Homeಕರ್ನಾಟಕಎಲ್ಲರೂ ಗೌರವ ಕೊಡುವುದು ನನಗಲ್ಲ, ಸಂವಿಧಾನ ಪೀಠಕ್ಕೆ: ಸಭಾಧ್ಯಕ್ಷ ಯು ಟಿ ಖಾದರ್

ಎಲ್ಲರೂ ಗೌರವ ಕೊಡುವುದು ನನಗಲ್ಲ, ಸಂವಿಧಾನ ಪೀಠಕ್ಕೆ: ಸಭಾಧ್ಯಕ್ಷ ಯು ಟಿ ಖಾದರ್

‌ಎಲ್ಲರೂ ಗೌರವ ಕೊಡುವುದು ನನಗಲ್ಲ. ಅದು ಸಂವಿಧಾನ ಪೀಠಕ್ಕೆ, ಸಭಾಧ್ಯಕ್ಷ ಸ್ಥಾನಕ್ಕೆ. ಸಭಾಧ್ಯಕ್ಷ ಸ್ಥಾನವನ್ನು ಯಾವುದೇ ರಾಜಕೀಯ ಜಾತಿ, ಧರ್ಮದ ಆಧಾರದಲ್ಲಿ ನೋಡಬೇಡಿ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹೇಳಿದರು.

ಮುಸ್ಲಿಂ ಸ್ಪೀಕರ್​ಗೆ ಬಿಜೆಪಿ ಶಾಸಕರು ನಮಸ್ಕರಿಸುವಂತೆ ಮಾಡಿದ್ದೇವೆ’ ಎಂಬುದಾಗಿ ಸಚಿವ ಜಮೀರ್ ಅಹ್ಮದ್ ನೀಡಿದ್ದಾರೆ ಎನ್ನಲಾದ ಹೇಳಿಕೆ ಈಗ ವಿವಾದದ ಸ್ವರೂಪ ಪಡೆದಿದೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಯು ಟಿ ಖಾದರ್‌ ಮಾತನಾಡಿದರು.

“ಸಭಾಧ್ಯಕ್ಷ ಸ್ಥಾನವನ್ನು ಪಕ್ಷವನ್ನು ಮೀರಿ ನೋಡಲು ಬಯಸುತ್ತೇನೆ. ಜಮೀರ್ ಅವರ ಹೇಳಿಕೆಗೆ ನಾನು ಏನೂ ಹೇಳಲು ಬಯಸುವುದಿಲ್ಲ.‌ ಜಾತಿಯ ಆಧಾರದಲ್ಲಿ ನನ್ನನ್ನು ಪೀಠದಲ್ಲಿ ಕುಳ್ಳಿರಿಸಲಿಲ್ಲ. ಅರ್ಹತೆಗೆ ಅನುಗುಣವಾಗಿ ಸ್ಥಾನವನ್ನು ನೀಡಿದ್ದಾರೆ‌. ಎಲ್ಲರಿಗೆ ಗೌರವ ನೀಡಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ” ಎಂದರು.

“ನಾನು ಎಲ್ಲರಿಗೂ ಸೇರಿರುವ ವಿಧಾನಸಭಾಧ್ಯಕ್ಷ. ನನ್ನ ಸ್ಥಾನ ಎಲ್ಲವನ್ನೂ ಮೀರಿ ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನಮಾನ. ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವವರು ಅದರ ಗೌರವ ಉಳಿಸಬೇಕು” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments