ಹುಬ್ಬಳ್ಳಿ: ನಾನು ನನ್ನ ಮಗ ಯತೀಂದ್ರ ಅವರನ್ನು ಲೋಕಸಭೆ ನಿಲ್ಲಿಸಲು ಹೋಗಲ್ಲ. ಆದರೆ, ಜನರು ನಿಂತುಕೊಳ್ಳಿ ಎಂದರೆ ಅವರು ಸ್ಪರ್ಧಿಸುತ್ತಾರೆ. ಲೆಹರ್ ಸಿಂಗ್ ಸಿರೋಯಾ ಅವರು ಮೊದಲು ಸಂಸತ್ ನಲ್ಲಿ ಆದ ಭದ್ರತಾ ಲೋಪದ ಬಗ್ಗೆ ತಲೆಕೆಡಿಸಿಕೊಳ್ಳಲಿ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
“ಮೈಸೂರು ಲೋಕಸಭೆ ಚುನಾವಣೆಯಲ್ಲಿ ಪುತ್ರನನ್ನು ಗೆಲ್ಲಿಸಲು ಸಿದ್ದರಾಮಯ್ಯ ಅವರು ಪ್ರತಾಪ್ ಸಿಂಹ ವಿರುದ್ಧ ಷಡ್ಯಂತ ರೂಪಿಸಿದ್ದಾರೆ” ಎಂದು ಆರೋಪಿಸಿರುವ ರಾಜ್ಯಸಭಾ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ ಅವರಿಗೆ ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
“ಮಹಿಳೆಯನ್ನು ಬೆತ್ತಲೆಗೊಳಿಸಿರುವ ಪ್ರಕರಣದ ಬಗ್ಗೆ ಕಾನೂನು ರೀತಿಯಲ್ಲಿ ಏನೇನು ಕ್ರಮ ತಗೆದುಕೊಳ್ಳಬೇಕು ಅದನ್ನೆಲ್ಲ ತಗೆದುಕೊಂಡಿದ್ದೇವೆ. ನಮ್ಮ ಗೃಹ ಸಚಿವರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹೋಗಿ ಭೇಟಿ ನೀಡಿದ್ದಾರೆ. ಪರಿಹಾರವೂ ಕೊಟ್ಟಿದ್ದೇವೆ” ಎಂದು ತಿಳಿಸಿದರು.
“ಜೆ ಪಿ ನಡ್ಡಾ ಮತ್ತು ಬಿಜೆಪಿಯವರು ಮಹಿಳಾ ವಿವಸ್ತ್ರ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಹೊರಟಿದ್ದಾರೆ. ಅವರ ಕಾಲದಲ್ಲಿ ಎನ್‌ಸಿಬಿ (ನ್ಯಾಷನಲ್ ಕ್ರೈಮ್ ಬ್ಯೂರೊ ತಗೆದುನೋಡಿ ಎಷ್ಟು ಮಹಿಳೆಯರ ಮೇಲೆ ದೌರ್ಜನ್ಯ ಆಗಿದೆ ಎಂಬುದು ಗೊತ್ತಾಗುತ್ತದೆ” ಎಂದು ಹರಿಹಾಯ್ದರು.
ಉತ್ತರ ಪ್ರದೇಶಶ ಬಿಜೆಪಿ ಶಾಸಕನಿಗೆ ಜೈಲು ಆಗಿದೆ. ಬಿಜೆಪಿ ಎಂಎಲ್‌ಎ 9 ವರ್ಷದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದ. ಇದಕ್ಕೆ ನಡ್ಡಾ ಏನು ಹೇಳುತ್ತಾರೆ? ಪ್ರಲ್ಹಾದ್ ಜೋಶಿ ಏನು ಹೇಳುತ್ತಾರೆ? ಮಹಿಳೆಯ ವಿವಸ್ತ್ರ ಪ್ರಕರಣವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದರು.
“ಜಾತಿ ಗಣತಿ ವರದಿಯೇ ಬಂದಿಲ್ಲ. ಎಲ್ಲರೂ ಊಹೆ ಮೇಲೆ ಮಾತನಾಡುತ್ತಿದ್ದಾರೆ. ಮುಂದೆ ನೋಡೋಣ” ಎಂದು ಹೇಳಿದರು.