ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಮತ್ತು ಕೊಯಿರಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ತೈವಾನ್ ಮೂಲದ ಫಾಕ್ಸ್ ಕಾನ್ ಕಂಪನಿಗೆ ನೀಡಿರುವ 300 ಎಕರೆ ಜಮೀನನ್ನು ಜ. 29ರಂದು ವಿಶೇಷ ಹೂಡಿಕೆ ವಲಯ (SER) ಎಂದು ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿಸಬೇಕು ಎಂದು ಸೂಚಿಸಿ ಈ ಹಿಂದೆ ನೀಡಿದ್ದ ನೋಟಿಸನ್ನು ರದ್ದು ಪಡಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಿಇಒ ಕೆ.ಎನ್ ಅನುರಾಧ ಮಂಗಳವಾರ ಹೇಳಿದ್ದಾರೆ.
ಈ ಸಂಬಂಧವಾಗಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿರಾಜ್ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಫಾಕ್ಸ್ ಕಾನ್ ಕಂಪನಿಗೆ ನೀಡಿರುವ ಪ್ರದೇಶವು ಇದುವರೆಗೂ ಎರಡು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲೇ ಇತ್ತು. ಇದುವರೆಗೂ ಆ ಕಂಪನಿಗೆ ತೆರಿಗೆ ಪಾವತಿಸಲು ಸೂಚಿಸಿ ಎಂಟು ಸಲ ನೋಟಿಸ್ ನೀಡಲಾಗಿತ್ತು. ಆದರೆ ಅದು ಯಾವುದಕ್ಕೂ ಉತ್ತರಿಸಿಲ್ಲ. ಈಗ ಈ ಪ್ರದೇಶವನ್ನು ಎಸ್ಐಆರ್ ಎಂದು ಘೋಷಿಸಿರುವುದರಿಂದ ಗ್ರಾಪಂ ಕಡೆಯಿಂದ ನೋಟೀಸ್ ನೀಡುವ ಪ್ರಮೇಯವೇ ಉದ್ಭವಿಸದು ಎಂದು ಅವರು ತಿಳಿಸಿದ್ದಾರೆ.


