Homeಕರ್ನಾಟಕಪತ್ರಕರ್ತ ಎಂ. ನಾಗರಾಜ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಪತ್ರಕರ್ತ ಎಂ. ನಾಗರಾಜ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ

ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಹಿರಿಯ ಪತ್ರಕರ್ತರಾದ ಬೆಂಗಳೂರಿನ ಪ್ರಜಾವಾಣಿಯ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ ಅವರು ಭಾಜನರಾಗಿದ್ದಾರೆ.

ಪ್ರಶಸ್ತಿಯು ₹15 ಸಾವಿರ ನಗದು ಹಾಗೂ ಫಲಕ ಹೊಂದಿದೆ. ಇದುವರೆಗೂ ಈ ಪ್ರಶಸ್ತಿಯನ್ನು 30 ಹಿರಿಯ ಪತ್ರಕರ್ತರು ಪಡೆದಿದ್ದು, ನಾಗರಾಜ ಅವರು 31ನೇಯವರಾಗಿದ್ದಾರೆ.

ಎಂ.ನಾಗರಾಜ ಅವರು ಮೂಲತಃ ಮೈಸೂರಿನವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಅವರಿಗೆ ಈ ಪ್ರಶಸ್ತಿ ನೀಡಲು ಖಾದ್ರಿ ಶಾಮಣ್ಣ ಟ್ರಸ್ಟ್ ಸಂತಸ ವ್ಯಕ್ತಪಡಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಸದ್ಯದಲ್ಲೇ ನಡೆಯಲಿದೆ. ಕಳೆದ ವರ್ಷ ಬಳ್ಳಾರಿಯಲ್ಲಿ ಪ್ರಜಾವಾಣಿಯ ವಿಶೇಷ ವರದಿಗಾರರಾಗಿದ್ದ ಹೊನಕೆರೆ ನಂಜುಂಡೇಗೌಡರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಎಂ.ನಾಗರಾಜ ಅವರು ಮೈಸೂರು ಮಿತ್ರ, ಮಹಾನಂದಿ, ಸಾಧ್ವಿ ಪತ್ರಿಕೆಗಳಲ್ಲಿ ದುಡಿದು 1993ರಲ್ಲಿ ಪ್ರಜಾವಾಣಿ ಪ್ರವೇಶ ಮಾಡಿದರು. ಮೊದಲು ವರದಿಗಾರ, ಆಮೇಲೆ ಉಪಸಂಪಾದಕ, ಹಾಸನ ಜಿಲ್ಲಾ ವರದಿಗಾರ, ಬೆಂಗಳೂರಿನಲ್ಲಿ ಮುಖ್ಯ ವರದಿಗಾರ, ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥ ಹಾಗೂ ಬೆಂಗಳೂರಿನಲ್ಲಿ ಸುದ್ದಿ ಸಂಪಾದಕರಾಗಿ 2018ರಿಂದ ಡೆಪ್ಯೂಟಿ ಎಡಿಟರ್ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments