Homeಕರ್ನಾಟಕಕೊಪ್ಪಳ | ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಸ್ಥಗಿತಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಕೊಪ್ಪಳ | ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆ ಸ್ಥಗಿತಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ

ಕೊಪ್ಪಳ ಸಮೀಪದಲ್ಲಿ ಬಿಎಸ್‌ಪಿಎಲ್ ಕೈಗಾರಿಕೆ ಸ್ಥಾಪನೆಯ ಎಲ್ಲ ಸಿದ್ಧತೆಗಳನ್ನು ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಡಿಸಿ ಅವರಿಗೆ ಸೂಚನೆ ನೀಡಿದ್ದಾರೆ.

ಕೊಪ್ಪಳ ಸಮೀಪದಲ್ಲಿ ಬಿಎಸ್‌ಪಿಎಲ್ ಕೈಗಾರಿಕಾ ಸ್ಥಾಪನೆ ಮಾಡಿದಂತೆ ಒತ್ತಾಯಿಸಿ ಕೊಪ್ಪಳ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು ಸಚಿವರನ್ನು ಒಳಗೊಂಡಂತೆ ಸರ್ವ ಪಕ್ಷಗಳ ನಿಯೋಗವು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ಬಲ್ಲೊಟ್ಟ ಕಂಪನಿಯ ಹೊಸ ಕೈಗಾರಿಕೆ ಸ್ಥಾಪನೆಯ ಸಿದ್ಧತೆಯನ್ನು ತಕ್ಷಣ ನಿಲ್ಲಿಸುವಂತೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದ್ದಾರೆ. ಸಿದ್ಧತೆ ಬಂದು ಮಾಡಿದ ವರದಿಯನ್ನು ತಮಗೆ ಸಲ್ಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಅಲ್ಲದೆ ಸರ್ಕಾರದ ವತಿಯಿಂದ ಕೈಗಾರಿಕೆ ಸ್ಥಾಪನೆಯ ತಡೆಯುವ ಕುರಿತಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಕುರಿತಾಗಿಯೂ ಸರ್ವ ಪಕ್ಷಗಳ ನಿಯೋಗಕ್ಕೆ ಸಿಎಂ ಭರವಸೆ ನೀಡಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಕೊಪ್ಪಳ ಸಮೀಪದಲ್ಲಿ ಬಿಎಸ್‌ಪಿಎಲ್ ಬೃಹತ್ ಉಕ್ಕು ಕೈಗಾರಿಕಾ ಘಟಕ ಈ ಹಿಂದೆ ಸರ್ಕಾರವೇ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆಗೆ ಒಪ್ಪಿಗೆ ನೀಡಿತ್ತು. ಇದು ಜಿಲ್ಲೆಯ ಜನರಲ್ಲಿ ಭಾರಿಯ ಸಮಾಧಾನವನ್ನು ತರಿಸಿತು. ಕೊಪ್ಪಳದಲ್ಲಿ ಕೈಗಾರಿಕೆ ಸ್ಥಾಪನೆ ವಿರೋಧಿಸಿ ಹೋರಾಟಗಳು ನಡೆದಿದ್ದವು. ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿಯೇ ಹೋರಾಟ ಬಹುದೊಡ್ಡ ಸ್ವರೂಪವನ್ನು ಪಡೆದುಕೊಂಡಿತ್ತು. ಕೈಗಾರಿಕೆ ಸ್ಥಾಪನೆ ರದ್ದತಿ ಆದೇಶದ ಪ್ರತಿಯೊಂದಿಗೆ ಜಿಲ್ಲೆಗೆ ಆಗಮಿಸುವಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments