ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವಿನಯ್ ಗೌಡ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ರಜತ್ ಕಿಶನ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ.
ಬಸವೇಶ್ವರನಗರ ಠಾಣೆಯ ಪಿಎಸ್‌ಐ ಭಾನು ಪ್ರಕಾಶ್ ಅವರು ನೀಡಿದ ದೂರು ಆಧರಿಸಿ ಈ ಇಬ್ಬರ ವಿರುದ್ ಎಫ್‌ಐಆರ್ ದಾಖಲಾಗಿದೆ.
ಇವರಿಬ್ಬರು ಬಾಯ್ಸ್ v/s ಗರ್ಲ್ಸ್ʼ ರಿಯಾಲಿಟಿ ಶೋನ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಇಬ್ಬರೂ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟು ರೀಲ್ಸ್ ಮಾಡಿದ್ದಾರೆ. ಆನಂತರ ಅದನ್ನು ಬಿಗ್ ಬಾಸ್ ರಜತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಅಪ್‌ಲೋಡ್ ಮಾಡಿದ್ದಾರೆ.
ಇದನ್ನು ಗಮನಿಸಿದ ಪೊಲೀಸರು ಲಾಂಗ್ ಹಿಡಿದುಕೊಂಡು ಭಯದ ವಾತಾವರಣ ಸೃಷ್ಟಿಯಾಗುವಂತೆ ರೀಲ್ಸ್ ಮಾಡಿದ್ದರೆಂದು ದೂರು ದಾಖಲಿಸಿದ್ದಾರೆ. 18 ಸೆಕೆಂಡ್‌ಗಳ ವಿಡಿಯೋ ಲಿಂಕ್ ಆಧರಿಸಿ ದೂರು ದಾಖಲಾಗಿದೆ.
“ನಿಷೇಧಿತ ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡಿದ್ದಾರೆ.ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿ ಹಾಳು ಮಾಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.