Homeಕರ್ನಾಟಕಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, 1500 ಕೋಟಿ ರೂ. ಅಕ್ರಮ?

ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, 1500 ಕೋಟಿ ರೂ. ಅಕ್ರಮ?

ಕರ್ನಾಟಕ ಗೃಹ ಮಂಡಳಿ ಯಲಹಂಕ ಉಪನಗರ ಕಚೇರಿಯ ಎಇಇ ಸೈಯದ್ ಅಜ್ಗರ್, ಗೋವಿಂದಯ್ಯ ಟಿ ದಾಸರಹಳ್ಳಿ ಹಾಗೂ ಸತೀಶ್ ಹರಿಣಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಯಲಹಂಕ ನ್ಯೂ ಟೌನ್ ನಿವಾಸಿ ಕೆ ಎಸ್ ಚಂದ್ರಶೇಖರ್ ಆಜಾದ್ ದೂರಿನ ಮೇಲೆ ಈ ದಾಳಿ ಮಾಡಲಾಗಿದೆ.

ಕರ್ನಾಟಕ ಗೃಹ ಮಂಡಳಿ ಕಚೇರಿ ಯಲಹಂಕ ನ್ಯೂ ಟೌನ್ ಸೈಟ್ ನಂಬರ್ 271 ಎ ಸೆಕ್ಟರ್ ಸಂಬಂಧಿಸಿದಂತೆ ದಾಖಲಾತಿಗಳನ್ನು ಸೃಷ್ಟಿಸಿ a1 ಆರೋಪಿಯು a2 ಮತ್ತು a3 ರವರೊಂದಿಗೆ ಸೇರಿಕೊಂಡು ಸರ್ಕಾರಕ್ಕೆ 10 ಕೋಟಿ ರೂಗಳನ್ನು ನಷ್ಟ ಮಾಡಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮೊ ಸo 36/2025 ಕಲo 13(1)(a) r/w 13(2) ಭ್ರಷ್ಟಾಚಾರ ಪ್ರತಿಬಂಧಕ ಅಧಿನಿಯಮ 1988 ( ತಿದ್ದುಪಡಿ ಅಧಿನಿಯಮ 2018 ) ಮತ್ತು 409, 420,468, 471, r/w 120b ಐಪಿಸಿಯಡಿ ದೂರು ದಾಖಲಾಗಿದೆ.

ದಾಳಿ ಮಾಡಿದ ತಂಡಗಳು

1) ಪ್ರದೀಪ್ ಕುಮಾರ್ ಡಿವೈಎಸ್ಪಿ, ಗೋವಿಂದರಾಜು ಮತ್ತು ರಾಜಶೇಖರಯ್ಯ ಪಿ ಐ ರವರುಗಳೊಂದಿಗೆ ಕರ್ನಾಟಕ ಗೃಹ ಮಂಡಳಿ ಯಲಹಂಕ ನ್ಯೂ ಟೌನ್ ಕಚೇರಿಗೆ ವಾರೆಂಟ್ ನೊಂದಿಗೆ ದಾಳಿ ಮಾಡಿ ಸೈಟ್ ನಂಬರ್ 271 ಎ ಸೆಕ್ಟರ್ ಮತ್ತು 238 ಬಿ ಸೆಕ್ಟರ್ ಸಂಬಂಧಿಸಿದಂತೆ ಮೂಲ ಪ್ರತಿಗಳು ಹಾಗೂ ವಿವಿಧ ದಾಖಲಾತಿಗಳನ್ನು ವಶಕ್ಕೆ ಪಡೆದಿದ್ದಾರೆ.

2) ವಸಂತು ಸಿ ಡಿವೈಎಸ್ಪಿ, ಅಡ್ವಿಶಪ್ಪ ಎಸ್ ಗುಡಿಗೊಪ್ಪ ಮತ್ತು ಗೋವಿಂದ ಗೌಡ ಪಾಟೀಲ್ ಪಿ ಐ ರವರುಗಳೊಂದಿಗೆ ಎ1 ಆರೋಪಿ ಸೈಯದ್ ಅಜ್ಗರ್ AEE ಆರ್ ಟಿ ನಗರ ರವರ ಮನೆ ಮೇಲೆ ವಾರೆಂಟ್ ನೊಂದಿಗೆ ದಾಳಿ ನಡೆಸಿ, ಸೈಟ್‌ಗೆ ಸಂಬಂಧಿಸಿದಂತೆ ದಾಖಲೆ ವಶಪಡಿಸಿಕೊಂಡಿದ್ದಾರೆ.

3) ವಿಶ್ವನಾಥ್ ದುಂಡಪ್ಪ ಕಬುರಿ ಮತ್ತು ಬಸವರಾಜ್ ಜಿ ಪುಲಾರಿ ಪಿ ಐ ರವರು ಎ2 ಆರೋಪಿ ಗೋವಿಂದಯ್ಯ ರವರ ಮನೆ ಮೇಲೆ ವಾರೆಂಟ್ ನೊಂದಿಗೆ ದಾಳಿ ಮಾಡಲಾಗಿ ಸೈಟಿಗೆ ಸಂಬಂಧಿಸಿದ ನ್ಯಾಯಾಲಯದಲ್ಲಿ ದಾವೇ ಹೂಡಿದ ದಾಖಲಾತಿಗಳ ಜೆರಾಕ್ಸ್ ಪ್ರತಿಗಳು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments