ಭಾರತ ತಂಡವು ಏಷ್ಯಾ ಕಪ್ 2025ರ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನವನ್ನು 5 ವಿಕೆಟ್ಗಳಿಂದ ಸೋಲಿಸಿ ಟ್ರೋಫಿ ಗೆದ್ದುಕೊಂಡಿದೆ.
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲರ್ಗಳು ಪಾಕಿಸ್ಥಾನದ ಮಧ್ಯಮ ಕ್ರಮಾಂಕವನ್ನು ಧ್ವಂಸಗೊಳಿಸಿದರು. ಪಾಕಿಸ್ಥಾನ 19.1 ಓವರ್ಗಳಲ್ಲಿ 146 ರನ್ಗಳಿಗೆ ಆಲ್ಔಟ್ ಆಯಿತು.
ಭಾರತವು ಸಾಧಾರಣ ಗುರಿಯನ್ನ 5 ವಿಕೆಟ್ಗಳು ಕಳೆದುಕೊಂಡು 19.4 ಓವರ್ಗಳಲ್ಲಿ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ 9ನೇ ಏಷ್ಯಾಕಪ್ ತನ್ನದಾಗಿಸಿಕೊಂಡಿತು.
ಪಾಕಿಸ್ತಾನ ನೀಡಿದ್ದ 147 ರನ್ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಕೇವಲ 20 ರನ್ಗಳಾಗುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆರಂಭಿಕರಾದ ಅಭಿಷೇಕ್ ಶರ್ಮಾ (5), ಶುಭ್ಮನ್ ಗಿಲ್ 12, ನಾಯಕ ಸೂರ್ಯಕುಮಾರ್ ಯಾದವ್ 1 ರನ್ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು. ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ 57 ರನ್ಗಳ ಜೊತೆಯಾಟ ನೀಡಿದರು. ಸಂಜು 24 ರನ್ಗಳಿಸಿ ಔಟಾದರು. ನಂತರ ಬಂದ ದುಬೆ ತಿಲಕ್ ಜೊತೆ ಸೇರಿ 60ರನ್ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ತೋರಿದರು. ದುಬೆ 22 ಎಸೆತಗಳಲ್ಲಿ 33 ರನ್ಗಳಿಸಿ 19ನೇ ಓವರ್ನಲ್ಲಿ ಔಟಾದರು. ಕೊನೆಯ ಓವರ್ನಲ್ಲಿ ಗೆಲುವಿಗೆ ಬೇಕಿದ್ದ 10 ರನ್ಗಳನ್ನ ತಿಲಕ್ ಹಾಗೂ ರಿಂಕು 4 ಎಸೆತಗಳಲ್ಲಿ ಸಿಡಿಸಿ ಗೆಲುವು ತಂದುಕೊಟ್ಟರು.
ಪಾಕಿಸ್ಥಾನ ತಂಡವು ಆರಂಭದಲ್ಲಿ ಒಳ್ಳೆಯ ಆರಂಭ ಪಡೆದುಕೊಂಡಿತು. 84 ರನ್ಗಳ ಜೊತೆಯಾಟ ನೀಡಿದರು. ಇಬ್ಬ ಓಪನರ್ಗಳು ಒಟ್ಟಾರೆ ತಂಡದ 147 ರನ್ಗಳಲ್ಲಿ 113 ರನ್ಗಳಿಸಿದರು. ಫರ್ಹಾನ್ 57, ಫಖರ್ ಜಮಾನ್ 46 ರನ್ಗಳಿಸಿದರು. ಆದರೆ, ಭಾರತದ ಸ್ಪಿನ್ ತ್ರಿಮೂರ್ತಿ – ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ಪಾಕಿಸ್ತಾನದ ಮಧ್ಯಮ ಕ್ರಮಾಂಕವನ್ನು ಸಂಪೂರ್ಣವಾಗಿ ಛಿದ್ರ ಮಾಡಿದರು. ಪಾಕಿಸ್ಥಾನ 113/1ರಿಂದ 146/10ಕ್ಕೆ ಕುಸಿಯಿತು.
ಮೋದಿ ಅಭಿನಂದನೆ
ಭಾರತ ತಂಡದ ಪಾಕಿಸ್ತಾವನ್ನ ಬಗ್ಗುಬಡಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಟ್ವಿಟರ್)ನಲ್ಲಿ ಟ್ವೀಟ್ ಮಾಡಿ ಭಾರತ ತಂಡವನ್ನ ವಿಶೇಷ ರೀತಿಯಲ್ಲಿ ಅಭಿನಂದಿಸಿದ್ದಾರೆ. ಈ ಗೆಲುವನ್ನು “ಆಟದ ಕ್ಷೇತ್ರದಲ್ಲಿ ಆಪರೇಷನ್ ಸಿಂದೂರ್” ಎಂದು ಕರೆದಿದ್ದಾರೆ. ಗೇಮ್ ಫೀಲ್ಡ್ನಲ್ಲೂ ಆಫರೇಷನ್ ಸಿಂಧೂರ್, ” ಫಲಿತಾಂಶ ಎರಡರಲ್ಲೂ ಒಂದೇ – ಭಾರತಕ್ಕೆ ಗೆಲುವು” ಎಂದು ಮೋದಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.