ಪಾಕ್ ಸೇನೆಯ ವಶದಲ್ಲಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್ ಕುಮಾರ್ ಸಾಹು ಭಾರತಕ್ಕೆ ಹಸ್ತಾಂತರವಾಗಿದ್ದಾರೆ.
ಪಾಕಿಸ್ತಾನ ಬೆಳಗ್ಗೆ 10.30 ಕ್ಕೆ ಅಟ್ಟಾರಿ ವಾಘಾ ಗಡಿಯಲ್ಲಿ ಬಿಎಸ್‌ಎಫ್ ಕಾನ್ಸ್‌ಟೇಬಲ್ ಪೂರ್ಣಮ್ ಕುಮಾರ್ ಶಾ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ. ಪಾಕಿಸ್ತಾನ ರೇಂಜರ್‌ಗಳೊಂದಿಗೆ ನಿಯಮಿತ ಧ್ವಜ ಸಭೆ, ಸಾಕಷ್ಟು ಮಾತುಕತೆ ಹಾಗೂ ನಿರಂತರ ಪ್ರಯತ್ನಗಳಿಂದಾಗಿ ಕಾನ್ಸ್‌ಟೇಬಲ್ ಪೂರ್ಣಮ್ ಕುಮಾರ್ ಅವರನ್ನು ವಾಪಸ್ ಕರೆತರುವುದು ಸಾಧ್ಯವಾಗಿದೆ ಎಂದು ಬಿಎಸ್‌ಎಫ್ ತಿಳಿಸಿದೆ.
ಏಪ್ರಿಲ್ 23 ರಂದು ಆಕಸ್ಮಿಕವಾಗಿ ಪಾಕ್ ಗಡಿಯೊಳಗೆ ಪ್ರವೇಶಿಸಿದ ನಂತರ ಸಾಹು 20 ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದರು. ಡಿಜಿಎಂಒ ಮಟ್ಟದ ಮಾತುಕತೆಯ ನಂತರ ಬಿಡುಗಡೆ ಮಾಡುವವರೆಗೂ ಅವರನ್ನು ಪಾಕಿಸ್ತಾನಿ ರೇಂಜರ್‌ಗಳು ವಶಕ್ಕೆ ತೆಗೆದುಕೊಂಡಿದ್ದರು. ಸಾಹು ಪ್ರಸ್ತುತ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದು, ಮನೆಗೆ ಮರಳಲು ಅವಕಾಶ ನೀಡುವ ಮೊದಲು ಬಿಎಸ್‌ಎಫ್‌ನ ವಿಚಾರಣೆಗೆ ಒಳಗಾಗಲಿದ್ದಾರೆ.