ಸಂಡೂರು ವಿಧಾನಸಭಾ ಕ್ಷೇತ್ರದ ನೂರಾರು ಕೋಟಿ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ ನಾರಿಹಳ್ಳ ಕಿರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ದೇವರಾಜ ಅರಸು ಅವರ ನಂತರ ನಾರಿಹಳ್ಳ ಜಲಾಶಯಕ್ಕೆ ಆಗಮಿಸಿದ ಎರಡನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎನ್ನುವ ಸಂತಸವನ್ನು ಬಾಗಿನ ಅರ್ಪಣೆ ಪೂಜಾ ಕಾರ್ಯದಲ್ಲಿದ್ದ ಪುರೋಹಿತರು ಹಂಚಿಕೊಂಡರು.
ಸಂಡೂರು ತಾಲೂಕಿನ ನಾರಿಹಳ್ಳ ಕಿರು ಡ್ಯಾಂ 0.810 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು 615 ಕಿ.ಮೀ. ವಿಸ್ತೀರ್ಣ ಇದೆ. ಈ ಜಲಾಶಯ ಸಂಡೂರಿನ 20 ಗ್ರಾಮಗಳಿಗೆ ಕುಡಿಯುವ ನೀರಿಗೆ ಆಧಾರ ಆಗಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್, ಶಾಸಕರಾದ ಶ್ರೀನಿವಾಸ್, ಕಂಪ್ಲಿ ಗಣೇಶ್, ಲತಾ ಮಲ್ಲಿಕಾರ್ಜುನ್, ಸಂಸದ ಈ.ತುಕಾರಾಂ ಸೇರಿ ಹಲವರು ಉಪಸ್ಥಿತರಿದ್ದರು.