ಕೇಂದ್ರ ಸರ್ಕಾರದ ಸಮುದಾಯ ವಿರೋಧಿಯಾದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿ ಮುಸಲ್ಮಾನ ಸಮುದಾಯದವರು ದೇಶಾದ್ಯಂತ ಕಪ್ಪು ಪಟ್ಟಿ ಧರಿಸಿ ಘನತೆಯಿಂದ ಪ್ರತಿಭಟಿಸಿದ್ದಾರೆ ಎಂದು ಡಾ ಸಚಿವ ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ.
“ಶಾಸನಬದ್ಧವಾಗಿ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಎಲ್ಲ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡುವುದು ಮತ್ತು ಕಾಯ್ದೆಗಳನ್ನು ರೂಪಿಸುವಾಗ ಏಕಪಕ್ಷೀಯವಾಗಿ ನಿರ್ಧಾರ ಮಾಡದೇ ಸೂಕ್ತ ಚರ್ಚೆಗಳ ಮೂಲಕ ನಿರ್ಧಾರವನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯ” ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
“ಸಮುದಾಯಗಳ ಮೇಲಿನ ದ್ವೇಷದ ಮನಸ್ಥಿತಿಯಿಂದ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿ ವರ್ತಿಸುತ್ತಿರುವ ಕೇಂದ್ರ ಸರ್ಕಾರವು ದೇಶದ ಮೂಲ ಆಶಯವಾದ ಸಾಮರಸ್ಯವನ್ನು ಮರೆತು ವರ್ತಿಸುತ್ತಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೇಂದ್ರ ಸರ್ಕಾರವು ತನ್ನ ಸಮುದಾಯ ವಿರೋಧಿ ನೀತಿಯನ್ನು ಕೈಬಿಟ್ಟು ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾಗಿ ವರ್ತಿಸಲಿ” ಎಂದು ಆಗ್ರಹಿಸಿದ್ದಾರೆ.