Homeಕರ್ನಾಟಕವಿಧಾನ ಪರಿಷತ್‌ | ಬಿರುಸಿನಿಂದ ಸಾಗಿದ ಮತದಾನ, ಕಣದಲ್ಲಿ 78 ಅಭ್ಯರ್ಥಿಗಳು

ವಿಧಾನ ಪರಿಷತ್‌ | ಬಿರುಸಿನಿಂದ ಸಾಗಿದ ಮತದಾನ, ಕಣದಲ್ಲಿ 78 ಅಭ್ಯರ್ಥಿಗಳು

ವಿಧಾನ ಪರಿಷತ್‌ ಮೂರು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಪದವೀಧರರ ಕ್ಷೇತ್ರಕ್ಕೆ ಸೋಮವಾರ (ಜೂ.3) ಚುನಾವಣೆ ನಡೆಯುತ್ತಿದ್ದು, ಮತದಾನ ಕೂಡ ಬಿರುಸಿನಿಂದ ನಡೆಯುತ್ತಿದೆ.

ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈಋತ್ಯ ಪದವೀಧರ ಮತ್ತು ಅಗ್ನೇಯ ಶಿಕ್ಷಕರ, ನೈಋತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಇಂದು ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದಾರೆ. ಜೂನ್ 6 ರಂದು ಫಲಿತಾಂಶ ಹೊರಬೀಳಲಿದೆ.

ಕಣದಲ್ಲಿರುವ ಅಭ್ಯರ್ಥಿಗಳು

ಬೆಂಗಳೂರು ಪದವೀಧರ ಕ್ಷೇತ್ರ: ರಾಮೋಜಿಗೌಡ – ಕಾಂಗ್ರೆಸ್, ಆ. ದೇವೇಗೌಡ – ಎನ್‌ಡಿಎ

ಆಗ್ನೇಯ ಶಿಕ್ಷಕರ ಕ್ಷೇತ್ರ: ಡಿ.ಟಿ ಶ್ರೀನಿವಾಸ್ – ಕಾಂಗ್ರೆಸ್, ವೈ.ಎ ನಾರಾಯಣ ಸ್ವಾಮಿ – ಎನ್‌ಡಿಎ

ದಕ್ಷಿಣ ಶಿಕ್ಷಕರ ಕ್ಷೇತ್ರ: ಮರಿತಿಬ್ಬೇಗೌಡ – ಕಾಂಗ್ರೆಸ್, ಕೆ. ವಿವೇಕಾನಂದ – ಎನ್‌ಡಿಎ

ನೈರುತ್ಯ ಶಿಕ್ಷಕರ ಕ್ಷೇತ್ರ: ಕೆ ಕೆ ಮಂಜುನಾಥ್ – ಕಾಂಗ್ರೆಸ್‌, ಬೋಜೇಗೌಡ – ಎನ್‌ಡಿಎ,

ನೈರುತ್ಯ ಪದವೀಧರ ಕ್ಷೇತ್ರ: ಅಯನೂರು ಮಂಜುನಾಥ್ – ಕಾಂಗ್ರೆಸ್,
ಧನಂಜಯ ಸರ್ಜಿ – ಬಿಜೆಪಿ, ರಘುಪತಿ ಭಟ್ – ಬಿಜೆಪಿ ಬಂಡಾಯ

ಈಶಾನ್ಯ ಪದವೀಧರ ಕ್ಷೇತ್ರ: ಡಾ. ಚಂದ್ರಶೇಖರ್‌ ಪಾಟೀಲ್ – ಕಾಂಗ್ರೆಸ್, ಅಮರನಾಥ್ ಪಾಟೀಲ್ – ಎನ್‌ಡಿಎ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments