- ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಿಗೇರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ
- ದಿನೇಶ್ ಅಮೀನ್ ಮಟ್ಟು, ಎನ್ ರವಿಕುಮಾರ್ ಎಂ ಸಿ ಶೋಭ ಸದಸ್ಯರಾಗಿ ನೇಮಕ
2024-25ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಿ ಆದೇಶಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಓರ್ವ ಪತ್ರಕರ್ತರನ್ನು ಆಯ್ಕೆ ಮಾಡಲು ಅಧ್ಯಕ್ಷರನ್ನು ಒಳಗೊಂಡು ಎಂಟು ಮಂದಿಯ ಸಮಿತಿಯನ್ನು ರಚಿಸಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಿಗೇರಿ ಅವರನ್ನು ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಚಿತ್ರದುರ್ಗದ ಕ.ಮ ರವಿಶಂಕರ್, ಸುವರ್ಣ ನ್ಯೂಸ್ನ ಸುದ್ದಿ ಸಂಪಾಕರಾದ ಎಂ ಸಿ ಶೋಭ, ಹುಬ್ಬಳ್ಳಿಯ ಜೆ ಅಬ್ಬಾಸ್ ಮುಲ್ಲಾ, ಶಿವಮೊಗ್ಗದ ಎನ್ ರವಿಕುಮಾರ್, ವಾರ್ತಾ ಇಲಾಖೆ ಆಯುಕ್ತರು ಮತ್ತು ಜಂಟಿ ನಿರ್ದೇಶಕರು ಸಮಿತಿಯಲ್ಲಿ ಸದಸ್ಯರಾಗಿದ್ದಾರೆ.