Homeಕರ್ನಾಟಕಅವಾಚ್ಯ ಪದ ಬಳಕೆ ಸುಳ್ಳಾಗಿದ್ದರೆ ಸಿ ಟಿ ರವಿ ಬಂಧನವೇಕಾಯಿತು: ಸಿದ್ದರಾಮಯ್ಯ ಪ್ರಶ್ನೆ

ಅವಾಚ್ಯ ಪದ ಬಳಕೆ ಸುಳ್ಳಾಗಿದ್ದರೆ ಸಿ ಟಿ ರವಿ ಬಂಧನವೇಕಾಯಿತು: ಸಿದ್ದರಾಮಯ್ಯ ಪ್ರಶ್ನೆ

ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಸುಖಾಸುಮ್ಮನೇ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ ಆರೋಪ ಸುಳ್ಳಾಗಿದ್ದರೆ ಸಿ ಟಿ ರವಿಯವರ ಬಂಧನವೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿ ಟಿ ರವಿಯವರನ್ನು ಬೆಂಬಲಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಮಂಡ್ಯದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, “ಹೆಣ್ಣುಮಕ್ಕಳಿಗೆ ಇಷ್ಟು ಕೆಟ್ಟ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿಯವರು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ. ಅಷ್ಟು ಕೆಟ್ಟ ಮಾತು ಆಡಿರುವುದಕ್ಕೆ ಸಾಕ್ಷಿಯಾದ ಆಡಿಯೊ, ವಿಡಿಯೊ ಇದೆ. ಸಿ.ಟಿ.ಯವರು ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಇದೊಂದು ಕ್ರಿಮಿನಲ್ ಅಪರಾಧ” ಎಂದರು.

“ರವಿ ಆಡಿದ ಕೆಟ್ಟ ಮಾತನ್ನು ಕೇಳಿರುವುದಾಗಿ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು , ಪದಬಳಕೆಯಾಗಿರುವುದು ಸತ್ಯ” ಎಂದು ಹೇಳಿದರು.

ಕಾನೂನಿನ ಕ್ರಮ ಜರುಗಿಸಲೇಬೇಕಾಗುತ್ತದೆ

ಸಿ ಟಿ ರವಿಯವರು ತನಗೆ ಜೀವಬೆದರಿಕೆಯಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದು ಹೇಳಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಎಫ್ ಐ ಆರ್ ದಾಖಲಾದ ಮೇಲೆ ಪೊಲೀಸರು ತನಿಖೆ ನಡೆಸಲೇಬೇಕಾಗುತ್ತದೆ. ಕಾನೂನಿನ ಕ್ರಮ ಮಾಡಲೇಬೇಕಾಗುತ್ತದೆ. ಸಿ.ಟಿ.ರವಿ ವಿರುದ್ಧ ಆಕ್ರೋಶಗೊಂಡಿದ್ದ ಜನರು ಬೆಳಗಾವಿಯಲ್ಲಿದ್ದ ಕಾರಣದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments