Homeಕರ್ನಾಟಕನನಗಂತೂ ಟಿಕೆಟ್‌ ಕೊಡಬೇಕು ಅಷ್ಟೇ: ಮಾಜಿ ಸಚಿವ ಬಿ ಸಿ ಪಾಟೀಲ್‌ ಆಗ್ರಹ

ನನಗಂತೂ ಟಿಕೆಟ್‌ ಕೊಡಬೇಕು ಅಷ್ಟೇ: ಮಾಜಿ ಸಚಿವ ಬಿ ಸಿ ಪಾಟೀಲ್‌ ಆಗ್ರಹ

ಒಬ್ಬ ಗ್ರಾಮ ಪಂಚಾಯತಿ ಸದಸ್ಯ ತನ್ನ ಸ್ಥಾನ ತ್ಯಾಗ ಮಾಡಲ್ಲ. ಅಂತಹದರಲ್ಲಿ ನಾವು ತ್ಯಾಗ ಮಾಡಿದೀವಿ. ನಾನು ಈಗ ಸೋತು ಮನೆಯಲ್ಲಿ ಕುಳಿತುಕೊಂಡಿದ್ದೇನೆ. ನನಗಂತೂ ಟಿಕೆಟ್‌ ಕೊಡಬೇಕು ಅಷ್ಟೇ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್‌ ಆಗ್ರಹಿಸಿದರು.

ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಮಗೆ ಕೊಡುವುದರಲ್ಲಿ ನ್ಯಾಯ ಇದೆ. ನಮ್ಮ ತ್ಯಾಗದಿಂದ ಸರ್ಕಾರ ಬಂತು. 2023ರಲ್ಲಿ ಬಿಜೆಪಿ ಯಾಕೆ ಸೋತಿತು ಎಂದು ಎಲ್ಲರಿಗೂ ಗೊತ್ತು. ನಾವೆಲ್ಲಾ ಸೋತಿದ್ದೇವೆ, ನಮ್ಮ ಹಿತವನ್ನೂ ಅವರು ಕಾಯಲಿ. ಅದರ ಜವಾಬ್ದಾರಿ ಅವರಿಗೆ ಇದೆ ಅಲ್ವಾ” ಎಂದು ಪ್ರಶ್ನಿಸಿದರು.

“ನಮಗೆ ಹೆದರಿಸುವುದು ಬೆದರಿಸುವುದು ಗೊತ್ತಿಲ್ಲ. ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಈಗಾಗಲೇ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ನಾನು ಹಾವೇರಿ – ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಬೇಕು” ಎಂದರು.

“ಟಿಕೆಟ್‌ ವಿಚಾರವಾಗಿ ಬಿ ವೈ ವಿಜಯೇಂದ್ರ ಹಾಗೂ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾಗಿದೀನಿ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವವನಲ್ಲ. ನನಗೆ ಟಿಕೆಟ್‌ ಕೊಡಬೇಕು ಅಂತ ವಾದ ಮಾಡುತ್ತಿದ್ದೇನೆ ಅಷ್ಟೇ” ಎಂದದು ಹೇಳಿದರು.

ನನಗೆ ನಂದೇ ಹಾದಿ ಇದೆ

“ಟಿಕೆಟ್‌ ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ. ನನಗೆ ನಂದೇ ಹಾದಿ ಇದೆ. ಆ ಪ್ರಕಾರ ನಡೆಯುವೆ. ನನಗೆ ಶಿವರಾಮ್‌ ಹೆಬ್ಬಾರ್‌, ಎಸ್‌ಟಿ ಸೋಮಶೇಖರ್ ಹಾದಿ ಬೇಕಾಗಿಲ್ಲ” ಎಂದು ಬಂಡಾಯದ ಸೂಚನೆಯ ಮಾತುಗಳನ್ನು ಆಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments