Homeಕರ್ನಾಟಕಝೀರೋ ಟ್ರಾಫಿಕ್‌ನಲ್ಲಿ ಬಂದರೂ ನಿಮ್ಹಾನ್ಸ್ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ

ಝೀರೋ ಟ್ರಾಫಿಕ್‌ನಲ್ಲಿ ಬಂದರೂ ನಿಮ್ಹಾನ್ಸ್ ವೈದ್ಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ

ಪ್ರಾಣ ಉಳಿಯುವ ಆಸೆಯೊಂದಿಗೆ ಜೀರೋ ಟ್ರಾಫಿಕ್‌ನಲ್ಲಿ ಹಾಸನದಿಂದ ಬೆಂಗಳೂರಿಗೆ ಬಂದರೂ, ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂದು ನಿರ್ಲಕ್ಷ್ಯ ತೋರಿದ ನಿಮ್ಹಾನ್ಸ್ ಸಿಬ್ಬಂದಿ ಧೋರಣೆಯಿಂದ ಮಗುವೊಂದು ಸಾವನ್ನಪ್ಪಿದೆ.

ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿದೆ ಎಂದು ಆಕ್ರೋಶಗೊಂಡ ಮಗುವಿನ ಕುಟುಂಬ ಸದಸ್ಯರು ನಿಮ್ಹಾನ್ಸ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟವಾಡುತ್ತಿದ್ದ ಒಂದು ವರ್ಷದ ಮಗು 10 ಅಡಿ ಎತ್ತರದಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಗಾಯಗೊಂಡು, ಅಸ್ವಸ್ಥಗೊಂಡಿತ್ತು.ಕೂಡಲೇ ಪೋಷಕರು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿನ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‌ಗೆ ಹೋಗುವಂತೆ ಸೂಚಿಸಿದ್ದರು.

ಮಗುವಿನ ಪರಿಸ್ಥಿತಿ ಅವಲೋಕಿಸಿದ ಹಾಸನ ಆಸ್ಪತ್ರೆ ವೈದ್ಯರು ಪೊಲೀಸರೊಂದಿಗೆ ಮಾತನಾಡಿ ಮಗು ಇದ್ದ ಆಂಬುಲೆನ್ಸ್ ಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಅಷ್ಟೇ ಅಲ್ಲ,ಝೀರೋ ಟ್ರಾಫಿಕ್‌ನಲ್ಲಿ ರೋಗಿಯು ಬರುತ್ತಿದ್ದ  ಹಿನ್ನಲೆಯಲ್ಲಿ ಬೆಡ್ ಕಾಯ್ದಿರಿಸುವಿಕೆಗಾಗಿ ನಿಮಾನ್ಸ್ ಆಡಳಿತ ಮಂಡಳಿಗೆ ತಿಳಿಸಿದ್ದರು. 

ಅದರಂತೆ ಹಾಸನದಿಂದ ನಿಮಾನ್ಸ್‌ಗೆ ಕೇವಲ 1ಘಂಟೆ 40 ನಿಮಿಷದಲ್ಲಿ ಆಂಬ್ಯುಲೆನ್ಸ್ ಬಂದಿತ್ತು. ಆದರೆ ನಿಮ್ಹಾನ್ಸ್ ಸಿಬ್ಬಂದಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪುಟ್ಟ ಕಂದಮ್ಮಗೆ ಬೆಡ್ ಖಾಲಿಯಿಲ್ಲ ಎಂದು ಆಸ್ಪತ್ರೆಯ ಆವರಣದಲ್ಲಿಯೇ ಸುಮಾರು 90 ನಿಮಿಷ ನಿಲ್ಲಿಸಿದ್ದಾರೆ.

ಗಾಯಗೊಂಡ ಬಾಲಕನನ್ನು ಬೆಂಗಳೂರಿಗೆ ಸ್ಥಳಾಂತರಿಸಲು ತ್ವರಿತ ಪೊಲೀಸ್ ನೆರವಿನ ಹೊರತಾಗಿಯೂ, ನಿಮ್ಹಾನ್ಸ್ ಸಿಬ್ಬಂದಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಹಾಸಿಗೆಗಳು ಲಭ್ಯವಿಲ್ಲ ಎಂದು ಅವನ ಪೋಷಕರಿಗೆ ತಿಳಿಸಿದರು.

ಬಾಲಕನಿಗೆ ಹಾಸಿಗೆಯನ್ನು ಮೀಸಲಿಡುವಂತೆ ಹಾಸನ ಆಸ್ಪತ್ರೆ ವೈದ್ಯರು ನಿಮ್ಹಾನ್ಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಆದಾಗ್ಯೂ, ಬಾಲಕನನ್ನು ದಾಖಲಿಸಿಕೊಳ್ಳಲು ನಿಮ್ಹಾನ್ಸ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಲಾಗಿತ್ತು. ಬಾಲಕನನ್ನು ತುರ್ತು ಚಿಕಿತ್ಸಾ ವಿಭಾಗದೊಳಗೆ ಕರೆದೊಯ್ದರೂ ವೈದ್ಯರು ತಕ್ಷಣ ಚಿಕಿತ್ಸೆ ಆರಂಭಿಸಿಲ್ಲ ಎಂದು ಆಂಬ್ಯುಲೆನ್ಸ್ ಚಾಲಕರು ಆರೋಪಿಸಿದ್ದಾರೆ. ಇದು ಬಾಲಕನ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ಸುದ್ದಿ ತಿಳಿದ ಮಗುವಿನ ಪೋಷಕರು ಮತ್ತು ಕುಟುಂಬ ಸದಸ್ಯರು ಆಸ್ಪತ್ರೆ ಮುಂದೆ ಗೋಳಾಡುತ್ತಲೇ ಪ್ರತಿಭಟನೆ ನಡೆಸಿದರು. ಸುದ್ದಿ ತಿಳಿದ ಸಿದ್ದಾಪುರ ಪೊಲೀಸರು ಆಸ್ಪತ್ರೆಗೆ ಧಾವಿಸಿ ನಿಮ್ಹಾನ್ಸ್ ಅಧಿಕಾರಿಗಳು ಮತ್ತು ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಬಾಲಕನ ಪೋಷಕರನ್ನು ಸಮಾಧಾನಪಡಿಸಿದರು.

ಈ ನಡುವೆ ಬಾಲಕನನ್ನು ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿತ್ತು. ತಲೆಬುರುಡೆ ಹಲವು ಕಡೆ ಮುರಿದಿತ್ತು. ಹೀಗಾಗಿ ಆತನ ಸ್ಥಿತಿ  ಗಂಭೀರವಾಗಿತ್ತು.  ಸಿಟಿ ಸ್ಕ್ಯಾನ್ ಮಾಡಿ ಬಾಲಕನನ್ನು ಉಳಿಸಲು ಪ್ರಯತ್ನಿಸಿದರೂ, ಗಾಯಗೊಂಡ 2 ಗಂಟೆಗಳ ನಂತರ ಸಾವನ್ನಪ್ಪಿದ್ದಾನೆ ಎಂದು ನಿಮ್ಹಾನ್ಸ್‌ನ ನಿವಾಸಿ ವೈದ್ಯಾಧಿಕಾರಿ ಡಾ.ಎಚ್.ಎಸ್.ಶಶಿಧರ್ ತಿಳಿಸಿದ್ದಾರೆ.

ನಿಮ್ಹಾನ್ಸ್ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಹಾಸಿಗೆಗಳು ಯಾವಾಗಲೂ ತುಂಬಿರುತ್ತವೆ. ಮಗು ಸಾವನ್ನಪ್ಪಿರುವುದು ದುರದೃಷ್ಟಕರ. ಮಗುವಿನ ದಾಖಲಾತಿಯಲ್ಲಿ ಏನಾದರೂ ವಿಳಂಬವಾಗಿದ್ದರೆ ನಾನು ನಿಮ್ಹಾನ್ಸ್ ಅಧಿಕಾರಿಗಳೊಂದಿಗೆ ಪರಿಶೀಲಿಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments