Homeಕರ್ನಾಟಕಬಿಜೆಪಿ ಶಾಸಕ ಮುನಿರತ್ನ ಜೀವ ಬೆದರಿಕೆ ಹಾಕಿದ್ದಾರೆ: ಗುತ್ತಿಗೆದಾರ ಚೆಲುವರಾಜು ಆರೋಪ

ಬಿಜೆಪಿ ಶಾಸಕ ಮುನಿರತ್ನ ಜೀವ ಬೆದರಿಕೆ ಹಾಕಿದ್ದಾರೆ: ಗುತ್ತಿಗೆದಾರ ಚೆಲುವರಾಜು ಆರೋಪ

ಹಣ ವಸೂಲಿ ಮಾಡಲು ಜಾತಿ ನಿಂದನೆ ಮಾಡಿ, ಹೆಂಡತಿ ಮತ್ತು ತಾಯಿ ಬಗ್ಗೆ ಅತ್ಯಂತ ಅಶ್ಲೀಲ ಭಾಷೆಯಲ್ಲಿ ನಿಂದಿಸಿ ತಮಗೆ ಜೀವ ಬೆದರಿಕೆಯೊಡ್ಡಿದ್ದಾರೆ ಬಿಜೆಪಿ ಶಾಸಕ ಮುನಿರತ್ನ ಮತ್ತು ಅವರ ಆಪ್ತ ವಸಂತ್ ಕುಮಾರ್ ವಿರುದ್ಧ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಮುನಿರತ್ನ ಮಾತನಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ರೇಣುಕಸ್ವಾಮಿ ರೀತಿಯಲ್ಲೇ ನಿನ್ನ ಕೊಲೆ ಮಾಡುತ್ತೇವೆ ಎಂದು ಹೆದರಿಸಿದ್ದಾರೆ. ಮುಂದೆ ನಾನು‌ ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ” ಎಂದಿದ್ದಾರೆ.

“ನನ್ನ ಜಾತಿ ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ಹೆಂಡತಿ ಫೋಟೋ ತೋರಿಸು ಹೇಗಿದ್ದಾಳೆ ಎಂದಿದ್ದಾರೆ. ಅಷ್ಟೇ ಅಲ್ಲ ಮುನಿರತ್ನ ನನ್ನ ಹೆಂಡತಿಯನ್ನು ಮಂಚಕ್ಕೆ ಕರೆದಿದ್ದಾರೆ. ನನ್ನ ತಾಯಿಯ ಬಗ್ಗೆ ಅಸಹ್ಯವಾಗಿ ಮಾತಾಡಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

“ನಾನು ಪೌರ ಕಾರ್ಮಿಕನಾಗಿ, ಲಾರಿ ಕ್ಲೀನರ್,‌ ಡ್ರೈವರ್ ಆಗಿ ಕೆಲಸ ಮಾಡಿ, ಈಗ ವಾರ್ಡ್ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಾಸಕ ಮುನಿರತ್ನ ಮತ್ತು ಪಿಎ ವಿ ಜಿ ಕುಮಾರ್ ಫೋನ್ ಮಾಡಿ, ನನಗೆ ತಿಳಿಯದೇ ಆರ್ಡರ್‌ ಮಾಡಿಸ್ತೀಯಾ ಎಂದು ಹೆದರಿಸುತ್ತಾರೆ. 36 ಲಕ್ಷ ಕೊಡು ಎಂದಿದ್ದರು. ನಾನು15 ಲಕ್ಷ ಕೊಡುವೆ ಎಂದಿದ್ದೆ. ಆದರೆ ನನಗೆ ಅಷ್ಟು ಹಣ ಕೊಡಲಾಗಲಿಲ್ಲ” ಎಂದು ಹೇಳಿದ್ದಾರೆ.

“ನೀನು ಹಣ ಕೊಡಲಿಲ್ಲ ಅಂದ್ರೆ ರೇಣುಕಸ್ವಾಮಿ ತರ ನಿನಗೂ ಆಗುತ್ತೆ ಎಂದು ಭಯಪಡಿಸಿದ್ದಾರೆ. ಮುನಿರತ್ನ ನನ್ನನ್ನು ಏನಾದ್ರೂ ಮಾಡಬಹುದು. ನನ್ನ ಜೀವಕ್ಕೆ ಅಪಾಯವಿದೆ. ಈ ಬಗ್ಗೆ ಸಿಎಂ, ಗೃಹ ಸಚಿವ, ಪೊಲೀಸ್ ಕಮಿಷನರ್ ಅವರಿಗೆ ದೂರು ಕೊಡುವೆ” ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments