ಕರ್ನಾಟಕದ ಎಲ್ಲ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ. 15ರಷ್ಟು ಏರಿಕೆ ಮಾಡಲು ಕಾಂಗ್ರೆಸ್ ಸರ್ಕಾರ ತೀರ್ಮಾನ ಮಾಡಿದ್ದು, ಅದರಂತೆ, ಜ. 4ರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ಪ್ರಸ್ತುತ ಟಿಕೆಟ್ ದರಕ್ಕಿಂತ ಅಂದಾಜು 10ರಿಂದ 20 ರೂ.ಗಳಷ್ಟು ಹೆಚ್ಚು ದರವನ್ನು ಪ್ರಯಾಣಿಕರು ಕೊಡಬೇಕಾಗುತ್ತದೆ.
ಟಿಕೆಟ್ ದರ ಏರಿಕೆ ಮಾಡುವಂತೆ ಸಾರಿಗೆ ನಿಗಮಗಳು ಇಟ್ಟಿದ್ದ ಬೇಡಿಕೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌ಕೆ ಪಾಟೀಲ್, ಬಸ್ ಪ್ರಯಾಣ ದರ ಶೇ. 15ರಷ್ಟು ಹೆಚ್ಚಳಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದರು.
ಎಸ್ ಆರ್ ಟಿಸಿಯು, ಬೆಂಗಳೂರಿನಿಂದ ಇತರ ಜಿಲ್ಲಾ ಕೇಂದ್ರಗಳಿಗೆ ಹೊರಡುವ ತನ್ನ ಬಸ್ಸುಗಳಿಗೆ ವಿಧಿಸಲಾಗುವ ಟಿಕೆಟ್ ದರದ ಪಟ್ಟಿ ಬಿಡುಗಡೆ ಮಾಡಿದೆ. ಜಿಲ್ಲಾ ಕೇಂದ್ರ, ಸ್ಥಳದ ಅಂತರ, ವೇಗಧೂತ, ಸಾಮಾನ್ಯ, ವಿಶೇಷ ಬಸ್ಸು, ಸ್ಲೀಪರ್ ಕೋಚ್ ಬಸ್ಸುಗಳ ಟಿಕೆಟ್ ದರಗಳನ್ನು ಪ್ರಕಟಿಸಿದೆ. ಪರಿಷ್ಕೃತ ದರಗಳ ಪಟ್ಟಿ ಹೀಗಿದೆ.
ಪರಿಷ್ಕೃತ ದರಗಳ ಪಟ್ಟಿ
