ದಕ್ಷಿಣ ಕೊಲಂಬಿಯಾದಲ್ಲಿ 125 ಮಂದಿ ಪ್ರಯಾಣಿಸುತ್ತಿದ್ದ ಸೇನಾ ವಿಮಾನವು ಟೇಕ್‌ಆಫ್ ಆದ ತಕ್ಷಣ ಪತನಗೊಂಡ ಪರಿಣಾಮ ಕನಿಷ್ಠ 66 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ರಕ್ಷಣಾ ಸಚಿವ ಪೆಡ್ರೋ ಸಾಂಚೆಝ್ ಅವರು ಎಕ್ಸ್ ಖಾತೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಈ ದುರಂತ ಅಪಘಾತ ಅಮೆಜಾನ್ ಪ್ರದೇಶದಲ್ಲಿರುವ ಪುಟುಮಾಯೋ ಪ್ರಾಂತ್ಯದ ದೂರದ ಪಟ್ಟಣವಾದ ಪ್ಯೂರ್ಟೋ ಲೆಗುಇಜಾಮೋದಲ್ಲಿ ಸಂಭವಿಸಿದೆ.
ಈ ಪ್ರದೇಶವು ಪೆರು ಮತ್ತು ಇಕ್ವಡಾರ್ ದೇಶಗಳ ಗಡಿಗೆ ಹೊಂದಿಕೊಂಡಿದೆ. ಪುಟುಮಾಯೋ ರಾಜ್ಯಪಾಲ ಜೋನ್ ಗ್ಯಾಬ್ರಿಯೆಲ್ ಮೊಲಿನಾ ಅವರು ಸ್ಥಳೀಯ ಮಾಧ್ಯಮವಾದ ಕ್ಯಾರಕೋಲ್ ನೋಟಿಸಿಯಾಸ್‌ಗೆ ತಿಳಿಸಿರುವಂತೆ, 66 ಮಂದಿ ಮೃತಪಟ್ಟಿದ್ದು, ಇನ್ನೂ 21 ಮಂದಿಯನ್ನು ಗುರುತಿಸಲು ಸಾಧ್ಯವಾಗಿಲ್ಲ.


