Homeಕರ್ನಾಟಕನನ್ನ ನೈತಿಕತೆ ಕ್ಲಿಯರ್ ಆದ ಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವೆ: ಕುಮಾರಸ್ವಾಮಿ

ನನ್ನ ನೈತಿಕತೆ ಕ್ಲಿಯರ್ ಆದ ಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡುವೆ: ಕುಮಾರಸ್ವಾಮಿ

ಸಿಎಂ ವಿರುದ್ಧದ ಹೈಕೋರ್ಟ್‌ ತೀರ್ಪಿನ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ, ಯಾವುದೇ ತೀರ್ಮಾನ ಆಗದೇ ಇದ್ದರೂ ನನ್ನನ್ನು ಆರೋಪಿ ಮಾಡುತ್ತಿದ್ದಾರೆ. ನನ್ನ ಮೇಲಿನ ಆರೋಪ ಎಲ್ಲಾ ಮುಗಿಯಲಿ, ಅದೆಲ್ಲಾ ಮುಗಿದ ಮೇಲೆ ಮಾತಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ನಾಗಮಂಗಲದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿ, “ಮೈಸೂರು ಪಾದಯಾತ್ರೆಗೆ ನಾನೂ ಹೋಗಿದ್ದೆ, ಪಾದಯಾತ್ರೆಯಲ್ಲಿ ನಾನು ಜನರನ್ನು ಜಾಗೃತರನ್ನಾಗಿ ಮಾಡುವ ಕೆಲಸ ಮಾಡಿದ್ದೇನೆ. ಬಿಜೆಪಿ ನಾಯಕರ ಜತೆ ಹೆಜ್ಜೆ ಹಾಕಿದ್ದೇನೆ” ಎಂದರು.

ಸಿಎಂ ರಾಜೀನಾಮೆಗೆ ಒತ್ತಾಯ ಮಾಡಿಲ್ಲ

“ನಾನು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿಲ್ಲ, ಇರುವ ಪರಿಸ್ಥಿತಿಯನ್ನು ಜನರಿಗೆ ಹೇಳಿದ್ದೇನೆ. ದೇಶದ ಕಾನೂನನಲ್ಲಿ ರಕ್ಷಣೆ ಕೊಡಲು ಸಂವಿಧಾನದಲ್ಲಿ ಅವಕಾಶ ಇದೆ. ಕಾನೂನು ಬಾಹಿರ ಚಟುವಟಿಕೆ ಮಾಡಿದ್ದರೆ ಏನು ತೀರ್ಪು ಬೇಕು ಅದು ನ್ಯಾಯಾಲಯ ಕೊಡುತ್ತದೆ. ಕಾನೂನಿನ ಒಳಗೆ ಇದ್ದರೆ ಏನು ಬೇಕಾದರೂ ಆಗಬಹುದು” ಎಂದು ಹೇಳಿದರು.

“ನಾನು ಸಿದ್ದರಾಮಯ್ಯ ಅವರಿಗೆ ಏನೂ ಹೇಳಲ್ಲ. ನನ್ನ ಅಭಿಪ್ರಾಯ ನಾನು ಹೇಳಲ್ಲ. ಕುಮಾರಸ್ವಾಮಿ ಏನೋ ಮಾಡಿದ್ದಾನೆ ಎಂದು ಹೇಳಿದ್ದಾರೆ. ನನ್ನ ನೈತಿಕತೆ ಏನು ಅನ್ನೊದು ಕ್ಲಿಯರ್ ಆಗಬೇಕು. ಗ್ರೇಟ್ ಪಾಲಿಟಿಷಿಯನ್ ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ, ಮಾಡಲಿ, ಉತ್ತರ ಕೊಡುತ್ತೇನೆ. ಪ್ರಾಸಿಕ್ಯೂಷನ್ ಪ್ರಕರಣ ಕ್ಲಿಯರ್ ಆದ ಬಳಿಕ ಮಾತನಾಡುತ್ತೇನೆ” ಎಂದು ತಿಳಿಸಿದರು.

ಕೇಂದ್ರ ಸಚಿವನಾಗಿರುವುದನ್ನು ಸಹಿಸುತ್ತಿಲ್ಲ

“ಸಿಎಂ ನೈತಿಕ ಹೊಣೆ ಹೊರಲಿಲ್ಲ ಅಂದರೆ, ಹೊತ್ತುಕೊಳ್ಳಿ ಎಂದು ನಾನು‌ ಹೇಳಲು ಆಗುತ್ತಾ? ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಲು ಹೋಗಿದ್ದಾರೆ. ನಾನು ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ. ನಾಲ್ಕೈದು ಮಂದಿ ಬಿಡಾಡಿ ಮಂತ್ರಿಗಳು ನನ್ನ ಮೇಲೆ ಆರೋಪ ಮಾಡಿದ್ದಾರೆ, ಅವರಿಗೆ ನಾನು ಉತ್ತರ ಕೊಡುವ ಅಗತ್ಯ ಇಲ್ಲ” ಎಂದರು.

“ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಇನ್ನೂ ಅನುಮಾನ ಇದೆ. ನಾನು ಇದನ್ನು ಷಡ್ಯಂತ್ರ ಅನ್ನವುದಿಲ್ಲ, ಕುಮಾರಸ್ವಾಮಿ ಕೇಂದ್ರ ಸಚಿವನಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಜನರ ನಡುವೆ ಕಂದಕ ಸೃಷ್ಟಿ ಮಾಡಲು ಹೀಗೆ ಮಾಡುತ್ತಿದ್ದಾರೆ. ನನ್ನ ವಿರುದ್ಧ ಯಾವ ಬಿಡಾಡಿಗಳು ಏನೂ ಮಾಡಲು ಆಗಲ್ಲ. ಕಾಲಭೈರವೇಶ್ವರನ ಸನ್ನಿಧಿಯಲ್ಲಿ ಹೇಳುತ್ತಿದೇನೆ” ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments