲೆಯಲ್ಲಿ ಸಭೆ ಮಾಡಲಾಗಿದೆ. ಕಳೆದ 3 ದಿನಗಳಿಂದ ಬೋರ್ಡ್ ಜೊತೆ ಸಭೆ ನಡೆಸಿದ್ದೇವೆ. ಸಿಎಂ ಹಾಗೂ ಡಿಸಿಎಂ ಸೂಚನೆ ಮೇರೆಗೆ ಸಭೆ ಮಾಡಿದ್ದೇವೆ. ಎಲ್ಲಿ ಅನಿವಾರ್ಯವೋ ಅಲ್ಲಿ ದರ ಇಳಿಕೆ ಮಾಡಬೇಕಾಗುತ್ತದೆ. ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಕಡಿಮೆ ಮಾಡಲು ಪ್ರಯತ್ನಿಸಲಾಗುವುದು” ಎಂದರು.

“ಮೆಟ್ರೋಗೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಲಾಗಿದೆ. ಮೆಟ್ರೋ ಸಿಬ್ಬಂದಿ ವೇತನ, ಇತ್ಯಾದಿ ವಿಚಾರಗಳನ್ನೂ ದರ ಏರಿಕೆ ವೇಳೆ ಗಣನೆಗೆ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಬೆಳಿಗ್ಗೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ (BMRCL)ವ್ಯವಸ್ಥಾಪಕ ನಿರ್ದೇಶಕ ಎಂ. ಮಹಾಬಲೇಶ್ವರ ರಾವ್‌ ಜೊತೆ ಮಾತನಾಡಿ ದರ ಇಳಿಕೆ ಸೂಚನೆ ನೀಡಿದ್ದರು.

“ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ ಬೆಂಗಳೂರು ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಜಾರಿಯಲ್ಲಿ ಕೆಲವು ಸ್ಟೇಜ್‌ಗಳಲ್ಲಿ ದರಗಳು ದ್ವಿಗುಣಗೊಂಡಿವೆ. ಇದು ವೈಪರೀತ್ಯಗಳಿಗೆ ಕಾರಣವಾಗಿದೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ” ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಿದ್ದರಾಮಯ್ಯ ತಿಳಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments