Homeಕರ್ನಾಟಕಬಾಲಕಿ ಕೊಲೆ | ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಬಂಧನ; ಆತ್ಮಹತ್ಯೆ ಸುಳ್ಳು

ಬಾಲಕಿ ಕೊಲೆ | ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಬಂಧನ; ಆತ್ಮಹತ್ಯೆ ಸುಳ್ಳು

ಮಡಿಕೇರಿಯ ಸೋಮವಾರಪೇಟೆ ತಾಲ್ಲೂಕಿನ ಮೆಟ್ಲು ಗ್ರಾಮದಲ್ಲಿ ಬಾಲಕಿಯನ್ನು‌ ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿರುವ ಆರೋಪಿ ಪ್ರಕಾಶ್ (32) ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಸುಳ್ಳಾಗಿದ್ದು, ಶನಿವಾರ ಬೆಳಿಗ್ಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈತನಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದೆವು. ಈ ವೇಳೆ ಬೆಳಿಗ್ಗೆ ಹಮ್ಮಿಯಾಳ ಗ್ರಾಮದ ಸಮೀಪ ಕಾಡಿನಲ್ಲಿ ಈತ ಅವಿತುಕೊಂಡಿರುವ ಕುರಿತ ಮಾಹಿತಿ ಲಭಿಸಿತು. ಕೂಡಲೇ ಆತನನ್ನು ಬಂಧಿಸಲಾಯಿತು. ಇನ್ನು ಬಾಲಕಿಯ ರುಂಡದ ಕುರಿತು ಇನ್ನಷ್ಟೇ ತನಿಖೆ ನಡೆಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವುದು ನಿಜ. ಆದರೆ ಬಾಲಕಿಯ ರುಂಡ ಇನ್ನೂ ಪತ್ತೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.

ಪ್ರೇಮ ಪ್ರಕರಣ!

ಕಳೆದೊಂದು ವರ್ಷದಿಂದ ಆರೋಪಿ ಪ್ರಕಾಶ್, ಕೊಲೆಯಾದ ಬಾಲಕಿ ಮೀನಾಳ ಹಿಂದೆಯೇ ಸುತ್ತುತ್ತಿದ್ದನಂತೆ. ಇವರಿಬ್ಬರೂ ಪ್ರೀತಿಸುತ್ತಾ ಇದ್ದುದ್ದು ಇಡೀ ಊರಿಗೆ ಗೊತ್ತಿತ್ತು. ಇವರಿಬ್ಬರ ಆತ್ಮೀಯತೆ ಎಷ್ಟಿತ್ತೆಂದರೆ ಈತನೇ ತನ್ನ ಬೈಕಿನಲ್ಲಿ ಮೀನಾಳನ್ನ ಮನೆಯಿಂದ ಶಾಲೆಗೆ ಡ್ರಾಪ್ ಮಾಡುವುದು, ಊರೂರು ಸುತ್ತುವುದು, ಬಸ್ಸಿನಲ್ಲೂ ಮಡಿಕೇರಿ ಹೋಗಿ ಬರುವುದು ಮಾಡುತ್ತಿದ್ದರು. ಎಷ್ಟೋ ಬಾರಿ ಈತ ಈಕೆಯ ಮನೆಗೂ ಬಂದು ಹೋಗಿದ್ದ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬಂದಿವೆ.

ಬಾಲಕಿ ಪ್ರಕಾಶ್​ ಜೊತೆ ಸುತ್ತುವುದು ಹೆಚ್ಚು ಮಾಡಿದ್ದಳು ಎನ್ನಲಾಗುತ್ತಿದೆ. ಆದರೆ, ಎರಡು ತಿಂಗಳ ಹಿಂದೆ ಅದೇನೋ ಮನಸ್ಸಾಗಿ ತಿರುಗಿ ಶಾಲೆಗೆ ಬಂದಿದ್ದಳು. ಪರೀಕ್ಷೆ ಬರೆಯುವುದಾಗಿ ಶಿಕ್ಷಕರಿಗೆ ಹೇಳಿದ್ದಳು. ಅದರಂತೆ ಶಿಕ್ಷಕರೂ ಈಕೆಗೆ ಪಾಠ ಮಾಡಿದ್ದರು. ಚೆನ್ನಾಗಿಯೇ ಓದಿದ್ದ ಈಕೆ, ಪ್ರಕಟಗೊಂಡ ಫಲಿತಾಂಶದಲ್ಲಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments