Homeಕರ್ನಾಟಕಮಾಜಿ ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಂ ನಿಧನ

ಮಾಜಿ ವಿಧಾನ ಪರಿಷತ್‌ ಸದಸ್ಯ ಪಟೇಲ್‌ ಶಿವರಾಂ ನಿಧನ

ಮಾಜಿ ವಿಧಾನ ಪರಿಷತ್‌ ಸದಸ್ಯ ಹಾಗೂ ಅಪೆಕ್ಸ್ ಬ್ಯಾಂಕ್‌ ಹಾಲಿ ನಿರ್ದೇಶಕ ಪಟೇಲ್‌ ಶಿವರಾಂ (75) ಗುರುವಾರ ನೀಧನರಾಗಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಟೇಲ್‌ ಶಿವರಾಂ ಅವರು ಹಾಸನ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ತಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಮೃತರಿಗೆ ಮೂವರು ಹೆಣ್ಣು ಮಕ್ಕಳು, ಓರ್ವ ಪುತ್ರ ಹಾಗೂ ಪತ್ನಿ ಇದ್ದಾರೆ. ಹಾಸನ ಜಿಲ್ಲೆಯ ಪ್ರಭಾವಿ ಜೆಡಿಎಸ್‌‍ ಮುಖಂಡರಾಗಿದ್ದ ಅವರು 2010-2016 ರವರೆಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಹಾಗೂ ಅವರ ಕುಟುಂಬದ ಆಪ್ತರಾಗಿದ್ದ ಪಟೇಲ್‌ ಶಿವರಾಂ ಅವರು, ಹೆಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ನಿರ್ದೇಶಕ, ಹಾಸನ ಹಾಲು ಒಕ್ಕೂಟದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಹಾಸನ ಜಿಲ್ಲಾ ಪರಿಷತ್‌ ಸದಸ್ಯರಾಗಿ, ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷರಾಗಿ ರೈತಪರ ಕೆಲಸ ಮಾಡಿದ್ದ ಶ್ರೀಯುತರು, ಹಾಲಿ ಬ್ಯಾಂಕ್‌ ಕಟ್ಟಡ ಕಟ್ಟುವ ಮೂಲಕ ತಮ ಹೆಸರು ಸದಾ ಉಳಿಯುವಂತೆ ಮಾಡಿದ್ದಾರೆ. ಹಾಲಿ ಅಪೆಕ್ಸ್ ನಿರ್ದೇಶಕರಾಗಿದ್ದರು. ಹಿಂದೆ ದೆಹಲಿಯ ಕ್ರಿಪ್ಕೋ ಸದಸ್ಯರೂ ಆಗಿದ್ದರು. ಒಂದು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಶಿವರಾಂ ಅವರು ಎರಡು ಬಾರಿ ಪರಾಭವಗೊಂಡಿದ್ದರು.

ಶಾಸಕರಾದ ಹೆಚ್‌.ಡಿ.ರೇವಣ್ಣ, ಸಿ.ಎನ್‌.ಬಾಲಕೃಷ್ಣ, ಎಚ್‌.ಪಿ.ಸ್ವರೂಪ್‌ಪ್ರಕಾಶ್‌, ಮಾಜಿ ಸಚಿವರಾದ ಎಚ್‌.ಕೆ.ಕುಮಾರಸ್ವಾಮಿ, ಹಾಸನ ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ನಿವಾಸದಲ್ಲಿ ಪಟೇಲ್‌ ಶಿವರಾಂ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಗಣ್ಯರಿಂದ ಸಂತಾಪ

ಪಟೇಲ್‌ ಶಿವರಾಂ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು, ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ಜಿಲ್ಲೆಯ ಹಿರಿಯ ರಾಜಕಾರಣಿ, ಸರಳರು, ಸಜ್ಜನರಾಗಿದ್ದ ಪಟೇಲ್‌ ಶಿವರಾಂ ಅಗಲಿಕೆಯು ಅತೀವ ದುಃಖ ತಂದಿದೆ ಎಂದು ಜೆಡಿಎಸ್‌‍ ವರಿಷ್ಠರಾದ ಹೆಚ್‌.ಡಿ.ದೇವೇಗೌಡ” ಸಂತಾಪ ವ್ಯಕ್ತಪಡಿಸಿದ್ದಾರೆ.

“ನನ್ನೊಂದಿಗೆ ಹಲವು ದಶಕಗಳ ಕಾಲ ಜೊತೆಯಾಗಿ ಕೆಲಸ ಮಾಡಿದ್ದ ಶಿವರಾಂ ಅವರು ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ಸಂಘಟನೆಗೆ ದುಡಿದಿದ್ದರು. ಅವರೆಂದೂ ಅಧಿಕಾರಕ್ಕಾಗಿ ಹಪಾಹಪಿಸಿದವರಲ್ಲ. ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ” ಎಂದು ಸ್ಮರಿಸಿದ್ದಾರೆ.

“ಸರಳರು, ಸಜ್ಜನರು, ನಮ್ಮ ತಂದೆ ಹೆಚ್.ಡಿ.ದೇವೇಗೌಡ ಅವರ ಆತ್ಮೀಯರೂ ಆಗಿದ್ದ ಹಿರಿಯರಾದ ಪಟೇಲ್ ಶಿವರಾಂ ಅಗಲಿಕೆ ಅತೀವ ದುಃಖ ತಂದಿದೆ. ನಮ್ಮ ಪಕ್ಷದಲ್ಲಿ ಹಲವು ದಶಕಗಳ ಸೇವೆ ಸಲ್ಲಿಸಿದ್ದ ಶಿವರಾಂ ಅವರು ಹಾಸನ ಜಿಲ್ಲೆಯಲ್ಲಿ ನಮ್ಮ ಪಕ್ಷ ಸಂಘಟನೆಗೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ದುಡಿದಿದ್ದರು. ಹಾಸನ ಜಿಲ್ಲಾ ಪರಿಷತ್ ಸದಸ್ಯರಾಗಿ, ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಎರಡು ಬಾರಿ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ರೈತಪರ ಕೆಲಸ ಮಾಡಿದ್ದ ಶ್ರೀಯುತರು, ಹಾಲಿ ಬ್ಯಾಂಕ್ ಕಟ್ಟಡ ಕಟ್ಟಿದ ಹಿರಿಮೆ ಅವರದು. ಹಾಲಿ ಅಪೆಕ್ಸ್ ನಿರ್ದೇಶಕರಾಗಿದ್ದರು. ಹಿಂದೆ ದೆಹಲಿಯ ಕ್ರಿಪ್ಕೋ ಸದಸ್ಯರೂ ಆಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಶಿವರಾಂ ಅವರು ಜನ ಸೇವೆಯಲ್ಲಿ ಸದಾ ಮುಂದಿರುತ್ತಿದ್ದರು. ಅವರ ಮಾರ್ಗದರ್ಶನದಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ನಿಧನ ವೈಯಕ್ತಿಕವಾಗಿ ನನಗೆ ನಷ್ಟ ಉಂಟು ಮಾಡಿದೆ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ” ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments