Homeಕರ್ನಾಟಕಬಾನು ಮುಷ್ತಾಕ್ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಲಿ: ಅಬ್ದುಲ್ ಅಜೀಮ್

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಆಹ್ವಾನ ತಿರಸ್ಕರಿಸಲಿ: ಅಬ್ದುಲ್ ಅಜೀಮ್

ಒಂದು ಧರ್ಮದ ಜನರು ದಸರಾ ಉದ್ಘಾಟನೆಯನ್ನು ಮಾಡುವುದು ಬೇಡ ಎಂದು ಹೇಳಿದಾಗ ಅವರು ದಸರಾ ಉದ್ಘಾಟನೆಗೆ ಹೋಗಬಾರದು; ಸರ್ಕಾರದ ಆಹ್ವಾನವನ್ನು ಅವರು ತಿರಸ್ಕರಿಸಬೇಕು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರು ಮನವಿ ಮಾಡಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದಸರಾ ಉದ್ಘಾಟನೆಗೆ ಕರ್ನಾಟಕ ಸರ್ಕಾರ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದೆ. ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿರುವ ಹಿಂದೂಗಳು ಮುಷ್ತಾಕ್ ಅವರಿಗೆ ನೀವು ದಸರಾ ಉದ್ಘಾಟನೆಯನ್ನು ಮಾಡುವುದು ಬೇಡ. ಇದು ಹಿಂದೂಗಳ ಧಾರ್ಮಿಕ ಹಬ್ಬ. ಅದನ್ನು ನಮ್ಮ ಹಿಂದೂಗಳೇ ಮಾಡಬೇಕು; ಬೇರೆ ಧರ್ಮದವರು ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದ್ದರಿಂದ ಅವರು ದಸರಾ ಉದ್ಘಾಟನೆಯ ಆಹ್ವಾನವನ್ನು ಒಪ್ಪಿಕೊಳ್ಳಬಾರದು” ಎಂದು ತಿಳಿಸಿದರು.

“ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಅದು ಜಾಗತಿಕ ಪ್ರಶಸ್ತಿ. ಈ ಜಗತ್ತು ಅವರನ್ನು ಲೇಖನದಿಂದ ಗುರುತಿಸಿದೆ. ಅವರು ಬರೆದಿರುವ ಪುಸ್ತಕವನ್ನು ಲಕ್ಷಾಂತರ ಜನರು ಓದುತ್ತಿದ್ದಾರೆ. ಕನ್ನಡ ಲೇಖಕಿಗೆ ಜಾಗತಿಕ ಪ್ರಶಸ್ತಿ ಸಿಕ್ಕಿರುವುದು ನಮಗೆಲ್ಲ ಹೆಮ್ಮಯ ವಿಷಯ. ಕರ್ನಾಟಕದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿರುವ ಹಿಂದೂ ಮುಸಲ್ಮಾನರು ಸೌಹಾರ್ದತೆಯನ್ನು ಬಾಳಬೇಕು ಎನ್ನುವ ಉದ್ದೇಶವಾಗಿದೆ” ಎಂದು ಹೇಳಿದರು.

“ನಾನು ಪೊಲೀಸ್ ಸೇವೆಯಲ್ಲಿದ್ದಾಗ ಸುಮಾರು 10 ವರ್ಷಗಳ ಕಾಲ ದಸರಾ ಹಬ್ಬದ ಸಂದರ್ಭದಲ್ಲಿ ಚಾಮುಂಡಿ ದೇವಸ್ಥಾನದಲ್ಲಿ, ಮೈಸೂರು ಪ್ಯಾಲೆಸ್, ವಿಜಯದಶಮಿ, ಆಯುಧ ಪೂಜೆ ಭದ್ರತೆಗೆ ಕೆಲಸ ಮಾಡಿದ್ದೇನೆ. ಇದರಿಂದ ಏನು ಅರ್ಥವಾಗಿದೆ ಎಂದರೆ ದಸರಾ ಹಬ್ಬ ಹಿಂದೂಗಳ ಧಾರ್ಮಿಕ ಹಬ್ಬ. ಬಕ್ರೀದ್ ಮತ್ತು ರಂಜಾನ್ ಹಬ್ಬಗಳು ಮುಸಲ್ಮಾನರ ಹಬ್ಬ. ನಮ್ಮ ಧರ್ಮದಲ್ಲಿ ಇರುವ ಆಚರಣೆಯನ್ನು ನಾವು ಮಾಡುತ್ತೇವೆ” ಎಂದು ತಿಳಿಸಿದರು.

“ಹಿಂದೂಗಳ ಗ್ರಂಥಗಳಲ್ಲಿ, ಪುರಾಣಗಳಲ್ಲಿ, ವೇದಗಳಲ್ಲಿ, ಉನಿಷತ್‍ಗಳಲ್ಲಿ, ಭಗವದ್ಗೀತೆಯಲ್ಲಿ, ಮಹಾಭಾರತದಲ್ಲಿ ಮತ್ತು ರಾಮಾಯಣದಲ್ಲಿ ಚಾಮುಂಡಿ ದೇವಿಯ ಬಗ್ಗೆ ನಮೂದಿಸಿದ್ದಾರೆ. ಮಹಿಷಾಸುರ ರಾಕ್ಷಸನನ್ನು ಚಾಮುಂಡಿ ದೇವಿ ನಾಶ ಮಾಡಿದ ವಿಜಯೋತ್ಸವವನ್ನು ನವರಾತ್ರಿ ದಿನವನ್ನಾಗಿ ಆಚರಿಸುತ್ತಾರೆ. ಇದು ಹಿಂದೂ ಧಾರ್ಮಿಕ ಹಬ್ಬ. ಹಿಂದೂ ಧಾರ್ಮಿಕ ಹಬ್ಬಕ್ಕೆ ಮುಸಲ್ಮಾನರು ಹೋದರೆ ಅವರ ಭಾವನೆಗಳಿಗೆ ಧಾರ್ಮಿಕ ಧಕ್ಕೆ ಉಂಟಾಗುತ್ತದೆ. ಇದರಿಂದ ವಿವಾದಗಳು ಸೃಷ್ಟಿಯಾಗುತ್ತದೆ ಹಾಗೂ ಹಿಂದೂ ಮುಸಲ್ಮಾನರ ಮಧ್ಯೆ ದ್ವೇಷ ಉಂಟಾಗುವ ಸಾಧ್ಯತೆಗಳು ಇರುವುದರಿಂದ, ಅವರು ಸರ್ಕಾರದ ಆಹ್ವಾನವನ್ನು ಒಪ್ಪಿಕೊಳ್ಳಬಾರದು” ಎಂದು ವಿನಂತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments