ಕೇಂದ್ರದಿಂದ ಬರ ಪರಿಹಾರ ಘೋಷಣೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನುಅಭಿನಂದಿಸಿ ಬಿಜೆಪಿ ನಾಯಕರು ಮಾಡುತ್ತಿರುವ ಪೋಸ್ಟ್‌ಗಳನ್ನು ಗಮನಿಸಿದರೆ ‘ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಮಾತು ಬಿಜೆಪಿ ಮತ್ತು ಆ ಪಕ್ಷದ ನಾಯಕರಿಗೆ ಅಕ್ಷರಶಃ ಸರಿ ಹೊಂದುತ್ತೆ.
ಆರು ತಿಂಗಳಿನಿಂದ ಬರ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡು ಏ.28ಕ್ಕೆ ವಿಚಾರಣೆ ಇರುವ ಮುನ್ನ ದಿನವೇ ಇಂದು (ಏ.27)ರಾಜ್ಯಕ್ಕೆ 3,454 ಕೋಟಿ ಬರ ಪರಿಹಾರ ಘೋಷಣೆ ಮಾಡಿದೆ. ಅದು ಕೂಡ ರಾಜ್ಯ ಕೇಳಿದ ಬರ ಪರಿಹಾರದಲ್ಲಿ ಕಾಲಭಾಗವೂ ಕೊಟ್ಟಿಲ್ಲ!
ರಾಜ್ಯ ಸರ್ಕಾರ ಕೇಳಿದ್ದು, 18 ಸಾವಿರ ಕೋಟಿ. ಸುಪ್ರೀಂ ಕೋರ್ಟ್ ಉಗಿದ ಮೇಲೆ 3,454 ಸಾವಿರ ಕೋಟಿ ಕೊಟ್ಟಿದೆ. ಇಂತಹ ಕಟು ಸತ್ಯ ಕಣ್ಮುಂದೆ ಇದ್ದರೂ ಮಣ್ಣಿಗೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ ಬಿಜೆಪಿ ನಾಯಕರು ಬಿಲ್ಡಪ್ ಮೇಲೆ ಬಿಲ್ಡಪ್ ಕೊಡುತ್ತಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಕುರಿತು ಪೋಸ್ಟ್ ಮಾಡಿ, “ರಾಜ್ಯದಲ್ಲಿ ತೀವ್ರ ಬರ ಇದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ಸಂಕಷ್ಡ ಕಾಲದಲ್ಲೂ ಕರ್ನಾಟಕದ ಜನರ ಪರವಾಗಿ ತೀರ್ಮಾನ ತೆಗೆದುಕೊಂಡಿರುವುದು ಪ್ರಧಾನಮಂತ್ರಿ ನರೇಂದ್ರ ಹಾಗೂ ಕೇಂದ್ರ ಸರ್ಕಾರದ ಕಳಕಳಿ ತೋರಿಸುತ್ತದೆ” ಎಂದಿದ್ದಾರೆ.
ಮುಂದುವರಿದು, “ರಾಜ್ಯ ಸರ್ಕಾರ ನಿರಂತರವಾಗಿ ಈ ಬಗ್ಗೆ ಅಪಪ್ರಚಾರ ಮಾಡದೇ ಆರು ತಿಗಳ ಹಿಂದೆಯೇ ರೈತರಿಗೆ ಪರಿಹಾರ ಒದಗಿಸಿದ್ದರೆ ರೈತರ ಬದುಕು ಸ್ವಲ್ಪನಾದರು ಸುಧಾರಿಸುತ್ತಿತ್ತು. ಆದರೆ, ಅದನ್ಜು ರಾಜ್ಯ ಸರ್ಕಾರ ಮಾಡದಿರುವುದು ವಿಷಾದನೀಯ. ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಂಡಿವುದು ಅತ್ಯಂತ ಸ್ವಾಗತಾರ್ಹ” ಎಂದು ಹೇಳಿದ್ದಾರೆ.
ಪಾಪ ಬೊಮ್ಮಾಯಿ ಅವರಿಗೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ರಾಜ್ಯ ಸರ್ಕಾರ ಮನವಿ ಮಾಡಿ ಪತ್ರ ಬರೆದಿದ್ದು, ನಂತರ ಸಿಎಂ, ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಚಿವ ಕೃಷ್ಣ ಬೈರೇಗೌಡ ಪ್ರಧಾನಿ ಮೋದಿ ಅವರನ್ನು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದು ಗೊತ್ತೇ ಇಲ್ವಾ? ತಡವಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎನ್ನುತ್ತಾರಲ್ಲಾ? ಎಷ್ಟು ಗುಲಾಮಗಿರಿ ನಡವಳಿಕೆ ಇರಬೇಕು?
ಕನ್ನಡಿಗರ ಹಿತ ಇದೇನಾ?
“ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸು ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಂಬು ಹೃದಯದ ಧನ್ಯವಾದಗಳು” ಎಂದು ಬಿಜೆಪಿ ಪೋಸ್ಟ್ ಮಾಡಿದೆ.
ಈ ಬಿಜೆಪಿಗೆ ಕನ್ನಡಿಗರ ಹಿತದ ಬಗ್ಗೆ ಮಾತನಾಡುವ ನೈತಿಕಥೆಯೇ ಇಲ್ಲ. ಅವಾಗ ಬಾಯಿಗೆ ಬೀಗ ಹಾಕಿಕೊಂಡು, ಸುಪ್ರೀಂ ಕೋರ್ಟ್ ಉಗಿದ ಮೇಲೆ ಮೋದಿ ಕೊಟ್ಟಿದ್ದಾರೆ ಎನ್ನಲು ಎಷ್ಟು ಭಂಡ ಧೈರ್ಯ ಇರಬೇಕು? ಇದನ್ನೆಲ್ಲ ಕನ್ನಡಿಗರು ಯೋಚಿಸುವುದಿಲ್ಲವಾ? ಇವರು ಹೇಳಿದ ಮಾತ್ರಕ್ಕೆ ನಂಬಲು ಕನ್ನಡಿಗರು ತೆಲೆಯಲ್ಲಿ ಭಕ್ತರ ಹಾಗೇ ಶೆಗಣಿ ತುಂಬಿಕೊಂಡಿಲ್ಲ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಏನು ಹೇಳ್ತಾರೆ ನೋಡಿ, “ಕೊಟ್ಟ ಮಾತು-ಇಟ್ಟ ಹೆಜ್ಜೆ ಎಂದೂ ಹಿಂತೆಗೆಯದ, ದೇಶದ ಅಭಿವೃದ್ಧಿ ಹಾಗೂ ನೆರವು ಕಾರ್ಯದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಇಂದು ಕರ್ನಾಟಕ ರಾಜ್ಯಕ್ಕೆ 3,454 ಕೋಟಿ ರೂ ಬರ ಪರಿಹಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ರಾಜ್ಯದ ಜನತೆಯ ಪರವಾಗಿ ವಿಶೇಷವಾಗಿ ರೈತ ಸಮುದಾಯದ ಪರವಾಗಿ ಪ್ರಧಾನಿ ಮೋದಿ ಜೀ ಅವರನ್ನು ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತೇನೆ” ಎಂದಿದ್ದಾರೆ.
ಮುಂದುವರಿದು, “ಸುಳ್ಳು, ಅಪಪ್ರಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗ, ಬರ ಪರಿಹಾರ ಪಡೆಯುವಲ್ಲಿ ಎಸಗಿದ ಲೋಪಗಳನ್ನು ಮರೆಮಾಚಿ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರವನ್ನೇ ಬಂಡವಾಳ ಮಾಡಿಕೊಂಡಿದ್ದ ರಾಜ್ಯದ ಕಾಂಗ್ರೆಸ್ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫೀಲು ಸಲ್ಲಿಸಿ ಆಧಾರರಹಿತ ಗೊಂದಲ ಸೃಷ್ಟಿಸಲು ಯತ್ನಿಸಿತು, ಆದರೆ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡುವಲ್ಲಿ ವಿಶೇಷ ಕಾಳಜಿ ವಹಿಸಿದೆ. ಸಂಕಷ್ಟದ ವಿಷಯಗಳನ್ನೂ ರಾಜಕೀಯ ದಾಳವನ್ನಾಗಿಸಿಕೊಳ್ಳುವ ಕಾಂಗ್ರೆಸ್ ನ ಪ್ರವೃತ್ತಿ ಇನ್ನಾದರೂ ಕೊನೆಗೊಳ್ಳಲಿ, ರಾಜಕೀಯವನ್ನು ಬದಿಗೊತ್ತಿ ಕೇಂದ್ರದೊಂದಿಗೆ ಸಮನ್ವಯತೆ ಸಾಧಿಸಿ ರಾಜ್ಯದ ಹಿತ ಕಾಯಲಿ” ಎಂದಿದ್ದಾರೆ.
ಅಬ್ಬಾ ಆತ್ಮಸಾಕ್ಷಿಗೆ ಮೋಸ ಮಾಡಿಕೊಂಡು ಮಾತನಾಡುವ ನಾಯಕರು ಯಾರಾದರೂ ಇದ್ದರೆ ಅದು ಬಿಜೆಪಿ ನಾಯಕರೇ ಅನ್ನಿಸುತ್ತೆ. ದೇಶದಲ್ಲಿ ಮೊದಲ ಬಾರಿಗೆ ಒಂದು ರಾಜ್ಯ ಸರ್ಕಾರ ಬರ ಪರಿಹಾರ ಕೊಡಿಸಿ ಎಂದು ಸುಪ್ರೀಂ ಕೋರ್ಟ್ ಕದ ತಟ್ಟಿದ್ದು ಬಿಜೆಪಿಯವರು ತಲೆತಗ್ಗಿಸಬೇಕಾದ ಸಂಗತಿ. ಕೇಂದ್ರದೊಂದಿಗೆ ಗುದ್ದಾಡಿ ನ್ಯಾಯಯುತವಾಗಿ ಕನಿಷ್ಠ ಇಷ್ಟಾದರೂ ಸಿದ್ದರಾಮಯ್ಯ ಅವರು ಬರ ಪರಿಹಾರ ತಂದಿದ್ದಾರೆ. ಅಭಿನಂದನೆ ಸಲ್ಲಬೇಕಿರುವುದು ಮೋದಿಗಲ್ಲ, ಕನ್ನಡಿಗರ ಧ್ವನಿಯಾಗಿ ನಿಂತ ಸಿದ್ದರಾಮಯ್ಯ ಅವರಿಗೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.