ಕರ್ನಾಟಕದ ಹಿರಿಯ ರಾಜಕಾರಣಿ, ಮಾಜಿ ಸಚಿವ ಬಾಗಲಕೋಟೆಯ ಹಾಲಿ ಶಾಸಕ ಎಚ್.ವೈ. ಮೇಟಿ ಮಂಗಳವಾರ ನಿಧನರಾದಿದ್ದಾರೆ.
81 ವರ್ಷ ವಯಸ್ಸಿನ ಮೇಟಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿಸ್ತೆಗಾಗಿ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿದ್ದಾಗ ಫಲಕಾರಿಯಾಗದೇ ಕಾರ್ಡಿಯಾಕ್ ಅರೆಸ್ಟ್ನಿಂದ ನಿಧನರಾಗಿದ್ದಾರೆ.
ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ಅಂತ್ಯಕ್ರಿಯೆ ನೆರವೇರಲಿದೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಮೇಟಿಯವರ ಆರೋಗ್ಯ ವಿಚಾರಿಸಿದ್ದರು.
ಇದೀಗ ಮೇಟಿ ನಿಧನರಾಗಿದ್ದಾರೆ. ಈ ಹಿನ್ನಲೆ ಮೈಸೂರಿನಿಂದ ನೇರವಾಗಿ ಜಯನಗರ ಖಾಸಗಿ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.


