ಕರ್ನಾಟಕದ ಬಿಜೆಪಿ ಸಂಸದರು ಖಾಲಿ ಟ್ರಂಕ್ ಹಿಡಿದು ಪ್ರಧಾನಿ ಕಚೇರಿಯ ಬಾಗಿಲಿಗೆ ಹೋಗಬೇಕಿತ್ತು, ದಾರಿ ತಪ್ಪಿ ಬೆಂಗಳೂರಿನ ಮೆಟ್ರೋ ಸ್ಟೇಶನ್ ಬಾಗಿಲಿಗೆ ಬಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಂಸದ ತೇಜಸ್ವಿ ಸೂರ್ಯ ಅವರನ್ನು ಲೇವಡಿ ಮಾಡಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದೆಕೊಂಡಿರುವ ಅವರು, “ಖಾಲಿ ಟ್ರಂಕಿನಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ತುಂಬಿಸಿಕೊಂಡು ಬರುವುದಕ್ಕೆ ಸಾಕಷ್ಟು ವಿಷಯಗಳಿವೆ” ಎಂದಿದ್ದಾರೆ.
◆ ಕೇಂದ್ರ ಸರ್ಕಾರ ಭದ್ರ ಮೇಲ್ದಂಡೆ ಯೋಜನೆಯ ಅನುದಾನ.
◆ ಮಹದಾಯಿ ನೀರಾವರಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆಯ ಅನುಮತಿ
◆ ಕೃಷ್ಣ ಮೇಲ್ದಂಡೆ 3ನೇ ಹಂತದ ಯೋಜನೆಗೆ ಕೇಂದ್ರದ ಅಧಿಸೂಚನೆ.
◆ 15ನೇ ಹಣಕಾಸು ಆಯೋಗದ ಅನುದಾನ.
◆ ಜಲಜೀವನ್ ಮಿಷನ್ ಯೋಜನೆಯಲ್ಲಿ ಬಾಕಿ ಉಳಿಸಿಕೊಂಡ 13,000 ಕೋಟಿ
◆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಮ್ಯಾಚಿಂಗ್ ಗ್ರಾಂಟ್
◆ ನೆರೆ ಮತ್ತು ಬರ ಪರಿಹಾರಗಳ ಬಾಕಿ ಮೊತ್ತ
◆ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಘೋಷಣೆಯಾಗಿದ್ದ ಅನುದಾನ.
ಬಿಜೆಪಿ ಸಂಸದರು ದೆಹಲಿಗೆ ಖಾಲಿ ಟ್ರಂಕ್ ತೆಗೆದುಕೊಂಡು ಹೋಗಿ, ತುಂಬಿದ ಟ್ರಂಕ್ ನೊಂದಿಗೆ ವಾಪಸ್ ಬರಲಿ, ಆಗ ಇವರು ಸಂಸದರಾಗಿದ್ದಕ್ಕೂ ಅರ್ಥ ಬರಲಿದೆ ಎಂದಿದ್ದಾರೆ.


