Homeದೇಶಅಮೆರಿಕ ರಾಯಭಾರಿ ಕಚೇರಿ ಗುರಿಯಾಗಿಸಿ ಇಂದು ಬೆಳಿಗ್ಗೆ ಇರಾನ್ ದಾಳಿ

ಅಮೆರಿಕ ರಾಯಭಾರಿ ಕಚೇರಿ ಗುರಿಯಾಗಿಸಿ ಇಂದು ಬೆಳಿಗ್ಗೆ ಇರಾನ್ ದಾಳಿ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಮಂಗಳವಾರ ಬೆಳಿಗ್ಗೆ ಭೀಕರ ಡ್ರೋನ್ ದಾಳಿ ನಡೆದಿದೆ. ಇರಾನ್ ಬೆಂಬಲಿತ ಪಡೆಗಳು ಈ ಕೃತ್ಯ ಎಸಗಿರಬಹುದು ಎಂದು ಸಂಶಯಿಸಲಾಗಿದ್ದು, ಘಟನೆಯಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಮೇಲೆ ಎರಡು ಆತ್ಮಹತ್ಯಾ ಡ್ರೋನ್ ಗಳು (UAVs) ದಾಳಿ ನಡೆಸಿವೆ. ದಾಳಿಯಿಂದಾಗಿ ಕಚೇರಿಯ ಆವರಣದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್, ದಾಳಿಯ ಸಮಯದಲ್ಲಿ ಕಚೇರಿ ಖಾಲಿಯಾಗಿದ್ದರಿಂದ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ, ಆದರೆ ಕಟ್ಟಡಕ್ಕೆ ಅಲ್ಪ ಹಾನಿಯಾಗಿದೆ ಎಂದು ವರದಿಯಾಗಿದೆ.

ಟ್ರಂಪ್ ಎಚ್ಚರಿಕೆ

ರಿಯಾದ್ ಮೇಲೆ ದಾಳಿ ಮಾಡಲು ಬಂದಿದ್ದ ಇತರ ನಾಲ್ಕು ಡ್ರೋನ್ ಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಯಶಸ್ವಿಯಾಗಿ ಹೊಡೆದುರುಳಿಸಿವೆ. ಈ ನಡುವೆ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ತಕ್ಕ ಪ್ರತಿಕ್ರಿಯೆ ನೀಡಲಾಗುವುದು” ಎಂದು ಎಚ್ಚರಿಸಿದ್ದಾರೆ. ಅಲ್ಲದೆ, ಸೌದಿ ಸೇರಿದಂತೆ 12 ಮಧ್ಯಪ್ರಾಚ್ಯ ದೇಶಗಳನ್ನು ಕೂಡಲೇ ತೊರೆಯುವಂತೆ ತನ್ನ ನಾಗರಿಕರಿಗೆ ಸೂಚನೆ ನೀಡಿದ್ದಾರೆ.

ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ. 10 ರಷ್ಟು ಏರಿಕೆಯಾಗಿದೆ. ಸೌದಿ ಅರಾಮ್ಕೊ ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಪ್ರಮುಖ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಮುಚ್ಚಿದೆ. ರಿಯಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಭಾರತೀಯ ನಾಗರಿಕರು ಕೂಡ ಜಾಗರೂಕರಾಗಿರಲು ಸೂಚಿಸಲಾಗಿದೆ.

ಏತನ್ಮಧ್ಯೆ ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಈ ದಾಳಿಯನ್ನು “ಹೇಡಿಗಳ ಕೃತ್ಯ” ಎಂದು ಕರೆದಿದ್ದು, ಇದು ಕೇವಲ ಅಮೆರಿಕದ ಮೇಲಿನ ದಾಳಿಯಲ್ಲ, ಬದಲಾಗಿ ಸೌದಿಯ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಖಂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments