Homeಕರ್ನಾಟಕಅಪಹರಿಸಿ ಬಾಲಕನ ಕೊಲೆ | ಅಪಹರಣಕಾರರ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಅಪಹರಿಸಿ ಬಾಲಕನ ಕೊಲೆ | ಅಪಹರಣಕಾರರ ಕಾಲಿಗೆ ಗುಂಡೇಟು, ಇಬ್ಬರ ಬಂಧನ

ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಬಡಾವಣೆಯಲ್ಲಿ ಟ್ಯೂಷನ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬಾಲಕ ನಿಶ್ಚಿತ್‌ನನ್ನು (13) ಅಪಹರಿಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಆರೋಪಿಗಳು. ಇಬ್ಬರು ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದರು.‌ ಖಚಿತ ಮಾಹಿತಿ ಆಧರಿಸಿ ಗುರುವಾರ ತಡರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ್ದರು. ಆಗ ಹುಳಿಮಾವು ಠಾಣೆಯ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾದರು. ಇಬ್ಬರ ಅಪಹರಣಕಾರರ ಕಾಲಿಗೆ ಗುಂಡೇಟು ಬಿದ್ದಿದೆ.

ಗುರುಮೂರ್ತಿ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕನ ಕುಟುಂಬವು ಈ ಹಿಂದೆ ಗುರುಮೂರ್ತಿಯನ್ನು ಸ್ಪೇರ್ ಡ್ರೈವರ್ ಆಗಿ ನೇಮಿಸಿಕೊಂಡಿತ್ತು. ಬುಧವಾರ ರಾತ್ರಿ 8 ಗಂಟೆಯಾದರೂ ತನ್ನ ಮಗ ಮನೆಗೆ ಹಿಂತಿರುಗದ ಕಾರಣ ಕಾಲೇಜು ಪ್ರಾಧ್ಯಾಪಕರಾಗಿರುವ ನಿಶ್ಚಿತ್ ಅವರ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ನಿಶ್ಚಿತ್ ಸೈಕಲ್ ಅರಕೆರೆಯ ಪ್ರೋಮಿಲಿ ಪಾರ್ಕ್ ಪ್ರದೇಶದಲ್ಲಿ ಬಿಟ್ಟು ಹೋಗಲಾಗಿತ್ತು.

ಪೆಟ್ರೋಲ್‌ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು

ಬಾಲಕನನ್ನು ಅಪಹರಿಸಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹುಳಿಮಾವು ಠಾಣೆಗೆ ಪೋಷಕರು ಘಟನೆ‌ ಕುರಿತು ಮಾಹಿತಿ‌ ನೀಡಿದ್ದರು. ಒಂದೆಡೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ಮತ್ತೊಂದೆಡೆ ಪೋಷಕರು, ಆರೋಪಿಗಳಿಗೆ ₹5 ಲಕ್ಷ ನೀಡಿ ಮಗನನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದರು.‌ ಆದರೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದ ಆರೋಪಿಗಳು ಬಾಲಕನ್ನು ಕಗ್ಗಲಿಪುರದ ನಿರ್ಜ‌ನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ. ಅಪಹರಣಕಾರರನ್ನು ಚಿಕಿತ್ಸೆಗಾಗಿ ಜಯನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

ಇದು ನಾಗರಿಕ ಸಮಾಜವನ್ನು ಕಾಡಲೇಬೇಕಾದ ಸುದ್ದಿ. ನಮ್ಮ ಮನಃಸ್ಥಿತಿ ಅನಾಗರಿಕತೆಯತ್ತ ಸಾಗುತ್ತಿದೆಯೋ, ಅಥವಾ ಸಮಾಜ ಕಾನೂನಿನ ಭಯ ಇಲ್ಲದ ಅರಾಜಕ ವ್ಯವಸ್ಥೆಯತ್ತ ಸಾಗುತ್ತಿದೆಯೋ ? ಎಂಬ ಬಗ್ಗೆ ಯೋಚಿಸಬೇಕಾದ ಕ್ಷಣ. ಏಕೆಂದರೆ ಈ ರೀತಿ ಮಕ್ಕಳ್ಳನ್ನು ಅಪಹರಿಸಿ, ಕುಟುಂಬಸ್ಥರನ್ನು ಹಣಕ್ಕಾಗಿ ಪೀಡಿಸಿ ಕೊಲ್ಲುವುದು 20 ವರ್ಷದ ಹಿಂದೆ ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯವಾಗಿ ನಡೆಯುತ್ತಿದ್ದ ಘಟನೆಯಾಗಿತ್ತು. ಈ ಘಟನೆ ಮತ್ತೆ ನಮ್ಮೆಲ್ಲರನ್ನು ವಿಚಾರಕ್ಕೆ ಹಚ್ಚುವಂತೆ ಮಾಡಿದೆ. ಕಿಡ್ನಾಪ್ ಗ್ಯಾಂಗ್ ಒಂದು ನಗರದಲ್ಲಿ ತಲೆ ಎತ್ತಿದೆ ಎಂದರೆ ಆ ನಗರದಲ್ಲಿ ಕಾನೂನು- ಸುವ್ಯವಸ್ಥೆ ಕ್ಷೀಣಿಸಿದೆ ಎಂದೇ ಅರ್ಥ ಎಂದು ಪ್ರಜ್ಞಾವಂತರು ಹೇಳುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments