Homeಕರ್ನಾಟಕವೈದ್ಯಕೀಯ ವೆಚ್ಚ | ಒಂದೇ ವರ್ಷದಲ್ಲಿ ಲಕ್ಷ ಲಕ್ಷ ರೂ. ಬಿಲ್‌ ಕ್ಲೈಮ್ ಮಾಡಿಕೊಂಡ ಪರಿಷತ್‌...

ವೈದ್ಯಕೀಯ ವೆಚ್ಚ | ಒಂದೇ ವರ್ಷದಲ್ಲಿ ಲಕ್ಷ ಲಕ್ಷ ರೂ. ಬಿಲ್‌ ಕ್ಲೈಮ್ ಮಾಡಿಕೊಂಡ ಪರಿಷತ್‌ ಸದಸ್ಯರು

2023ರ ಮೇ 1 ರಿಂದ 2024ರ ಜುಲೈವರೆಗೆ ವಿಧಾನ ಪರಿಷತ್ ಸದಸ್ಯರು ಅನಾರೋಗ್ಯದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳಷ್ಟು ವೈದ್ಯಕೀಯ ಬಿಲ್‌ಗಳನ್ನು ಕ್ಲೈಮ್ ಮಾಡಿಕೊಂಡಿದ್ದಾರೆ.

ನೈಜ ಹೋರಾಟಗಾರರ ವೇದಿಕೆ ಮುಖಂಡ ಎಚ್ ಎಂ ವೆಂಕಟೇಶ್ ಅವರು ಆರ್​​ಟಿಐಯಿಂದ ಈ ಮಾಹಿತಿ ಬಹಿರಂಗವಾಗಿದೆ. ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದವರೂ ಸಹ ತಮ್ಮ ಆರೋಗ್ಯಕ್ಕಾಗಿ ಸರ್ಕಾರದಿಂದ ಲಕ್ಷ ಲಕ್ಷ ಹಣ ಕ್ಲೈಮ್​​ ಮಾಡಿದ್ದಾರೆ.

ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ ಅವರು ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 48.70 ಲಕ್ಷ ರೂ. ಹಣ ಖರ್ಚು ಮಾಡಿದ್ದು, ಮೊದಲ ಸ್ಥಾನದಲ್ಲಿದ್ದಾರೆ. ಸಿ ಪಿ ಯೋಗೇಶ್ವರ್ ಎರಡನೇ ಸ್ಥಾನದಲ್ಲಿದ್ದು, 39.64 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಮೂರನೇ ಸ್ಥಾನದಲ್ಲಿದ್ದು, 17.03 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ ಸರ್ಕಾರದ ಹಣವನ್ನು ಖರ್ಚು ಮಾಡಿದ್ದಾರೆ. ಹಿರಿಯ ಶಾಸಕ ಲಕ್ಷ್ಮಣ್ ಸವದಿ ಆರೋಗ್ಯಕ್ಕಾಗಿ 2.41 ಲಕ್ಷ ರೂ. ಹಣವನ್ನು ಕ್ಲೈಮ್​ ಮಾಡಿದ್ದಾರೆ. ಜೆಡಿಎಸ್​ ಸದಸ್ಯ ಟಿ ಎ ಶರವಣ ಕೂಡ 2.14 ರೂಪಾಯಿ ಹಣ ಸರ್ಕಾರದಿಂ ಪಡೆದುಕೊಂಡಿದ್ದಾರೆ.

ಬಿಲ್‌ ಕ್ಲೈಮ್ ಮಾಡಿಕೊಂಡವರ ವಿವರ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments