Homeಕರ್ನಾಟಕಸಿಎಂ ನನ್ನ ಬೆಂಬಲಕ್ಕೆ ಇದ್ದಾರೆ, ಶಾಸಕರು ದೆಹಲಿಗೆ ಹೋಗೋದು, ಫಾರಿನ್ ಹೋಗೋದು ಗೊತ್ತಿಲ್ಲ: ಡಿ ಕೆ...

ಸಿಎಂ ನನ್ನ ಬೆಂಬಲಕ್ಕೆ ಇದ್ದಾರೆ, ಶಾಸಕರು ದೆಹಲಿಗೆ ಹೋಗೋದು, ಫಾರಿನ್ ಹೋಗೋದು ಗೊತ್ತಿಲ್ಲ: ಡಿ ಕೆ ಶಿವಕುಮಾರ್

ಶಾಸಕರು ದೆಹಲಿಗೆ ಹೋಗುವುದೂ ಗೊತ್ತಿಲ್ಲ. ಫಾರಿನ್ ಗೆ ಹೋಗುವುದೂ ಗೊತ್ತಿಲ್ಲ. ಈ ಬಗ್ಗೆ ನನ್ನನ್ನು ಯಾರೂ ಕೇಳಿಯೂ ಇಲ್ಲ, ಈ ವಿಚಾರದಲ್ಲಿ ನಾನು ಬಾಯಿ ಹಾಕುವುದೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಪ್ರಸಕ್ತ ರಾಜಕೀಯ ಬೆಳಣಿಗೆಗಳು, ಶಾಸಕರು ದೆಹಲಿ ಪ್ರವಾಸ ಹೋಗುವುದಾಗಿ ಹೇಳಿರುವ ಬಗ್ಗೆ ಕೇಳಿದಾಗ ಬೆಂಗಳೂರಿನ ನಗರದ ಚಿತ್ರಕಲಾ ಪರಿಷತ್ತಿನ ಬಳಿ ಮಾಧ್ಯಮಗಳಿಗೆ ಶನಿವಾರ ಹೀಗೆ ಪ್ರತಿಕ್ರಿಯೆ ನೀಡಿದರು.

ಅಣ್ಣನ ಹಣೆಬರಹದಲ್ಲಿ ಬರೆದಿದ್ದರೆ ಮುಖ್ಯಮಂತ್ರಿ ಆಗುವರು ಎನ್ನುವ ಸಹೋದರ ಡಿ.ಕೆ.ಸುರೇಶ್ ಅವ ಮಾತಿನ ಬಗ್ಗೆ ಕೇಳಿದಾಗ, “ಎಲ್ಲರೂ ಅದೇ ರೀತಿ ಹೇಳುತ್ತಾರೆ. ನಾನೇನು ಆ ಸುದ್ದಿಯನ್ನು ಮಾತನಾಡಿಲ್ಲವಲ್ಲ” ಎಂದು ಹೇಳಿದರು.

ನಿಮ್ಮ ಪರವಾಗಿ ಜನರು, ಬೆಂಬಲಿಗರು, ಶಾಸಕರು ಮಾತನಾಡುತ್ತಿದ್ದಾರೆ ಎಂದು ಕೇಳಿದಾಗ, “139 ಜನ ಶಾಸಕರು ಸೇರಿ ಮುಖ್ಯಮಂತ್ರಿಯವರು ನನ್ನ ಬೆಂಬಲಕ್ಕೆ ಇದ್ದೇ ಇದ್ದಾರೆ” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments