ಹೊರ ಜಿಲ್ಲೆಯ ಮಹಿಳೆಯನ್ನು ಇಟ್ಟುಕೊಂಡು ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿಯಾಗಿದ್ದು, ಸಂತ್ರಸ್ತ ಮಹಿಳೆಯೊಬ್ಬರನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ.
ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕಳೆದ ಫೆ.16 ರಂದು ಬಂದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಗಿರಿನಗರದ ದ್ವಾರಕನಗರ, ಹೊಸಕೆರೆಹಳ್ಳಿಯಲ್ಲಿ ಹೊರ ಜಿಲ್ಲೆಯಿಂದ ಓರ್ವ ಮಹಿಳೆಯನ್ನು ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡು ಮನೆಯಲ್ಲಿರಿಸಿ ಮೊಬೈಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ, ಮನೆಗೆ ಬರಮಾಡಿಕೊಂಡು, ವೇಶ್ಯಾವಾಟಿಕೆ ದಂಧೆ ನಡೆಸುತ್ತಾ ಮಹಿಳೆಯೊಬ್ಬಳು ಅಕ್ರಮ ಹಣ ಸಂಪಾದನೆ ಮಾಡುತ್ತಿರುವ ಬಗ್ಗೆ ಮಾಹಿತಿಯಲ್ಲಿ ತಿಳಿಸಿರುತ್ತಾರೆ.
ಈ ಮಾಹಿತಿಯನ್ನಾದರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿಯವರುಗಳು ಬಾತ್ಮೀದಾರರು ತಿಳಿಸಿದ ಮನೆಯ ಮೇಲೆ ದಾಳಿ ಮಾಡಿ, ಓರ್ವ ಮಹಿಳೆಯನ್ನು ಸಂರಕ್ಷಣೆ ಮಾಡಿ, ಆರೋಪಿತೆಯ ವಿರುದ್ದ ವರದಿಯೊಂದಿಗೆ ಗಿರಿನಗರ ಪೊಲೀಸ್ ಠಾಣೆಗೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ನೀಡಲಾಗಿರುತ್ತದೆ.


