ಸಂಸದ ಪ್ರಜ್ವಲ್ ಮತ್ತು ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಕಣ್ಣೀರು ಒರೆಸುವ ಬದಲು ರಾಜಕೀಯ ತೆವಲಿಗಾಗಿ ಬೇಕಾಬಿಟ್ಟಿ ಹೇಳಿಕೆಗಳನ್ನು ಜನಪ್ರತಿನಿಧಿಗಳು ಮತ್ತು ಈ ಪ್ರಕರಣದಲ್ಲಿ ಸಾಕ್ಷಿಗಳಾಗಿರುವವರು ನೀಡುತ್ತಿದ್ದಾರೆ.
ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಬಗ್ಗೆ ಮೊದಲು ರಾಜ್ಯದ ಗಮನಕ್ಕೆ ತಂದಿದ್ದ ಹಾಗೂ ಬಿಜೆಪಿ ಹೈಕಮಾಂಡ್‌ಗೆ ಪತ್ರ ಬರೆದು ಮನವರಿಕೆ ಮಾಡಿದ್ದ ಬಿಜೆಪಿ ನಾಯಕ ಮತ್ತು ವಕೀಲ ದೇವರಾಜೇಗೌಡ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ತುರ್ತು ಸುದ್ದಿಗೋಷ್ಠಿ ಕರೆದು ಮಾತನಾಡಿದ ವಕೀಲ ದೇವರಾಜೇಗೌಡ, “ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಇನ್ನೂ ಎಸ್‌ಐಟಿಗೆ ಹಸ್ತಾಂತರವೇ ಆಗಿಲ್ಲ. ಕಿಡ್ನಾಪ್ ಮತ್ತು ಅತ್ಯಾಚಾರ ಆರೋಪವಾಗಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ಈ ತನಿಖೆ ಏಕಮುಖವಾಗಿ ಮಾತ್ರ ನಡೆಯುತ್ತಿದ್ದು, ಪೆನ್ ಡ್ರೈವ್ ಹಂಚಿಕೆ ಮಾಡಿದವರನ್ನು ಈವರೆಗೂ ಬಂಧಿಸಿಲ್ಲ. ಹೀಗಾಗಿ ಗುರುವಾರ ಎಸ್‌ಐಟಿ ತನಿಖಾ ತಂಡದ ವಿರುದ್ಧವೇ ಪ್ರಕರಣ ದಾಖಲಿಸುತ್ತೇನೆ” ಎಂದರು.
“ಯಾವುದೇ ನಾಯಕರಿಗಾಗಲಿ, ರಾಜ್ಯ ಸರ್ಕಾರಕ್ಕಾಗಲಿ ನಾನು ಹೆದರುವುದಿಲ್ಲ. ರೇವಣ್ಣವರ ಬಂಧನದಿಂದ ರಾಷ್ಟ್ರೀಯ ಮಟ್ಟದಲ್ಲಿ ಒಕ್ಕಲಿಗ ಸಮುದಾಯ ತಲೆತಗ್ಗಿಸುವಂತಾಗಿದೆ. ಐದಾರು ಸಚಿವರು ತಮ್ಮ ನಾಯಕನ ರಕ್ಷಣೆಗೆ ರಾಜ್ಯದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ” ಎಂದರು.
“ಪೆನ್‌ಡ್ರೈವ್ ಹಂಚಿದ ಕಾರ್ತಿಕ್ ಪರವಾಗಿ ಈ ಹಿಂದೆ ನಾನು ವಕಾಲತ್ತು ವಹಿಸಿದ್ದೆ. ಅದು ಅವನ ಪತ್ನಿಗೆ ಅನ್ಯಾಯವಾಗಿರುವ ಪ್ರಕರಣ. ಆಗ ನನಗೆ ಕಾರ್ತಿಕ ಪೆನ್ ಡ್ರೈವ್ ಕೊಟ್ಟಿದ್ದ. ಅದನ್ನು ನಾನು ಈವರಗೂ ತೆಗೆದು ನೋಡಿಲ್ಲ” ಎಂದು ಹೇಳಿದರು.
“ಹಾಸನದ ಗಡಿ ಭಾಗದಲ್ಲಿ ಸಂತ್ರಸ್ತೆ ಮಹಿಳೆಯರಿಗೆ ಪೆನ್ ಡ್ರೈವ್ ಸಿಕ್ಕವರು ಕಾಲ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಇಬ್ಬರು ಸಂತ್ರಸ್ತೆಯರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತೆಯರ ಪರವಾಗಿ ಇಡೀ ವಕೀಲ ಸಮೂಹ ಇದೆ. ಯಾರೂ ಎದೆಗುಂದಬೇಡಿ” ಎಂದರು.
“ನನ್ನ ಮೇಲೆಯೂ ಹನಿ ಟ್ರ್ಯಾಪ್ ಪ್ರಯತ್ನ ನಡೆದಿತ್ತು. ಆದರೆ ಅದು ವಿಫಲವಾಗಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಎದ್ದು ಕಾಣುತ್ತಿದೆ. ನನ್ನ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಯಾವುದೇ ನಾಯಕರ ವಿರುದ್ಧವಲ್ಲ. ವಕೀಲನಾಗಿ ನ್ಯಾಯದ ಪರವಾಗಿ ಹೋರಾಟ ಮಾಡುತ್ತಿರುವೆ” ಎಂದು ಹೇಳಿದರು.
“ನನ್ನ ಮೇಲೆಯೂ ಹನಿ ಟ್ರ್ಯಾಪ್ ಆಗಿತ್ತು. ಆದರೆ ಅದು ವಿಫಲವಾಗಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರ ಎದ್ದು ಕಾಣುತ್ತಿದೆ. ನನ್ನ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ಯಾವುದೇ ನಾಯಕರ ವಿರುದ್ಧವಲ್ಲ. ವಕೀಲನಾಗಿ ನ್ಯಾಯದ ಪರವಾಗಿ ಹೋರಾಟ ಮಾಡುತ್ತಿರುವೆ” ಎಂದು ಹೇಳಿದರು.