Homeಕರ್ನಾಟಕರಾಜ್ಯದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 'ಪೂರ್ವ ಪ್ರಾಥಮಿಕ ತರಗತಿ' ಪ್ರಾರಂಭಿಸಲು ಸರ್ಕಾರ ಆದೇಶ

ರಾಜ್ಯದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ‘ಪೂರ್ವ ಪ್ರಾಥಮಿಕ ತರಗತಿ’ ಪ್ರಾರಂಭಿಸಲು ಸರ್ಕಾರ ಆದೇಶ

ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ರಾಜ್ಯದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಆದೇಶಿಸಿದೆ.

ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ 2023-24 ನೇ ಸಾಲಿನಲ್ಲಿ ಆಯ್ಕೆಯಾದ ರಾಜ್ಯದ 262 ಮತ್ತು 2024-25ನೇ ಸಾಲಿನಲ್ಲಿ ಆಯ್ಕೆಯಾದ 316 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿದೆ.

ಕೇಂದ್ರ ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾಯೋಗಿಕವಾಗಿ ಪ್ರಾರಂಭಿಸುವ ಸಂಬಂಧದಲ್ಲಿ ವಿವರವಾದ ಸೂಚನೆಗಳನ್ನು ಹೊರಡಿಸಲಾಗಿದೆ.

ಸೂಚನೆಗಳು

2024-25ನೇ ಸಾಲಿನ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ಎಲ್ಲ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು.

ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಕುರಿತು ಸರ್ಕಾರಿ ಪ್ರಾಥಮಿಕ ಶಾಲೆಗಳ ಎಸ್.ಡಿ.ಎಂ.ಸಿಯವರು ಮತ್ತು ಶಿಕ್ಷಕರು ಸ್ಥಳೀಯ ಮಟ್ಟದಲ್ಲಿ ಪ್ರಚಾರ ಮಾಡಬೇಕು

ಪೂರ್ವ ಪ್ರಾಥಮಿಕ LKGಯ ಒಂದು ವಿಭಾಗವನ್ನು ಮಾತ್ರ ಪ್ರಾರಂಭಿಸುವುದು, ಈ LKG ತರಗತಿಗೆ 4 ವರ್ಷದಿಂದ 5 ವರ್ಷದ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲುಮಾಡಿಕೊಳ್ಳುವುದು. ಈ ವಿಭಾಗ ಪ್ರಾರಂಭಿಸಲು 4 ವರ್ಷದಿಂದ 5 ವರ್ಷದ ವಯೋಮಾನದ ಕನಿಷ್ಠ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು ಹಾಗೂ ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸತಕದ್ದು.

ಪೂರ್ವ ಪ್ರಾಥಮಿಕ ತರಗತಿಯನ್ನು ಪ್ರಾರಂಭಿಸಲು ಒಂದು ಕೊಠಡಿಯನ್ನು ಗುರುತಿಸಿಕೊಳ್ಳುವುದು ಹಾಗೂ ಕೊಠಡಿ ಸಜ್ಜುಗೊಳಿಸುವುದು ಅವಶ್ಯ ಸಾಧನ ಸಾಮಗ್ರಿಗಳನ್ನು ನಿಯಮಾನುಸಾರ ಖರೀದಿಸುವುದು. ಕೊಠಡಿ ಸಜ್ಜುಗೊಳಿಸಲು ಸ್ಥಳಿಯ ಚಿತ್ರಕಲಾ ಶಿಕ್ಷಕರನ್ನು / ಚಿತ್ರಕಲಾ ಪರಿಣಿತರನ್ನು ಬಳಸಿಕೊಂಡು ಮಕ್ಕಳಿಗೆ ಆಕರ್ಷಕವಾದ ಚಿತ್ರಗಳ ರಚನೆ, ಗೋಡೆ ಮೇಲೆ ನೆಲ ಮಟ್ಟದಿಂದ 2 ಅಡಿಯವರೆಗೆ ಮಕ್ಕಳು ಬರೆಯಲು/ ಚಿತ್ರ ರಚಿಸಲು ಸಾಧ್ಯವಾಗುವಂತೆ ಗ್ರೀನ್ ಬೋರ್ಡ/ಕರಿಹಲಗೆ ರಚನೆ ಮುಂತಾದ ಕಾರ್ಯಗಳನ್ನು ಮಾಡುವುದು, ಖರೀದಿಸಬೇಕಾದ ಸಾಧನ ಸಾಮಗ್ರಿಗಳ ಪಟ್ಟಿಯನ್ನು ಹಾಗೂ ಕೆಲವು ಕೊಠಡಿಯ ವಿನ್ಯಾಸದ ಕೆಲವು ಮಾದರಿ ಉದಾಹರಣೆಗಳನ್ನು ಕೂಡಲೇ ಒದಗಿಸತಕ್ಕದ್ದು.

ಪ್ರತಿ ಪೂರ್ವ ಪ್ರಾಥಮಿಕ ತರಗತಿಗೆ ಒಬ್ಬ ಶಿಕ್ಷಕಿ/ಶಿಕ್ಷಕ ಮತ್ತು ಒಬ್ಬರು ಆಯಾರವರನ್ನು ಶಾಲಾ ಎಸ್.ಡಿ.ಎಂ.ಸಿ ವತಿಯಿಂದ ತಾತ್ಕಾಲಿಕವಾಗಿ 10 ತಿಂಗಳುಗಳ ಅವಧಿಗೆ ನೇಮಕ ಮಾಡಿಕೊಳ್ಳತಕ್ಕದ್ದು. ಪೂರ್ವ ಪ್ರಾಥಮಿಕ ತರಗತಿ ಶಿಕ್ಷಕಿ/ಶಿಕ್ಷಕರಿಗೆ ಪ್ರಸ್ತುತ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಸಂಭಾವನೆಯಂತೆಯೇ ಮಾಸಿಕ 10 ಸಾವಿರ ಮತ್ತು ಆಯಾ ಇವರಿಗೆ ಮಾಸಿಕ 5 ಸಾವಿರ ಸಂಭಾವನೆ ನಿಗದಿಪಡಿಸತಕ್ಕದ್ದು.

ವೇತನ ಅನುದಾನವನ್ನು ಆಯಾ ಎಸ್.ಡಿ.ಎಂ.ಸಿ. ಖಾತೆಗೆ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಿಂದ ಬಿಡುಗಡೆ ಮಾಡತಕ್ಕದ್ದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments