Homeಕರ್ನಾಟಕಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಮುಚ್ಚಲು ಸರ್ಕಾರದಿಂದ 'ಚಕ್ರವ್ಯೂಹ': ಬಿಜೆಪಿ ಆರೋಪ

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ ಮುಚ್ಚಲು ಸರ್ಕಾರದಿಂದ ‘ಚಕ್ರವ್ಯೂಹ’: ಬಿಜೆಪಿ ಆರೋಪ

ಟಿ. ನರಸೀಪುರದ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮಕ್ಕೆ (KSIC) ಸೇರಿದ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಕೈಬಿಡಲಾಗುವುದು ಎಂದು ರೇಷ್ಮೆ ಸಚಿವ ಕೆ ವೆಂಕಟೇಶ್ ಅವರು ಮಾರ್ಚ್ 9ರಂದು ವಿಧಾನಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದರು. ಆದರೆ, ಈ ಘೋಷಣೆಯ ಬೆನ್ನಲ್ಲೇ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಬಿಜೆಪಿ ಹೇಳಿದೆ.

ಸಚಿವರ ಘೋಷಣೆ ಕೇವಲ ಕಣ್ಣೊರೆಸುವ ತಂತ್ರವೇ? ಸಚಿವರು ಸದನದಲ್ಲಿ ಭರವಸೆ ನೀಡಿದ ಮರುದಿನವೇ (ಮಾರ್ಚ್ 10), ಮುಖ್ಯಮಂತ್ರಿಗಳ ಕ್ಷೇತ್ರವಾದ ವರುಣಾದ ಪ್ರಭಾವಿ ನಾಯಕರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದಾರೆ. KSIC ಘಟಕವು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬುದು ಅವರ ಆರೋಪ ಎಂದು ಎಕ್ಸ್ ತಾಣದಲ್ಲಿ ಬರೆದುಕೊಂಡದೆ.

ಏನಿದು ವ್ಯವಸ್ಥಿತ ಸಂಚು?

KSIC ಸಂಸ್ಥೆಯನ್ನು ಹಂತ-ಹಂತವಾಗಿ ಮುಚ್ಚಲು ಸರ್ಕಾರ ಒಂದು ‘ಚಕ್ರವ್ಯೂಹ’ ರಚಿಸಿದಂತೆ ಕಾಣುತ್ತಿದೆ.

ETP ಅವಶ್ಯಕತೆ: ಕಾರ್ಖಾನೆಯ ತ್ಯಾಜ್ಯ ಸಂಸ್ಕರಣಾ ಘಟಕ (ETP) ಸ್ಥಾಪಿಸಲು ಆ 5 ಎಕರೆ ಭೂಮಿ ಅತ್ಯಗತ್ಯ ಎಂದು ತಾಂತ್ರಿಕ ವರದಿ ಹೇಳಿತ್ತು.

ಭೂಮಿ ಹಸ್ತಾಂತರ: ಇಷ್ಟಿದ್ದರೂ ಸರ್ಕಾರ ಹಠಕ್ಕೆ ಬಿದ್ದು ಅದೇ ಜಾಗವನ್ನು ಕ್ರೀಡಾಂಗಣಕ್ಕೆ ನೀಡಲು ಮುಂದಾಯಿತು ಎಂದು ವಿವರಿಸಿದೆ.

ಆದೇಶ ವಿಳಂಬ: ಕ್ರೀಡಾಂಗಣ ಯೋಜನೆ ಕೈಬಿಡುವುದಾಗಿ ಸದನದಲ್ಲಿ ಹೇಳಿದರೂ, ಆ ಭೂಮಿಯನ್ನು ಕ್ರೀಡಾ ಇಲಾಖೆಯಿಂದ ಮತ್ತೆ KSIC ಗೆ ವಾಪಸ್ ನೀಡುವ ಅಧಿಕೃತ ಆದೇಶವನ್ನು ಸರ್ಕಾರ ವಿಳಂಬ ಮಾಡುತ್ತಿದೆ.

ನೋಟಿಸ್ ಅಸ್ತ್ರ: ಇನ್ನೊಂದೆಡೆ, ETP ಘಟಕ ಇಲ್ಲ ಎಂಬ ಕಾರಣ ನೀಡಿ ಕಾರ್ಖಾನೆಯನ್ನು ಮುಚ್ಚುವಂತೆ ನೋಟಿಸ್ ಕೊಡಿಸಲಾಗುತ್ತಿದೆ!

ಮೊದಲು ಜಾಗ ಕಿತ್ತುಕೊಳ್ಳುವುದು, ನಂತರ ಅದೇ ಜಾಗ ಇಲ್ಲದ ಕಾರಣಕ್ಕೆ ನಿಯಮ ಉಲ್ಲಂಘನೆಯ ನೆಪ ಹೂಡಿ ಕಾರ್ಖಾನೆಗೆ ಬೀಗ ಜಡಿಯುವುದು – ಇದು ಆಡಳಿತವೋ ಅಥವಾ ಭೂ ಮಾಫಿಯಾದ ಪರವಾದ ಸಂಚೋ?

ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬೇಡಿ!

ಸಾವಿರಾರು ಕುಟುಂಬಗಳು ಕೆ.ಎಸ್.ಐ.ಸಿ ನಂಬಿ ಬದುಕುತ್ತಿವೆ. ವಿಶ್ವವಿಖ್ಯಾತ ‘ಮೈಸೂರು ಸಿಲ್ಕ್’ ಬ್ರ್ಯಾಂಡ್ ಕರ್ನಾಟಕದ ಹೆಮ್ಮೆ. ರಾಜಕೀಯ ಲಾಭಕ್ಕಾಗಿ ಮತ್ತು ಭೂ ಕಬಳಿಕೆಗಾಗಿ ಇಂತಹ ಐತಿಹಾಸಿಕ ಸಂಸ್ಥೆಯನ್ನು ಬಲಿ ಕೊಡುವುದು ಅಕ್ಷಮ್ಯ ಅಪರಾಧ. ರಾಹುಲ್ ಗಾಂಧಿ ಯವರೇ, ಇದೇನಾ ನೀವು ಹೇಳುವ “ನ್ಯಾಯ”? ಕರ್ನಾಟಕದಲ್ಲಿ ನಿಮ್ಮ ಸರ್ಕಾರ ‘ಲ್ಯಾಂಡ್ ಗ್ರ್ಯಾಬ್ ಸರ್ಕಾರ’ವಾಗಿ ಬದಲಾಗಿದೆಯೇ? ಮೈಸೂರು ರೇಷ್ಮೆಯ ಘನತೆಯನ್ನು ಮಣ್ಣುಪಾಲು ಮಾಡಬೇಡಿ ಎಂದು ಆಗ್ರಹಿಸಿದೆ.

ನಮ್ಮ ಆಗ್ರಹ:
◾ಕೂಡಲೇ KSIC ಭೂಮಿಯನ್ನು ಮರು ಹಸ್ತಾಂತರಿಸುವ ಆದೇಶ ಹೊರಡಿಸಿ.

◾ETP ಘಟಕ ಸ್ಥಾಪನೆಗೆ ಅಗತ್ಯ ಅನುದಾನ ಮತ್ತು ಸಹಕಾರ ನೀಡಿ.

◾ಮೈಸೂರು ಸಿಲ್ಕ್ ಪರಂಪರೆಯನ್ನು ರಕ್ಷಿಸಿ

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments