Homeಕರ್ನಾಟಕಮದ್ಯ ದರ ಇಳಿಕೆ, ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ

ಮದ್ಯ ದರ ಇಳಿಕೆ, ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ

ದುಬಾರಿ ಬೆಲೆಯ ಸ್ಕಾಚ್, ವಿಸ್ಕಿ ಸೇರಿದಂತೆ ಎಲ್ಲ ಪ್ರೀಮಿಯಂ ಮದ್ಯ ಮಾರಾಟ ದರವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ.

ರಾಜ್ಯಾದ್ಯಂತ ನೂತನ ದರಗಳು ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುತ್ತಿದ್ದು, ಎಲ್ಲ ಪ್ರೀಮಿಯಂ ಮದ್ಯದ ದರ ಶೇ.15ರಿಂದ ಶೇ.20ರಷ್ಟು ದರ ಇಳಿಕೆ ಆಗಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಹೋಲಿಸಿದರೆ ನೆರೆಯ ರಾಜ್ಯಗಳಲ್ಲಿ ಪ್ರೀಮಿಯಂ ಮದ್ಯ ಮಾರಾಟದರ ಕಡಿಮೆ ಇದೆ ಇದರಿಂದ ಗಡಿ ಪ್ರದೇಶದ ರಾಜ್ಯದ ಅಂಗಡಿಗಳಲ್ಲಿ ಮಧ್ಯ ಮಾರಾಟವಾಗುತ್ತಿಲ್ಲ ಅಲ್ಲದೆ ಬಾರಿ ಪ್ರಮಾಣದಲ್ಲಿ ಕಳ್ಳ ಸಾಗಾಣಿಕೆ ಕೂಡ ನಡೆಯುತ್ತಿದೆ ಎಂಬ ವರದಿಗಳಿದ್ದವು.

ಈ ಹಿನ್ನೆಲೆಯಲ್ಲಿ ದುಬಾರಿ ಬೆಲೆಯ ಮದ್ಯದ ದರಗಳನ್ನು ನೆರೆಯ ರಾಜ್ಯಗಳಿಗೆ ಸರಿಸಮನಾಗಿ ಪರಿಷ್ಕರಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ರ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

ಅದರಂತೆ ದುಬಾರೆ ಬೆಲೆಯ ಮಧ್ಯ ಮಾರಾಟ ದರ ಇಳಿಕೆ ಮಾಡಿ ಜೂನ್‌ನಲ್ಲೇ ಕರಡು ಅಧಿಸೂಚನೆ ಹೊರಡಿಸಿದ್ದ ಅಬಕಾರಿ ಇಲಾಖೆ, ಜುಲೈ 1ರಿಂದ ದರ ಇಳಿಕೆಗೆ ಮುಂದಾಗಿತ್ತು. ಆದರೆ ಆಗ ಗ್ಯಾರಂಟಿ ಯೋಜನೆ ಸೇರಿದಂತೆ ಕಾರಣಗಳಿಂದ ಸಂಪನ್ಮೂಲ ಕೊರತೆ ಎದುರಿಸುತ್ತಿದ್ದ ಆರ್ಥಿಕ ಇಲಾಖೆಯ ಸೂಚನೆಯಂತೆ ದರ ಪರಿಷ್ಕರಣೆ ತಡೆ ಹಿಡಿಯಲಾಗಿತ್ತು.

ಇದೀಗ ಬದಲಾದ ಲೆಕ್ಕಾಚಾರದಂತೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿರುವ ಅಬಕಾರಿ ಇಲಾಖೆ, ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಪರಿಷ್ಕರಿಸಿ ಆಗಸ್ಟ್‌ 23ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರ ಅನ್ವಯ ಪರಿಷ್ಕೃತ ದರಗಳು ಇಂದಿನಿಂದಲೇ ರಾಜ್ಯದಾದ್ಯಂತ ಜಾರಿಗೆ ಬರಲಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments