Homeಕರ್ನಾಟಕವಂಚನೆ ಬಹಿರಂಗವಾಗುತ್ತಿದ್ದಂತೆ ಕೇಂದ್ರದಿಂದ ರಾಜ್ಯ ಹೆಚ್ಚುವರಿ ಅಕ್ಕಿ ಖರೀದಿಗೆ ಒಪ್ಪಿಗೆ: ಪ್ರಲ್ಹಾದ ಜೋಶಿ

ವಂಚನೆ ಬಹಿರಂಗವಾಗುತ್ತಿದ್ದಂತೆ ಕೇಂದ್ರದಿಂದ ರಾಜ್ಯ ಹೆಚ್ಚುವರಿ ಅಕ್ಕಿ ಖರೀದಿಗೆ ಒಪ್ಪಿಗೆ: ಪ್ರಲ್ಹಾದ ಜೋಶಿ

ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಈಗ ಜ್ಞಾನೋದಯ ಆಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ 10 ಕೆಜಿ ಪಡಿತರ ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 5 ಕೆಜಿ ಅಕ್ಕಿ ಬದಲು ₹34 ಹಣ ನೀಡುತ್ತಿತ್ತು. 6 ತಿಂಗಳ ಹಿಂದೆಯೇ ಕೇಂದ್ರ ಕಡಿಮೆ ಬೆಲೆಗೆ ಹೆಚ್ಚುವರಿ ಅಕ್ಕಿ ಕೊಡಲು ಸಿದ್ಧವೆಂದು ತಿಳಿಸಿದ್ದರೂ ಖರೀದಿಗೆ ಮುಂದಾಗಿರಲಿಲ್ಲ” ಎಂದರು.

ರಾಜ್ಯ ಸರ್ಕಾರ ಅಕ್ಕಿ ಕೇಳಿದಾಗ ನಮ್ಮಲ್ಲಿ ಅಕ್ಕಿ ಇರಲಿಲ್ಲ. ಹಾಗಾಗಿ ಆಗ ಬಿಜೆಪಿ ಮತ್ತು ಬಿಜೆಪಿಯೇತರ ಅಧಿಕಾರವಿದ್ದ ಎಲ್ಲಾ ಸರ್ಕಾರಗಳಿಗೂ ಹೆಚ್ಚುವರಿ ಅಕ್ಕಿಯಿಲ್ಲ ಎಂದೇ ಹೇಳಲಾಗಿತ್ತು. ಬಳಿಕ ಕೇಂದ್ರ ಸರ್ಕಾರ, ಜೂನ್ ವೇಳೆಗೆ ಹೆಚ್ಚುವರಿ ಅಕ್ಕಿ ಪೂರೈಸಲು ಸಿದ್ಧವೆಂದು ರಾಜ್ಯ ಆಹಾರ ಇಲಾಖೆ ಸಚಿವ ಮುನಿಯಪ್ಪ ಅವರಿಗೆ ತಿಳಿಸಿದರೆ, ರಾಜ್ಯ ಸರ್ಕಾರದಲ್ಲಿ ದುಡ್ಡು ಇಲ್ಲದ ಕಾರಣ ಖರೀದಿಗೆ ಮುಂದಾಗಿರಲಿಲ್ಲ” ಎಂದು ತಿಳಿಸಿದರು.

“ರಾಜ್ಯಕ್ಕೆ ಬೇಕಾದಷ್ಟು ಅಕ್ಕಿ ಲಭ್ಯವಿದೆ ಎಂದು ರಾಜ್ಯ ಸರ್ಕಾರಕ್ಕೆ ಅಧಿಕೃತ ಪತ್ರ ಬರೆದು 5 ತಿಂಗಳಾದರೂ ಪ್ರತಿಕ್ರಿಯಿಸಿರಲಿಲ್ಲ. ₹ 22.50 ಕಡಿಮೆ ಬೆಲೆ ವಿಧಿಸಿದರೂ ರಾಜ್ಯ ಸರ್ಕಾರ ಮನಸ್ಸು ಮಾಡಿರಲಿಲ್ಲ. ರಾಜ್ಯದ ಜನಕ್ಕೆ ಇತ್ತ ಹೆಚ್ಚುವರಿ 5 ಕೆಜಿ ಅಕ್ಕಿಯೂ ಇಲ್ಲ, ಬದಲಿಗೆ ಹಣವನ್ನೂ ಸರ್ಕಾರ ಜಮೆ ಮಾಡುತ್ತಿರಲಿಲ್ಲ. ವಂಚನೆ ಬಹಿರಂಗಗೊಳ್ಳುತ್ತಿದ್ದಂತೆ ಈಗ ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಖರೀದಿಗೆ ಮುಂದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಡವಾಗಿಯಾದರೂ ಜ್ಞಾನೋದಯವಾಗಿದೆ” ಎಂದು ಕುಟುಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments