ದೇವರಾಜೇಗೌಡ ಪ್ರಕರಣ ನೋಡಿದರೆ ಬಿಜೆಪಿ ಎಂಬ ಅನೈತಿಕ ರಾಜಕೀಯ ಪಕ್ಷಕ್ಕೆ ಕನಿಷ್ಠ ನೈತಿಕ ಪ್ರಜ್ಞೆ ಇಲ್ಲದಿರುವುದು ರಾಜಕೀಯ ಕ್ಷೇತ್ರಕ್ಕೆ ಕಳಂಕದಂತಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಮಹಿಳಾ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರ ವಶಕ್ಕೆ ಒಳಗಾಗಿರುವ ದೇವರಾಜೇಗೌಡ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿ, “ದೇವರಾಜೇಗೌಡನ ಮಾತುಗಳ ಸ್ಕ್ರೀಪ್ಟ್ , ಡೈರೆಕ್ಷನ್ ಎಲ್ಲವೂ ಬಿಜೆಪಿ ಹೈಕಮಾಂಡಿನದ್ದು ಎಂದು ಬಹಿರಂಗವಾಗಿದೆ” ಎಂದಿದೆ.
“ದೇವರಾಜೇಗೌಡ ಏಕಾಏಕಿ ಪತ್ರಿಕಾಗೋಷ್ಠಿ ನಡೆಸಿ ಪೆನ್ ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರನ್ನು ಎಳೆದು ತಂದಾಗಲೇ ಇಲ್ಲೇನೋ ಮಸಲತ್ತಿದೆ ಎಂಬ ಗುಮಾನಿ ದಟ್ಟವಾಗಿತ್ತು” ಎಂದು ಹೇಳಿದೆ.
“ಒಂದೇ ಏಟಿನಲ್ಲಿ ಜೆಡಿಎಸ್ ಪಕ್ಷವನ್ನು ಮುಳುಗಿಸುವುದರ ಜೊತೆಗೆ ಕಾಂಗ್ರೆಸ್ ನಾಯಕರನ್ನೂ ಟಾರ್ಗೆಟ್ ಮಾಡುವ ಮಹಾ ಕುತಂತ್ರ ಅಮಿತ್ ಶಾ ಅವರದ್ದು, ಆದರೆ ಕಾಂಗ್ರೆಸ್ ನಾಯಕರ ಕೂದಲು ಕೊಂಕಿಸಲು ಅಸಾಧ್ಯದ ಮಾತು ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು” ಎಂದು .
“ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದ ಹಿಂದೆ ಬಿಜೆಪಿ ಹಾಗೂ ಬ್ರದರ್ ಸ್ವಾಮಿಯ ಬಹುದೊಡ್ಡ ಷಡ್ಯಂತ್ರ ಅಡಗಿದೆ” ಎಂದು ಕಾಂಗ್ರೆಸ್ ದೂರಿದೆ.