Homeಅಭಿಮನ್ಯುಅಭಿವೃದ್ಧಿ ಸಾಮಾಜಿಕ ನ್ಯಾಯದ ಜನಪರ ಬಜೆಟ್

ಅಭಿವೃದ್ಧಿ ಸಾಮಾಜಿಕ ನ್ಯಾಯದ ಜನಪರ ಬಜೆಟ್

ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಈ ದೇಶದಲ್ಲಿ ಶತಶತಮಾನಗಳಿಂದ ಯಾವುದಾದರು ನಾಡು ಶ್ರಮಿಸಿದ್ದರೆ ಅದು ಕರ್ನಾಟಕ ಎಂದು ಹೇಳಲು ಹೆಮ್ಮೆಯಿದೆ. ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆಯೇ ಈ ಬಾರಿಯು ಮುಂದುವರೆಸಲು ಶ್ರಮಿಸಿದ್ದೇನೆ.

ಹೀಗೆಂದು ಆರಂಭದಲ್ಲಿಯೇ ಘಂಟಾಘೋಷವಾಗಿ ಸಾರುವ ಮೂಲಕ ತಮ್ಮ ಹದಿನಾಲ್ಕನೇ ದಾಖಲೆ ಬಜೆಟ್ ಮಂಡನೆಗೆ ಮುಂದಾದ ಹಣಕಾಸು ಖಾತೆ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಂದಿನ ಆಯವ್ಯಯ ಜನಪರ ಬಜೆಟ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ನಾಡಿನ ಶ್ರೇಷ್ಠರು ಬಯಸಿದ್ದ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸುವ ಅವರ ಸತತ ಪ್ರಯತ್ನ ಬಹಳಷ್ಟು ಈಡೇರುವ ಸೂಚನೆಗಳಿಗೆ ಇಂದು ಈ ಬಜೆಟ್ ಹೊಸ ಭಾಷ್ಯ ಬರೆದಿದೆ.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಇವರ ಮೂಲಮಂತ್ರದ ರಾಜ್ಯ ಮಾದರಿ ಆಡಳಿತ ನೀಡುವ ಪ್ರಯತ್ನ ಯಶಸ್ವಿಯಾಗುವ ಸೂಚನೆಗಳಿಗೂ ಈ ಬಜೆಟ್ ಸಾಕಷ್ಟು ಇಂಬು ಕೊಟ್ಟಿದೆ. ದುಡಿಮೆಯ ಗೌರವ ಎತ್ತಿ ಹಿಡಿಯುವ ತುಡಿತ, ಎಲ್ಲರ ಒಳಿತಿಗೆ ದುಡಿಯುವ ಕನಸು, ಮುಕ್ತ ವಾತಾವರಣದಲ್ಲಿ ಬದುಕುವ ಭರವಸೆ, ಸಾಮಾಜಿಕ ನ್ಯಾಯ ಹಾಗೂ ಸಮತೆ, ಸಮಾನತೆಯ ಮೇಲಿನ ಹಕ್ಕಿನ ಪ್ರತಿಪಾದನೆಯ ಕನ್ನಡಿಗರ ಅಭಿಲಾಷೆಯನ್ನು ಈಡೇರಿಕೆಗೆ ತಕ್ಕಂತೆ ಈ ಆಯವ್ಯಯ ಮಂಡನೆಯಾಗಿದೆ. ಮೊದಲಿಗೆ ಕುಟುಂಬ ಪೋಷಣೆಗೆ ಆದ್ಯತೆ ನೀಡಿರುವ ಈ ಬಜೆಟ್ ಆ ನಂತರ ಸಾಮಾಜಕ ಸಾಮರಸ್ಯವನ್ನೂ ಬಿಂಬಿಸಿದೆ. ಜೊತೆಗೆ ಆರ್ಥಿಕ ಸಮೃದ್ಧಿಯ ಕನಡಿಗರ ಆಶಯವನ್ನು ಸಾಕಾರಗೊಳಿಸುವ ಅಪಾರ ತುಡಿತವೂ ಈ ಬಜೆಟ್‌ನಲ್ಲಿ ಎದ್ದು ಕಂಡಿದೆ.


ಅದರಲ್ಲೂ ರಾಜ್ಯಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನಡೆದಿರುವ ಪ್ರಾಮಾಣಿಕ ಪ್ರಯತ್ನ ಈ ಬಜೆಟ್‌ನ ಹೈಲೈಟ್. ಮಿಗಿಲಾಗಿ ಈ ಆಯವ್ಯಯವು ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಎಲ್ಲಾ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನದ ಪ್ರಾಮಾಣಿಕ ಪ್ರಯತ್ನದಂತಿದೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಗ್ಯಾರಂಟಿಗಳು ರಾಜ್ಯದ ಜನರಿಗೆ ನೀಡುತ್ತಿರುವ ಬಿಟ್ಟಿ ಭಾಗ್ಯಗಳಲ್ಲ. ರಾಜ್ಯದ ಆರ್ಥಿಕ ಪ್ರಗತಿಗೆ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಆಕರ್ಷಿಸುವುದು ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸುವುದು ಎಷ್ಟು ಮುಖ್ಯವೋ ಸಮಾಜದ ಎಲ್ಲಾ ವರ್ಗಗಳ ನಡುವೆ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವುದು ಅಷ್ಟೇ ಮುಖ್ಯ ಎಂಬ ಅವರ ನಿಲುವು ಬಡವರ ಮತ್ತು ಅಸಹಾಯಕರ ಪ್ರಬಲ ಧ್ವನಿಯಾಗಿ ಮಾರ್ಧನಿಸಿವೆ.


ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು ೫೩,೦೬೨ ಕೋಟಿ ರೂಗಳನ್ನು ವ್ಯಯಿಸಲಾಗುತ್ತಿದೆ. ಆ ಮೂಲಕ ಅಂದಾಜು ೧.೩೦ ಕೋಟಿ ಕುಟುಂಬಗಳು ಆರ್ಥಿಕ ಶಕ್ತಿ ಹೆಚ್ಚಿಸಿಕೊಳ್ಳಲಿವೆ. ಹೀಗಾಗಿ ಈ ಪರಿಕಲ್ಪನೆ ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಅಷ್ಟೇ ಅಲ್ಲ, ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಮಾದರಿ ರೂಪಿಸುವ ಉದ್ದೇಶ ಇದರಿಂದ ಈಡೇರುವ ಸಾದ್ಯತೆಗಳು ಸ್ಪಷ್ಟವಾಗಿ ಗೋಚರಿಸಿವೆ.


ಒಟ್ಟಾರೆ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿಯೇ ಮಂಡನೆಯಾಗಿರುವ ಈ ಪೂರಕ ಬಜೆಟ್ ಎಲ್ಲಾ ಕ್ಷೇತ್ರಗಳಿಗೂ ಹೆಚ್ಚಿನ ಆದತೆ ನೀಡಿದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆಯೇ ಈ ಬಾರಿಯು ಮುಂದುವರೆಸಲು ಶ್ರಮಿಸಿದ್ದೇನೆ ಎಂಬ ಮಾತಿಗೆ ಬಾರಿ ಮೌಲ್ಯ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments