Homeದೇಶಬಿಹಾರ ಯುವ ಸಂಸದೆ ಶಾಂಭವಿ ಮಾದರಿ ನಿರ್ಧಾರ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಐದೂ ವರ್ಷದ...

ಬಿಹಾರ ಯುವ ಸಂಸದೆ ಶಾಂಭವಿ ಮಾದರಿ ನಿರ್ಧಾರ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಮ್ಮ ಐದೂ ವರ್ಷದ ಸಂಬಳ ಮೀಸಲು

ಬಿಹಾರ ಲೋಕಸಭೆಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎನಿಸಿಕೊಂಡು ಗಮನ ಸೆಳೆದಿರುವ ಸಂಸದೆ ಶಾಂಭವಿ ಚೌಧರಿ ಅವರು ತಮ್ಮ ಐದು ವರ್ಷದ ಸಂಬಳವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುತ್ತೇನೆ ಎಂದು ಘೋಷಿಸಿದ್ದಾರೆ.

26 ವರ್ಷದ ಶಾಂಭವಿ ಚೌಧರಿ ಅವರು ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿಯಿಂದ ಬಿಹಾರದ ಸಮಸ್ಥಿಪುರದ ಸಂಸದೆಯಾಗಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರದಲ್ಲಿ ಸಚಿವರಾಗಿರುವ ಅಶೋಕ್ ಚೌಧರಿ ಅವರ ಮಗಳೇ ಈ ಶಾಂಭವಿ. ಕಳೆದ ಲೋಕಸಭಾ ಚುನಾವಣೆಯಲ್ಲಿ 1.87 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ, ಜಯ ಸಾಧಿಸಿದ್ದರು.

“ಶಿಕ್ಷಣದಿಂದ ಸಮಸ್ಥಿಪುರದ ಅಭಿವೃದ್ಧಿ ಸಾಧ್ಯ. ಇದಕ್ಕಾಗಿ ಹಣಕಾಸಿನ ಅಡಚಣೆಯಿಂದ ಶಿಕ್ಷಣವನ್ನು ಮೊಟಕುಗೊಳಿಸಲು ಅಣಿಯಾಗುವ ಹೆಣ್ಣುಮಕ್ಕಳ ಸಹಾಯಕ್ಕಾಗಿ ನಾನು ನಿಲ್ಲುತ್ತೇನೆ. ಸಂಸದೆಯಾಗಿ ನಾನು ಪಡೆಯುವ ಐದೂ ವರ್ಷದ ಸಂಬಳವನ್ನು ಇದಕ್ಕಾಗಿ ಮೀಸಲಿಡುತ್ತೇನೆ” ಎಂದು ತಿಳಿಸಿದ್ದಾರೆ.

ಸಮಸ್ಥಿಪುರವನ್ನು ಬಿಹಾರ ಸರ್ಕಾರ ಇತ್ತೀಚೆಗೆ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಿದೆ. ಈಗ ಶಾಂಭವಿ ಚೌಧರಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಶಾಂಭವಿ ಅವರ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments