ಮುಂದಿನ 50 ವರ್ಷದಲ್ಲಿ ಕಲಬುರಗಿ ಹೇಗಿರಬೇಕೆಂಬುದು ಸಂಕಲ್ಪ ಹೊಂದಿದ್ದು, ಅದರಂತೆ ಮುಂದಿನ ಎರಡೂವರೆ ವರ್ಷದಲ್ಲಿ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಕಲಬುರಗಿ ನಗರದ ನೀಲಿ ನಕ್ಷೆ ಬದಲಾಯಿಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.
ರವಿವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ ರಂವಿತರಿಸಲಾಯಿತು.ನಗರಾಭಿವೃದ್ಧಿ ಇಲಾಖೆ, ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಕಲಬುರಗಿ, ಕೆ.ಕೆ.ಆರ್.ಡಿ.ಬಿ ಹಾಗೂ ವಸತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಲಬುರಗಿ ಮಹಾನಗರ ಪಾಲಿಕೆಯ ಎನ್.ಜಿ.ಬಿ ಪರಿಸರ ಪರಿಹಾರ ನಿಧಿಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ವಿವಿಧ ಅನುದಾನದ ಅಡಿಯಲ್ಲಿ ಒಟ್ಟು ರೂ. 108.82 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ, ಪಾಲಿಕೆ ಶೇ.24.10 ಯೋಜನೆ ಅಡಿಯಲ್ಲಿ ಪೌರಕಾರ್ಮಿಕರಿಗೆ ನಿವೇಶನ ಖರೀದಿ ಪತ್ರ ವಿತರಣೆ ಹಾಗೂ ಕುಷ್ಠ ರೋಗದಿಂದ ಗುಣಮುಖ ಹೊಂದಿದವರಿಗೆ ನಿವೇಶನ ಹಕ್ಕು ಪತ್ರ ವಿತರಣಾ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿ ವತಿಯಿಂದ ‘ರಾಜೀವ್ ಅವಾಸ್ ಯೋಜನೆ’ ಅಡಿಯಲ್ಲಿ ಮನೆ ಹಂಚಿಕೆ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾನಾಡಿದರು.
ಇಂದಿಲ್ಲಿ ಸುಮಾರು 110 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದು, ಮುಂದಿನ ದಿನದಲ್ಲಿ ನಗರದ ನಿವಾಸಿಗಳಿಗೆ ಇನ್ನಷ್ಟು ಮೂಲಸೌಕರ್ಯ ದೊರೆಯಲಿವೆ. ಪ್ರಪ್ರಥಮ ಬಾರಿಗೆ ನಮ್ಮ ಸರ್ಕಾರ ರೋಡ್ ಅಡಿಟ್ ಮಾಡಿಸಿದೆ. ಕಲಬುರಗಿ ನಗರದಲ್ಲಿ ಸುಮಾರು 357 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. 400 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಕಂಬಗಳನ್ನು ಬದಲಾಯಿಸುತ್ತೇವೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ 19 ಜಂಕ್ಷನ್, 3 ಕೆರೆ ಅಭಿವೃದ್ಧಿ ಕಾಮಗಾರಿಗಳು ಸಹ ಮಾಡಲಾಗುತ್ತಿದೆ. ಉದ್ಯಾನವನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಇವೆಲ್ಲವು ಕಲಬುರಗಿ ಮಹಾನಗರದ ಚಿತ್ರಣ ಬದಲಿಸಲಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ 5.67 ಲಕ್ಷ ಮಹಿಳೆಯರು ಮಾಸಿಕ 2,000 ರೂ. ಪಡೆಯುತ್ತಿದ್ದಾರೆ. 6.32 ಲಕ್ಷ ಮನೆಗೆ ಉಚಿತ ವಿದ್ಯುತ್ ನೀಡಲಾಗಿದೆ ಪ್ರತಿನಿತ್ಯ ಜಿಲ್ಲೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. 30 ಸಾವಿರ ಜನರಿಗೆ ನಿರುದ್ಯೋಗ ಭತ್ಯೆ ನೀಡಿದ್ದೇವೆ. 20 ಲಕ್ಷ ಫಲಾನುಭವಿಗಳಿಗೆ ಉಚಿತ ಅಕ್ಕಿ ನೀಡುವ ಮೂಲಕ ಅವರ ಬದುಕಿಗೆ ಭದ್ರ ಬುನಾದಿ ಹಾಕಿದ್ದೇವೆ. ಈ ಎಲ್ಲಾ ಉಚಿತ ಯೋಜನೆಗಳು ಬಡವರ ಬಾಳಿಗೆ ಬೆಳಕಾಗಿ ಪರಿಣಮಿಸಿದೆ. ಇಡೀ ರಾಷ್ಟ್ರದಲ್ಲಿ 52 ಸಾವಿರ ಕೋಟಿ ರೂ. ನೇರವಾಗಿ ಜನರಿಗೆ ನೀಡುವ ಯಾವುದಾದರು ಸರ್ಕಾರ ಇದಿಯೆ? ಎಂದು ಪ್ರಸ್ನಿಸಿದ ಅವರು, ವಿರೋಧ ಪಕ್ಷವು ಇಂತಹ ಜನಪರ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ಪ್ರತಿಭಟನೆ ಮಾಡುತ್ತಿರುವುದು ಬೇಸರ ತಂದಿದೆ ಎಂದರು.
ಸುಳ್ಳು ಹೇಳಿ ಓಡಿ ಹೋಗುವವರು ನಾವಲ್ಲ
ಇಂದಿಲ್ಲಿ 105 ಪೌರ ಕಾರ್ಮಿಕರಿಗೆ ನಿವೇಶನ ನೀಡುತ್ತಿದ್ದೇವೆ. ನಾವು ನುಡಿದಂತೆ ಪೌರ ಕಾರ್ಮಿಕರಿಗೆ ಹೊರಗುತ್ತಿಗೆ ರದ್ದು ಮಾಡಿ ನೇರ ಗುತ್ತಿಗೆ ವ್ಯವಸ್ಥೆ ಕಲ್ಪಿಸಿದ್ದೇವೆ. ಬಡವರಿಗೆ ಮನೆ ನೀಡುತ್ತಿದ್ದೇವೆ. ನಾವು ಸುಳ್ಳು ಆಶ್ವಾಸನೆ ನೀಡುವುದಿಲ್ಲ. ಏನು ಮಾಡ್ತೇವೆ ಅದನ್ನೆ ಹೇಳ್ತೇವೆ. ಇನ್ನು ಸುಳ್ಳು ಹೇಳಿ ಹಿಂಬದಿ ಬಾಗಿಲಿನಿಂದ ಓಡಿ ಹೋಗುವ ಜನ ನಾವಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ
ಮಹಾನಗರ ಪಾಲಿಕೆಯಿಂದ 2014-15, 2018-19, 2021-22ನೇ ಸಾಲಿನ ಶೇ.24.10 ಅನುದಾನದಡಿ ಸುಮಾರು 90 ಲಕ್ಷ ರೂ. ಕರ್ನಾಟಕ ಗೃಹ ಮಂಡಳಿಗೆ ಪಾವತಿಸಿದಲಾಗಿದ್ದು, ಇಂದಿಲ್ಲಿ ಕುಸನೂರ, ಕಾಳಗನೂರ ಪ್ರದೇಶದಲ್ಲಿ ನಿವೇಶನ ಪಡೆದ ಆಯ್ದೆ ಕೆಲ ಪೌರ ಕಾರ್ಮಿಕರಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು.
ಬಡವರಿಗೆ ಮನೆ ಹಂಚಿಕೆ ಹಕ್ಕು ಪತ್ರ ವಿತರಣೆ
ರಾಜೀವ್ ಅವಾಸ್ ಯೋಜನೆ ಅಡಿಯಲ್ಲಿ ಕೆಸರಟಗಿಯ ಸರ್ವೆ ನಂ 51/7 ರಲ್ಲಿ ಜಿ+3 ಮಾದರಿಯ 320 ಮನೆಗಳನ್ನು ನಿರ್ಮಿಸಲಾಗಿದ್ದು, ಇಂದಿಲ್ಲಿ ಆಯ್ಕೆಗೊಳಿಸಿದ ಫಲಾನುಭವಿಗಳ ಪೈಕಿ ಆಯ್ದ ಜನರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಡಾ.ಶರಣಪ್ರಕಾಶ ಪಾಟೀಲ ಅವರು ಹಕ್ಕು ಪತ್ರ ವಿತರಣೆ ಮಾಡಿದರು. ಇದಲ್ಲದೆ ಕುಷ್ಠರೋಗದಿಂದ ಗುಣಮುಖ ಹೊಂದಿದ ಸುಮಾರು 51 ಜನರಿಗೆ ನಿವೇಶನ ಹಂಚಿಕೆ ಸಹ ಮಾಡಲಾಯಿತು.
ಒಳಚರಂಡಿಗೆ 700 ಕೋಟಿ ರೂ. ಕೊಡಿ
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ನಗರದ ಒಳಚರಂಡಿ ವ್ಯವಸ್ಥೆ 40-50 ವರ್ಷದ ಹಳೆಯದಾಗಿದ್ದು, ಸಂಪೂರ್ಣ ಕೆಟ್ಟು ಹೋಗಿದೆ. ಇದಕ್ಕೆ 700 ಕೋಟಿ ರೂ. ಅವಶ್ಯವಿದ್ದು, ರಾಜ್ಯ ಸರ್ಕಾರದ ಮೂಲಕ ಹಣ ಒದಗಿಸಬೇಕು. ಇನ್ನು ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ನಾರಾಯಣಪುರ ಜಲಾಶಯದಿಂದ ನೀರು ತರುವ ಯೋಜನೆ ರೂಪಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಮನವಿ ಮಾಡಿದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಲಶ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಅಧ್ಯಕ್ಷ ಹಾಗೂ ಕಲಬುರಗಿ ಉತ್ತರ ಶಾಸಕರಾದ ಕನೀಜ್ ಫಾತಿಮಾ, ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಹರವಾಳ್, ಮೇಯರ್ ವರ್ಷಾ ರಾಜೀವ ಜಾನೆ, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅನುಪಮಾ ಕಮಕನೂರ, ಮಹ್ಮದ ಆಯೇಜ್ ಖಾನ್, ಶೇಖ್ ಹುಸೇನಿ, ಆಡಳಿತ ಪಕ್ಷದ ನಾಯಕ ಶೇಖ ಅಫಜಲ ಗೋಳಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಎಸ್.ಪಿ. ಅಡ್ಡೂರು ಶ್ರೀನಿವಾಸಲು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಪ್ರಸ್ತಾವಿಕವಾಗಿ ಮಾತನಾಡಿದರು. ಆಡಳಿತ ವಿಭಾಗದ ಉಪ ಆಯುಕ್ತೆ ಪ್ರಮೀಳಾ ಎಂ.ಕೆ. ಸ್ವಾಗತಿಸಿದರು.


